ಉದ್ಯೋಗ ಸೃಷ್ಟಿ-ಆರ್ಥಿಕ ಪುನಶ್ಚೇತನಕ್ಕಾಗಿ ಹೊಸ ಪ್ಯಾಕೇಜ್ ಘೋಷಿಸಲಿರುವ ಕೇಂದ್ರ ಸರ್ಕಾರ
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ತೀವ್ರವಾಗಿ ಕುಸಿದಿದೆ. ಜಿಡಿಪಿ ಮೌಲ್ಯ ಶೇ.-23.9 ರಷ್ಟು ಋಣಾತ್ಮಕವಾಗಿ ಕುಸಿತ ಕಂಡಿತ್ತು. ಇದು ಜಿ-20 ದೇಶಗಳ ಒಕ್ಕೂಟದ ಪೈಕಿ ಅತ್ಯಂತ ಕೆಟ್ಟ ಆರ್ಥಿಕತೆ ಎಂದು ಗುರುತಿಸಲಾಗಿದೆ. ಹೀಗಾಗಿ ಸರ್ಕಾರ ಸಮಾಜದಲ್ಲಿ ಖರ್ಚುಗಳನ್ನು ಹೆಚ್ಚು ಮಾಡುವ ಮೂಲಕ ಆರ್ಥಿಕತೆಗೆ ಪುನಶ್ಚೇತನ ನೀಡಲು ಕರೆ ನೀಡಿದೆ ಎನ್ನಲಾಗುತ್ತಿದೆ.
ನವ ದೆಹಲಿ (ಸೆಪ್ಟೆಂಬರ್ 25); ಕೊರೋನಾ ದಾಳಿಯಿಂದಾಗಿ ಭಾರತದ ಆರ್ಥಿಕತೆ ತೀವ್ರವಾಗಿ ಕುಸಿತ ಕಂಡಿದೆ. ಜಿಡಿಪಿ ಸಂಖ್ಯೆ ಇತಿಹಾಸ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ. ಪರಿಣಾಮ ದೇಶದ ಉತ್ಪಾದನಾ ಕ್ಷೇತ್ರ ಸಂಪೂರ್ಣವಾಗಿ ನಷ್ಟ ಅನುಭವಿಸಿದೆ. ಅನೇಕ ಉದ್ಯಮಗಳು ನಷ್ಟವನ್ನು ಭರಿಸಲಾಗದೆ ಈಗಾಗಲೇ ಬಾಗಿಲು ಎಳೆದುಕೊಂಡಿವೆ. ಹೀಗಾಗಿ ಕೋಟ್ಯಾಂತರ ಯುವ ಜನ ಸಮೂಹ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿ ಬೀದಿಗೆ ಬಿದ್ದಿದ್ದಾರೆ. ಕಳೆದ 44 ವರ್ಷದಲ್ಲಿ ಭಾರತದ ಇತಿಹಾಸ ಕಂಡು ಕೇಳರಿಯದ ಮಟ್ಟಿಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ ಎನ್ನುತ್ತಿವೆ ವರದಿಗಳು. ಕೆಲಸಕ್ಕಾಗಿ ಯುವಕರ ದೇಶದ ನಾನಾ ಮೂಲೆಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಪ್ರತಿಭಟನೆಗಳನ್ನು ನಡೆಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕೊರೋನಾ ಸಂದರ್ಭದಲ್ಲಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿತ್ತು. ಆದರೆ, ಇದೀಗ ಮತ್ತೆ ಹಬ್ಬದ ಋತು ಆರಂಭವಾಗಿರುವ ಕಾರಣ ಬೇಡಿಕೆ ಹೆಚ್ಚಿಸಿ, ಉತ್ಪಾದನಾ ಕ್ಷೇತ್ರಕ್ಕೆ ಚುರುಕು ಮುಟ್ಟಿಸುವ ಆ ಮೂಲಕ ಆರ್ಥಿಕತೆಯನ್ನು ಉತ್ತಮಗೊಳಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಪ್ರಚೋದಕ ಕ್ರಮಗಳನ್ನು ವಿಶೇಷ ಪ್ಯಾಕೇಜ್ಗಳನ್ನು ಘೋಷಿಸಲಿದೆ ಎನ್ನಲಾಗುತ್ತಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ತೀವ್ರವಾಗಿ ಕುಸಿದಿದೆ. ಜಿಡಿಪಿ ಮೌಲ್ಯ ಶೇ.-23.9 ರಷ್ಟು ಋಣಾತ್ಮಕವಾಗಿ ಕುಸಿತ ಕಂಡಿತ್ತು. ಇದು ಜಿ-20 ದೇಶಗಳ ಒಕ್ಕೂಟದ ಪೈಕಿ ಅತ್ಯಂತ ಕೆಟ್ಟ ಆರ್ಥಿಕತೆ ಎಂದು ಗುರುತಿಸಲಾಗಿದೆ. ಹೀಗಾಗಿ ಸರ್ಕಾರ ಸಮಾಜದಲ್ಲಿ ಖರ್ಚುಗಳನ್ನು ಹೆಚ್ಚು ಮಾಡುವ ಮೂಲಕ ಆರ್ಥಿಕತೆಗೆ ಪುನಶ್ಚೇತನ ನೀಡಲು ಕರೆ ನೀಡಿದೆ ಎನ್ನಲಾಗುತ್ತಿದೆ.
ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಲಿರುವ ಹೊಸ ಪ್ರಚೋದಕ ಕ್ರಮಗಳು ಅಥವಾ ವಿಶೇಷ ಪ್ಯಾಕೇಜ್ಗಳು ಹಳೆಯ ಎರಡು ವಿಶೇಷ ಪ್ಯಾಕೇಜ್ಗಳಿಗಿಂತ ಭಿನ್ನವಾಗಿರಲಿದೆ. ಈ ಪ್ಯಾಕೇಜ್ನಲ್ಲಿ ಜನರು ಹಣಕಾಸಿನ ನೇರ ವಿನಿಯೋಗವನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರ ಪಿಎಂ ಗರಿಬ್ ಕಲ್ಯಾಣ್ ಪ್ಯಾಕೇಜ್ ಮತ್ತು ಆತ್ಮನಿರ್ಭಾರ ಭಾರತ್ ಪ್ಯಾಕೇಜ್ ಎಂಬ ಎರಡು ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು
ಈ ಹೊಸ ಪ್ಯಾಕೇಜ್ನಲ್ಲಿ ನಗರ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗೆ 35,000 ಕೋಟಿ. ಈ ವರ್ಷ ಪೂರ್ಣಗೊಳ್ಳಬಹುದಾದ 20-25 ದೊಡ್ಡ ಯೋಜನೆಗಳಿಗೆ ಒತ್ತು ನೀಡುವ ಬೃಹತ್ ಮೂಲಸೌಕರ್ಯ ಉಪಕ್ರಮ ಮತ್ತು ಗ್ರಾಮೀಣ ಉದ್ಯೋಗಗಳು, ಕೃಷಿ ಯೋಜನೆಗಳು, ಉಚಿತ ಆಹಾರ ಮತ್ತು ನಗದು ವರ್ಗಾವಣೆಯತ್ತ ಗಮನ ಹರಿಸಬಹುದು. ಆದರೂ ಇದತ ಮೂಲ ಉದ್ದೇಶ ಉದ್ಯೋಗ ಸೃಷ್ಟಿ ಎಂದು ಮನಿಕಂಟ್ರೋಲ್ ತಿಳಿಸಿದೆ.
ಈ ವರ್ಷದ ಹಬ್ಬದ ಋತುಮಾನ ಅಕ್ಟೋಬರ್ ಮೂರನೇ ವಾರದಿಂದ ಪ್ರಾರಂಭವಾಗಲಿದೆ. ಹೀಗಾಗಿ ಹಬ್ಬಗಳು ಆರಂಭವಾಗುವ ಮೊದಲು ಕೇಂದ್ರ ಸರ್ಕಾರ ಹೊಸ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಮನಿಕಂಟ್ರೋಲ್ಗೆ ತಿಳಿಸಿದ್ದಾರೆ.
ಭಾರತದ ಆರ್ಥಿಕತೆಗಿಂತಲೂ ದೇಶದಲ್ಲಿ ಖಾಸಗಿ ಗ್ರಾಹಕ ಖರ್ಚು ಅಧಿಕ. ಕೊರೋನಾ ಕಾಲದಲ್ಲಿ ಈ ಖರ್ಚು ಶೇ.27 ರಷ್ಟು ಕಡಿಮೆಯಾಗಿರುವುದರಿಂದಲೇ ಆರ್ಧಿಕತೆ ಕುಸಿದಿದೆ. ಆದರೆ, ಹಬ್ಬದ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ಗಳನ್ನು ಘೋಷಣೆ ಮಾಡುವ ಮೂಲಕ ಇದನ್ನು ಹೆಚ್ಚಿಸಬಹುದು ಎಂದು ಸರ್ಕಾರ ಭಾವಿಸಿದೆ. ನಾಲ್ಕು ಮತ್ತು ದ್ವಿಚಕ್ರ ವಾಹನ ತಯಾರಕ ಕಂಪೆನಿಗಳು ಮತ್ತು ಗ್ರಾಹಕರಿಗೆ ಅಗತ್ಯವಾದ ಉಪಕರಣಗಳ ತಯಾರಕ ಕಂಪೆನಿಗಳಿಗೆ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕವು ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಲಾಗುತ್ತಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ