GC Murmu: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​​ ಗಿರೀಶ್​ ಚಂದ್ರ ಮುರ್ಮು ರಾಜೀನಾಮೆ

ಕಳೆದ ವರ್ಷ ಅಕ್ಟೋಬರ್​​ 25ನೇ ತಾರೀಕಿನಂದು ನೂತನ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ಐಎಎಸ್ ಅಧಿಕಾರಿ ಗಿರೀಶ್ ಚಂದ್ರ ಮುರ್ಮು ನೇಮಕವಾಗಿದ್ದರು.

news18-kannada
Updated:August 5, 2020, 11:08 PM IST
GC Murmu: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​​ ಗಿರೀಶ್​ ಚಂದ್ರ ಮುರ್ಮು ರಾಜೀನಾಮೆ
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​​ ಗಿರೀಶ್​ ಚಂದ್ರ ಮುರ್ಮು ರಾಜೀನಾಮೆ
  • Share this:
ನವದೆಹಲಿ(ಆ.05): ಮಹತ್ವದ ಬೆಳವಣಿಗೆಯಲ್ಲಿ ನೂತನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಿರೀಶ್‌ ಚಂದ್ರ ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ರಾಜೀವ್ ಮೆಹರಿಶಿ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಮಂದಿನ ಸಿಎಜಿ ತಾವೇ ಆಗಿರುವುದರಿಂದ ಗಿರೀಶ್​​​ ಚಂದ್ರ ಮುರ್ಮು ರಾಜೀನಾಮೆ ನೀಡಿದ್ಧಾರೆ ಎನ್ನುತ್ತಿವೆ ಮೂಲಗಳು.

ಗಿರೀಶ್​​​ ಚಂದ್ರ ಮುರ್ಮು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರಿಗೆ ರವಾನಿಸಿದ್ದಾರೆ. ಆದರೆ, ಇನ್ನೂ ರಾಮನಾಥ್​ ಕೋವಿಂದ್ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​​​ ಗಿರೀಶ್​ ಚಂದ್ರ ಮುರ್ಮು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿಲ್ಲ ಎನ್ನಲಾಗುತ್ತಿದೆ.

ಕಳೆದ ವರ್ಷ ಅಕ್ಟೋಬರ್​​ 25ನೇ ತಾರೀಕಿನಂದು ನೂತನ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ಐಎಎಸ್ ಅಧಿಕಾರಿ ಗಿರೀಶ್ ಚಂದ್ರ ಮುರ್ಮು ನೇಮಕವಾಗಿದ್ದರು.

ಇದನ್ನೂ ಓದಿ: ಸುಶಾಂತ್‌ ಸಿಂಗ್ ರಜಪೂತ್‌ ಪ್ರಕರಣ; ಆಗಸ್ಟ್‌ 7ರಂದು ವಿಚಾರಣೆಗೆ ಹಾಜರಾಗಲು ರಿಯಾ ಚಕ್ರವರ್ತಿಗೆ ಇಡಿ ಸಮನ್ಸ್‌

1985ರ ಬ್ಯಾಚ್​ನ ಗುಜರಾತ್ ಕೇಡರ್ ಅಧಿಕಾರಿಯಾಗಿದ್ದ ಮುರ್ಮು ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಎಕ್ಸ್ಪೆಂಡಿಚರ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
Published by: Ganesh Nachikethu
First published: August 5, 2020, 11:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading