ಬಿಹಾರ: ಬಿಹಾರದಲ್ಲಿ (Bihar) ನಿತೀಶ್ ಕುಮಾರ್ (Nitish Kumar) ನೇತೃತ್ವದ ಸರ್ಕಾರವು ಮದ್ಯ (Alcohol) ನಿಷೇಧಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಕೂಡ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದೆ. ಅದರಲ್ಲಿಯೂ ಬಿಹಾರದ ಗಯಾ (Gaya) ಜಿಲ್ಲೆಯಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿಯೇ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಲಿಕ್ಕರ್ ಮಾಫಿಯಾ ಬಗ್ಗೆ ಮಾಹಿತಿ ದೊರೆತ ಗುರು ಪೊಲೀಸ್ ಠಾಣೆಯ (Gurua Police Station) ಸಬ್ ಇನ್ಸ್‌ಪೆಕ್ಟರ್ ಕನ್ಹಯ್ಯ ಕುಮಾರ್ ಸಾರಥ್ಯದ ತಂಡ ಗಯಾ ಜಿಲ್ಲೆಯ ಗ್ರಾಮವೊಂದರ ಮೇಲೆ ದಾಳಿ ನಡೆಸಿತು.
ಆರೋಪಿ ಮನೆಯಲ್ಲಿತ್ತು ಮಾತನಾಡುವ ಗಿಳಿ
ಲಿಕ್ಕರ್ ಮಾಫಿಯಾದ ಕಿಂಗ್ ಪಿನ್ ಅಮ್ರಿತ್ ಮೊಲ್ಲಾ ಎಂಬಾತನನ್ನು ಬಂಧಿಸಲು ದಾಳಿ ನಡೆಸಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಅಮಿತ್ ಮೊಲ್ಲಾ ಕಾಲ್ಕೆತ್ತಿದ್ದಾನೆ. ಹೀಗಿದ್ದರೂ, ಪೊಲೀಸರು ಆರೋಪಿ ಮನೆ ಮೇಲೆ ದಾಳಿ ನಡೆಸಿದರು. ಈ ವೇಳೆ ಆತನ ಮನೆಯಲ್ಲಿ ಯೂರು ಕೂಡ ಇರಲಿಲ್ಲ. ಕುಟುಂಬ ಸಮೇತ ಎಸ್ಕೇಪ್ ಆಗಿದ್ದ. ಆದರೆ ಆರೋಪಿ ಮನೆಯಲ್ಲಿ ಮಾತನಾಡುವ ಗಿಳಿಯನ್ನು ಸಾಕಿದ್ದ. ಪರಿಶೀಲನೆ ವೇಳೆ ಈ ಗಿಳಿ ಸಾಕಷ್ಟು ಸದ್ದು ಮಾಡುತ್ತಿತ್ತು. ಪೊಲೀಸರ ಗಮನವನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿತ್ತು.
ಗಿಳಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸ್ರು
ನಂತರ ಕಣ್ಣಿಗೆ ಬಿದ್ದ ಗಿಳಿಯನ್ನು ಪೊಲೀಸರು ಮಾತನಾಡಿಸಲು ಯತ್ನಿಸಿ, ನಂತರ ವಿಚಾರಣೆಗೆ ಒಳಪಡಿಸಿದರು. ಹೇ ಗಿಳಿ ನಿನ್ನ ಮಾಲೀಕ ಎಲ್ಲಿ ಹೋದ? ಅಮ್ರಿತ್ ಮೊಲ್ಲಾ ಎಲ್ಲಿದ್ದಾನೆ? ಮನೆಯಲ್ಲಿದ್ದವರೆಲ್ಲರೂ ಎಲ್ಲಿಗೆ ಹೋದರು? ಹೀಗೆ ಅನೇಕ ಪ್ರಶ್ನಿಗಳನ್ನು ಕೇಳಿದರು.
ಪೊಲೀಸರ ಪ್ರಶ್ನೆಗೆ ಗಿಳಿ ಕೂಡ ಸೈಲೆಂಟ್
ಆದರೆ ಪೊಲೀಸರ ಎಲ್ಲಾ ಪ್ರಶ್ನೆಗೂ ಗಿಳಿ ಮೌನವಹಿಸಿದೆ. ಇದೇ ವೇಳೆ ಮಿಥು ಎಂದು ಗಿಳಿಯ ಹೆಸರನ್ನು ಕರೆದಾಗ, ಅದು ಚೀರಲು ಆರಂಭಿಸಿದೆ. ಒಟ್ಟಾರೆ ಪೊಲೀಸರಿಗೆ ಈಗ ಆರೋಪಿ ಬಗ್ಗೆ ತಿಳಿಯಲು ಇರುವ ಏಕೈಕ ಮಾರ್ಗ ಅಂದರೆ ಅದು ಗಿಳಿಯಿಂದ ಮಾತ್ರ. ಗಿಳಿಗೆ ಪೊಲೀಸರ ಭಾಷೆ ಅರ್ಥ ವಾಗುತ್ತಿದೆ. ಆದರೆ ಗಿಳಿ ಮಾತ್ರ ಕೇವಲ ಕಟೋರೆ (ತಟ್ಟೆ) ಎಂದು ಹೇಳುವುದನ್ನು ಬಿಟ್ಟು ಬೇರೆನೂ ಹೇಳುತ್ತಿಲ್ಲ.
ಕಳ್ಳಬಡ್ಡಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ
ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದ ಬಳಿಕ ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಬಿಹಾರದ ಸಿವಾನ್ ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಮದ್ಯ ಸೇವಿಸಿ ಮತ್ತೆ ಅನೇಕ ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ. ಆದರೆ ಕುಡಿತದ ಪರವಾಗಿ ಮಾತನಾಡುವವರು ನಿಮಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದರು.
ಮದ್ಯ ಸೇವಿಸುವವರು ಸಾಯ್ತಾರೆ
ಜೊತೆಗೆ ಜನರು ಜಾಗರೂಕರಾಗಿರಬೇಕು. ಮದ್ಯ ಸೇವಿಸುವವರು ಸಾಯುತ್ತಾರೆ (ಲೋಗೋ ಕೋ ಸ್ಯಾಚೇತ್ ರೆಹನಾ ಚಾಹಿಯೇ, ಜೋ ಶರಬ್ ಪಿಯೇಗಾ ವೋ ಮರೇಗಾ) ಎಂದು ಸಹ ಎಂದಿದ್ದರು.
ಇದನ್ನೂ ಓದಿ: Nitish Kumar: ಕಳ್ಳಬಟ್ಟಿ ಸೇವಿಸಿ 38 ಮಂದಿ ಸತ್ತ ಬಗ್ಗೆ ಲಘು ಹೇಳಿಕೆ, ಕುಡಿದವರು ಸಾಯುತ್ತಾರೆ ಎಂದ ನಿತೀಶ್ ಕುಮಾರ್!
ಕಳದ 2 ವರ್ಷದಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಬಂಧನ
ಮದ್ಯ ಮಾಫಿಯಾದಲ್ಲಿ ಭಾಗಿಯಾಗಿದ್ದ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕಳೆದ 2 ವರ್ಷಗಳಿಂದ ಬಂಧಿಸಲಾಗಿದೆ. ಎಲ್ಲರ ವಿರುದ್ದ ಮದ್ಯ ನಿಷೇಧ ಕಾನೂನು ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ