Gay marriage: ತೆಲಂಗಾಣದಲ್ಲಿ ನಡೆಯಿತು ದಕ್ಷಿಣ ಭಾರತದ ಮೊದಲ ಸಲಿಂಗಿಗಳ ಮದ್ವೆ! ಮನೆಯವರ ಒಪ್ಪಿಗೆ ಪಡೆದು ವಿವಾಹವಾದ ಜೋಡಿ
Marriage: 31ವರ್ಷದ ಸುಪ್ರಿಯೊ ಚಕ್ರವರ್ತಿ ಮತ್ತು 34 ವರ್ಷದ ಅಭಯ್ ದಂಗೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಸಲಿಂಗ ವಿವಾಹ ಮಾಡಿಕೊಂಡ ಮೊದಲ ಜೋಡಿಗಳು ಎನಿಸಿಕೊಂಡಿದ್ದಾರೆ
ಸಾಕಷ್ಟು ರಾಷ್ಟ್ರಗಳಲ್ಲಿ (Country)ಸಲಿಂಗಿಗಳ ಸಂಬಂಧಕ್ಕೆ ಅನುಮತಿ ನೀಡಲಾಗಿದೆ ಅದರಲ್ಲಿ ಭಾರತವೂ ಒಂದು. ಸಲಿಂಗ ವಿವಾಹ (Same Sex Marriage) ಈಗೀಗ ಬೆಳಕಿಗೆ ಬರುತ್ತಿದ್ದರೂ ಅದನ್ನು ಮುಕ್ತ ಮನಸಿನಿಂದ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಭಾರತದಂಥ (India)ದೇಶದಲ್ಲಿ ಕೆಲವಕ್ಕೆಲ್ಲ ಕಾನೂನಿನಲ್ಲಿ(Law) ಅವಕಾಶ ಕೊಟ್ಟರೂ, ಜನರ ಮನಸಿನಲ್ಲಿ ಸ್ಥಳ ಇರುವುದಿಲ್ಲ. ಅನೇಕರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದರಲ್ಲಿ ಈ ಸಲಿಂಗ ವಿವಾಹವೂ ಒಂದು. ಆದರೂ ಸಹ ಕಾನೂನುಬದ್ಧ ಅನುಮತಿ ಸಿಕ್ಕ ಮೇಲೆ ನಮಗೆ ಯಾವ ಚಿಂತೆಯೂ ಇಲ್ಲ ಯಾರು ಅನುಮತಿಯೂ ಬೇಕಿಲ್ಲ ಎಂದು ಭಾರತದಲ್ಲಿ ಆಗೊಮ್ಮೆ-ಈಗೊಮ್ಮೆ ಸಲಿಂಗಿಗಳ ವಿವಾಹ ನಡೆಯುತ್ತಲೇ ಇದೆ.. ಅದೇ ರೀತಿ ಈಗ ತೆಲಂಗಾಣದಲ್ಲಿ ಇಬ್ಬರು ಪುರುಷರು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ತೆಲಂಗಾಣದಲ್ಲಿ ನಡೆಯಿತು ಮೊದಲ ಸಲಿಂಗಿ ವಿವಾಹ..
31 ವರ್ಷದ ಸುಪ್ರಿಯೊ ಚಕ್ರವರ್ತಿ ಮತ್ತು 34 ವರ್ಷದ ಅಭಯ್ ದಂಗೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಸಲಿಂಗ ವಿವಾಹ ಮಾಡಿಕೊಂಡ ಮೊದಲ ಜೋಡಿಗಳು ಎನಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳ ಮೂಲದ ಸುಪ್ರಿಯೊ ಹೈದರಾಬಾದ್ ನಲ್ಲಿ ಹೊಟೇಲ್ ಉದ್ಯಮದ ವೃತ್ತಿಯಲ್ಲಿದ್ದು ಪಂಜಾಬಿಯಾಗಿರುವ ಅಭಯ್ ಇ ಕಾಮರ್ಸ್ ಸಂಸ್ಥೆಯೊಂದರಲ್ಲಿ ವೃತ್ತಿಯಲ್ಲಿರುವ ಐಟಿ ಉದ್ಯೋಗಿ. ಪ್ಲಾನೆಟ್ ರೋಮಿಯೊ ಎಂಬ ಡೇಟಿಂಗ್ ಆಪ್ ಮೂಲಕ ಎಂಟು ವರ್ಷಗಳ ಹಿಂದೆ ಪರಿಚಿತವಾದ ಇವರಿಬ್ಬರೂ ನಂತರ ಡೇಟಿಂಗ್ ನಲ್ಲಿದ್ದರು. ಈ ವರ್ಷದ ಆರಂಭದಲ್ಲಿ ಮದುವೆಯಾಗಲು ಬಯಸಿದ್ದರು. ಅದರಂತೆ ವಿಕರಾಬಾದ್ ಹೆದ್ದಾರಿಯಲ್ಲಿರುವ ಟ್ರಾನ್ಸ್ ಗ್ರೀನ್ ಫೀಲ್ಡ್ಸ್ ರೆಸಾರ್ಟ್ ನಲ್ಲಿ ಅದ್ದೂರಿ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟಾಲಿವುಡ್ ನಟರ ಬೆಂಬಲ ನೀಡಿದ್ದ ಮದುವೆ
ಇನ್ನು ಅಭಯ್ ಹಾಗೂ ಸುಪ್ರಿಯೋ ಕಳೆದ ಅಕ್ಟೋಬರ್ ನಲ್ಲಿ ಮದುವೆಯಾಗುವುದಾಗಿ ಸೋಶಿಯಲ್ ಮೀಡಿಯಾ ತಾಣಗಳಲ್ಲಿ ಹೇಳಿಕೊಂಡಿದ್ದರು.. ಇವರಿಬ್ಬರ ನಡೆಗೆ ಟಾಲಿವುಡ್ ನ ಅನೇಕ ನಟ ನಟಿಯರು ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು.
ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಲಿಂಗ ವಿವಾಹ ಅಪರಾಧವಲ್ಲ, ಗೌರವಯುತವಾಗಿ ಬದುಕುವ ಹಕ್ಕು ಸಂವಿಧಾನ ಎಲ್ಲರಿಗೂ ಕಲ್ಪಿಸಿದೆ. ಸಲಿಂಗಿಗಳಿಗೂ ಆ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ತೀರ್ಪು ದೇಶದಾದ್ಯಂತ ದೊಡ್ಡ ಮಟ್ಟದ ಪ್ರಶಂಶೆಗೆ ಪಾತ್ರವಾಗಿತ್ತು. ಆದರೆ, ಇಂದು ದೆಹಲಿ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಒಂದೇ ಲಿಂಗದ ದಂಪತಿಗಳು ತಮ್ಮ ಮದುವೆಯನ್ನು ಮೂಲಭೂತ ಹಕ್ಕು ಎಂದು ಕಾನೂನು ಮಾನ್ಯತೆ ಪಡೆಯಲು ಸಾಧ್ಯವಿಲ್ಲ. ಎಂದು ಹೇಳಿ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಣೆ ಮಾಡಿತು. ಇದಾಗಿ ಸುಪ್ರಿಯೋ ಹಾಗೂ ಅವರು ತಮ್ಮ ಮದುವೆಯನ್ನು ಕಾನೂನುಬದ್ಧ ಮಾಡಿಕೊಳ್ಳಲು ಸಾಧ್ಯ ಇಲ್ಲದಿದ್ದರೂ ತಮ್ಮ ಪ್ರೀತಿಯ ಮೂಲಕ ಜಗತ್ತಿಗೆ ನಾವಿಬ್ಬರೂ ಒಟ್ಟಿಗೇ ಇರುತ್ತವೆ ಎಂಬ ಸಂದೇಶವನ್ನು ನೀಡಲು ಮುಂದಾಗಿದ್ದಾರೆ.
ಇನ್ನು ಸುಪ್ರಿಯೋ ಹಾಗೂ ಅವರ ಮದುವೆಗೆ ಮೊದಲು ಇವರ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ.. ಚೆನ್ನಾಗಿ ಯೋಚನೆಮಾಡಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.. ಆದ್ರೆ ಕೊನೆಗೆ ಕುಟುಂಬಸ್ಥರು ಇವರ ಮದುವೆಗೆ ಒಪ್ಪಿಗೆ ನೀಡಿದ್ದರಿಂದ ಹೈದರಾಬಾದ್ ನಗರದ ಹೊರವಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಮತ್ತು ಕೆಲವು ಸಲಿಂಗಿ ಸ್ನೇಹಿತರ ಸಮ್ಮುಖದಲ್ಲಿ ಅಭಯ್ ಹಾಗೂ ಸುಪ್ರಿಯೋ ಮದುವೆಯಾಗಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ