ಹಣೆಗೆ ಬೊಟ್ಟು, ತಲೆಗೆ ಸೆರಗು ಹಾಕಿ ಸೀರೆಯುಟ್ಟ ಗೌತಮ್​ ಗಂಭೀರ್​: ಕಾರಣ ಕೇಳಿದ್ರೆ 'ಸಲಾಂ' ಹೊಡೆಯುತ್ತೀರಿ


Updated:September 14, 2018, 5:10 PM IST
ಹಣೆಗೆ ಬೊಟ್ಟು, ತಲೆಗೆ ಸೆರಗು ಹಾಕಿ ಸೀರೆಯುಟ್ಟ ಗೌತಮ್​ ಗಂಭೀರ್​: ಕಾರಣ ಕೇಳಿದ್ರೆ 'ಸಲಾಂ' ಹೊಡೆಯುತ್ತೀರಿ

Updated: September 14, 2018, 5:10 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಸೆ.14): ಕ್ರಿಕೆಟರ್​ ಗೌತಮ್​ ಗಂಭೀರ್​ ದೇಶ ಹಾಗೂ ಸಮಾಜಕ್ಕೆ ಸಂಬಂಧಿಸಿದಂತೆ ತಮ್ಮ ಆಲೋಚನೆಗಳಿಂದ ಸುದ್ದಿಯಲ್ಲಿರುತ್ತಾರೆ. ಆದರೀಗ ಗೌತಮ್​ ಗಂಭೀರ್​ ತಲೆ ಮೇಲೆ ಸೆರಗು, ಹಣೆಗೆ ಬೊಟ್ಟು ಹಾಗೂ ಸೀರೆ ಉಟ್ಟುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ವಾಸ್ತವವಾಗಿ ಗೌತಮ್​ ಗಂಭೀರ್​ ದೇಶದಲ್ಲಿರುವ ಮಂಗಳಮುಖಿಯರ ಸಮಾನತೆ ಪರವಾಗಿ ಧ್ವನಿ ಎತ್ತುವ ನಿಟ್ಟಿನಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲಾತಾಣಗಳಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ.


ಶೆಮಾರಿ ಸೊಸೈಟಿ ಆಯೋಜಿಸಿದ್ದ​ 'ಹಿಜ್ಡಾ ಹಬ್ಬ' ಎಂಬ ಕಾರ್ದಯಕ್ರಮದ ಏಳನೇ ಆವೃತ್ತಿಯ ಉದ್ಘಾಟನೆ ವೇಳೆ ಗೌತಮ್​ ಗಂಭೀರ್​ ಈ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳಮುಖಿಯರಂತೆ ಕಾರ್ಯಕ್ರಮಕ್ಕಾಗಮಿಸಿದ್ದ ಗೌತಮ್​ ಗಂಭೀರ್​ರವರ ಫೋಟೋಗಳು ಈ ವೇಳೆ ಜಾಲಾತಾಣಗಳಲ್ಲಿ ವೈರಲ್​ ಆಗಿವೆ.


"ಮಂಗಳಮುಖಿಯರು ಸಮಾಜದಲ್ಲಿ ಸಾಮಾನ್ಯವಾಗಿ ಬೇಧ ಭಾವ ಎದುರಿಸುತ್ತಾರೆ. ಅಲ್ಲದೇ ಅವರ ಮೇಲೆ ದೌರ್ಜನ್ಯವೆಸಗಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಹಲ್ಲೆ ನಡೆಯುವುದರೊಂದಿಗೆ ಹಿಂಸೆ ಅನುಭವಿಸಬೇಕಾಗುತ್ತದೆ. ಇವರು ನಮಗಿಂತ ಭಿನ್ನರಾಗಿದ್ದಾರೆಂದು ಯೋಚಿಸುವ ಮೊದಲು ಅವರು ನಮ್ಮಂತೆ ಮನುಷ್ಯರು ಎಂದು ನೆನಪಿಟ್ಟುಕೊಳ್ಳಬೇಕು" ಎಂಬುವುದು ಗೌತಮ್​ ಗಂಭೀರ್​ರವರ ಅಭಿಪ್ರಾಯವಾಗಿದೆ.


ಕೆಲವೇ ದಿನಗಳ ಹಿಂದೆ ಗೌತಮ್​ ಗಂಭೀರ್​ ಮಂಗಳಮುಖಿಯರಿಂದ ರಕ್ಷಾ ಬಂಧನ ಕಟ್ಟಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು.
First published:September 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ