ರಾಜಕೀಯಕ್ಕೆ ಗೌತಮ್​ ಗಂಭೀರ್​ ಎಂಟ್ರಿ?: 2019ರಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಗೊತ್ತಾ?


Updated:August 21, 2018, 10:53 AM IST
ರಾಜಕೀಯಕ್ಕೆ ಗೌತಮ್​ ಗಂಭೀರ್​ ಎಂಟ್ರಿ?: 2019ರಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಗೊತ್ತಾ?
ಗಂಭೀರ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಟೀಮ್ ಇಂಡಿಯಾ ಟೆಸ್ಟ್​ ತಂಡ ಹೀಗಿದೆ.
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಆ.21): ಗೌತಮ್​ ಗಂಭೀರ್​ ಶೀಘ್ರದಲ್ಲೇ ಬಿಜೆಪಿಗೆ ಸೇರುವ ಸಾಧ್ಯತೆಗಳಿವೆ. ಅಲ್ಲದೇ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ. ದೈನಿಕ್​ ಜಾಗರಣ್​ ಪ್ರಕಟಿಸಿರುವ ವರದಿಯನ್ವಯ ಬಿಜೆಪಿಯು ದೆಹಲಿ ಅಧಿಕಾರದಿಂದ ಬಹಳಷ್ಟು ಸಮಯದಿಂದ ದೂರವುಳಿದಿದೆ. ಹೀಗಿರುವ ಗೌತಮ್​ ಗಂಭೀರ್​ ಮೂಲಕ ತನ್ನ ವರ್ಚಸ್ಸನ್ನು ಗಟ್ಟಿಗೊಳಿಸಿ ಮತ್ತೆ ಅಧಿಕಾರಕ್ಕೇರಲು ಬಯಸುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತಾಗಿ ಬಿಜೆಪಿ ಹಾಗೂ ಗೌತಮ್​ ಗಂಭೀರ್​ರವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಗೌತಮ್​ ಗಂಭೀರ್​ ರಣಜಿ ಪಂದ್ಯದಲ್ಲಿ ದೆಹಲಿ ಪರವಾಗಿ ಆಡುತ್ತಾರೆ. ಭಾರತೀಯ ಸೇನೆ ಹಾಗೂ ಪಾಕಿಸ್ತಾನದ ವಿಚಾರಗಳಲ್ಲಿ ಅವರು ತಮ್ಮದೇ ಆದ ಗಟ್ಟಿ ನಿಲುವನ್ನು ಹೊಂದಿದ್ದಾರೆ. ಹಲವಾರು ಬಾರಿ ಅವರು ಭಾರತೀಯ ಸೇನೆಯ ಪರವಾಗಿ ಹಾಗೂ ಪಾಕಿಸ್ತಾನದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಂಭೀರ್​ ಇನ್ನೂ ಕ್ರಿಕೆಟ್​ ವೃತ್ತಿಗೆ ವಿದಾಯ ಹೇಳಿಲ್ಲ, ಆದರೆ ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆಂಬ ಮಾತುಗಳು ಮಾತ್ರ ದಟ್ಟವಾಗಿವೆ. ದೀರ್ಘಸಮಯದಿಂದ ಅವರು ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವುಳಿದಿದ್ದು, ಸದ್ಯ ಕೇವಲ ತವರು ಪಂದ್ಯಗಳನ್ನಷ್ಟೇ ಆಡುತ್ತಾರೆ. 2016ರಲ್ಲಿ ಅವರು ಕೊನೆಯ ಬಾರಿ ಟೀಂ ಇಂಡಿಯಾ ಪರವಾಗಿ ಟೆಸ್ಟ್​ ಹಾಗು 2012ರಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ಇನ್ನು ಈ ವರ್ಷ ನಡೆದ ಐಪಿಎಲ್​ ಪಂದ್ಯದಲ್ಲಿ ದೆಹಲಿ ಡೇರ್​ಡೆವಿಲ್ಟ್​ನ ನಾಯಕತ್ವವನ್ನೂ ತೊರೆದಿದ್ದರು, ಇದಾದ ಬಳಿಕ ಅವರಿಗೆ ಟೀಂ ಇಂಡಿಯಾದಲ್ಲೂ ಸ್ಥಾನ ಸಿಕ್ಕಿರಲಿಲ್ಲ.

ಹಲವಾರು ಮಂದಿ ಕ್ರಿಕೆಟಿಗರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇವರಲ್ಲಿ ಹಲವರ ಅದೃಷ್ಟ ಕೈ ಹಿಡಿದಿದ್ದರೆ, ಹಲವರು ರಾಜಕೀಯದ ಪಿಚ್​ನಲ್ಲಿ ಬೋಲ್ಡ್​ ಆಗಿ ಮರೆಯಾಗಿದ್ದಾರೆ. ನವಜೋತ್​ ಸಿಂಗ್​ ಸಿಧು, ಮೊಹಮ್ಮದ್​ ಅಜರುದ್ದೀನ್​, ಕೀರ್ತಿ ಆಜಾದ್​, ಮೊಹಮ್ಮದ್​ ಕೈಫ್​, ಪ್ರವೀಣ್​ ಕುಮಾರ್​ ಹಾಗೂ ಮಂಸೂರ್​ ಅಲಿ ಖಾನ್​ಪಟೌದಿ ರಾಜಕೀಯಕ್ಕೆ ಬಂದ ಕ್ರಿಕೆಟಿಗರಾಇದ್ದೃಆಎ. ಆದರೆ ಇವರಲ್ಲಿ ಸಿದೂ, ಆಜಾದ್​ ಹಾಗೂ ಅಜರ್​ ಮಾತ್ರ ಯಶಸ್ಸು ಕಂಡಿದ್ದಾರೆ. ಇನ್ನು ಕೈಫ್​ 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಸೋಲಿಉಂಡ ಬಳಿಕ ರಾಜಕೀಯದಿಂದ ದೂರವುಳಿದಿದ್ದಾರೆ.
First published: August 21, 2018, 10:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading