• Home
 • »
 • News
 • »
 • national-international
 • »
 • Gautam Adani: ನನಗೆ ಧೀರೂಭಾಯಿ ಅಂಬಾನಿ ರೋಲ್ ಮಾಡೆಲ್, ಮುಕೇಶ್ ಅಂಬಾನಿ ಒಳ್ಳೆಯ ಸ್ನೇಹಿತ; ಗೌತಮ್‌ ಅದಾನಿ

Gautam Adani: ನನಗೆ ಧೀರೂಭಾಯಿ ಅಂಬಾನಿ ರೋಲ್ ಮಾಡೆಲ್, ಮುಕೇಶ್ ಅಂಬಾನಿ ಒಳ್ಳೆಯ ಸ್ನೇಹಿತ; ಗೌತಮ್‌ ಅದಾನಿ

ಧೀರೂಭಾಯಿ ಅಂಬಾನಿ/ ಗೌತಮ್‌ ಅದಾನಿ/ ಮುಕೇಶ್‌ ಅಂಬಾನಿ

ಧೀರೂಭಾಯಿ ಅಂಬಾನಿ/ ಗೌತಮ್‌ ಅದಾನಿ/ ಮುಕೇಶ್‌ ಅಂಬಾನಿ

ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ ಅದಾನಿ "ಧೀರೂಭಾಯಿ ಅವರು ನನಗೆ ರೋಲ್ ಮಾಡೆಲ್ ಮತ್ತು ಸ್ಪೂರ್ತಿ, ಹಾಗೆಯೇ ಮುಕೇಶ್‌ ಅಂಬಾನಿ ನನ್ನ ಉತ್ತಮ ಸ್ನೇಹಿತ" ಎಂದಿದ್ದಾರೆ.

 • Trending Desk
 • 3-MIN READ
 • Last Updated :
 • New Delhi, India
 • Share this:

ಉದ್ಯಮ ಮಾರುಕಟ್ಟೆಯಲ್ಲಿ ಮುಕೇಶ್‌ ಅಂಬಾನಿ (Dhirubhai Ambani), ಗೌತಮ್‌ ಅದಾನಿ (Gautam Adani) ನಡುವಿನ ವ್ಯಾಪಾರಿ ಸ್ಪರ್ಧೆ ಮೊದಲಿನಿಂದಲೂ ಇದೆ. ಇದರಾಚೆಯೂ ಬಿಲಿಯನೇರ್, ಅದಾನಿ ಎಂಟರ್‌ಪ್ರೈಸಸ್‌ನ (Adani Enterprises) ಅಧ್ಯಕ್ಷರು ಮತ್ತು ಸಂಸ್ಥಾಪಕ ಗೌತಮ್ ಅದಾನಿ (Gautam Adani) ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರನ್ನು ತಮ್ಮ ರೋಲ್‌ ಮಾಡೆಲ್‌ ಎಂದು ಮತ್ತು ಅವರ ಮಗ ಮುಕೇಶ್ ಅಂಬಾನಿ (Mukesh Ambani) ಅವರನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದಾರೆ.


ಭಾರತದ ಶ್ರೀಮಂತ ಮತ್ತು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಶನಿವಾರ ರಜತ್ ಶರ್ಮಾ ಅವರ 'ಆಪ್ ಕಿ ಅದಾಲತ್' ಶೋನಲ್ಲಿ ಉಪಸ್ಥಿತರಿದ್ದರು. ಒಂದು ಗಂಟೆ ಕಾರ್ಯಕ್ರಮದಲ್ಲಿ, ಗುಜರಾತ್‌ನ ಬಿಲಿಯನೇರ್ ಆಡಳಿತಾರೂಢ ಬಿಜೆಪಿಯೊಂದಿಗಿನ ಅವರ ನಿಕಟತೆ ಮತ್ತು ಅವರ ಹತ್ತಿರದ ಪ್ರತಿಸ್ಪರ್ಧಿ ಮುಕೇಶ್ ಅಂಬಾನಿ ಮುಂತಾದ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.


Mukesh Ambani completed 20 years as Reliance Chairman
ಧೀರೂಭಾಯಿ ಅಂಬಾನಿ


ನನಗೆ ಧೀರೂಭಾಯಿ ರೋಲ್ ಮಾಡೆಲ್, ಮುಕೇಶ್‌ ಅಂಬಾನಿ ಉತ್ತಮ ಸ್ನೇಹಿತ


ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ ಅದಾನಿ "ಧೀರೂಭಾಯಿ ಅವರು ನನಗೆ ರೋಲ್ ಮಾಡೆಲ್ ಮತ್ತು ಸ್ಪೂರ್ತಿ, ಹಾಗೆಯೇ ಮುಕೇಶ್‌ ಅಂಬಾನಿ ನನ್ನ ಉತ್ತಮ ಸ್ನೇಹಿತ" ಎಂದಿದ್ದಾರೆ.


"ದೇಶದ ಪ್ರಗತಿಗೆ ಮುಕೇಶ್‌ ದೊಡ್ಡ ಕೊಡುಗೆ ನೀಡಿದ್ದಾರೆ". ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಜಿಯೋ ಮತ್ತು ಚಿಲ್ಲರೆ ವ್ಯಾಪಾರಗಳೊಂದಿಗೆ ಸಂಘಟಿತ ಸಂಸ್ಥೆಗೆ ಹೊಸ ದಿಕ್ಕನ್ನು ನೀಡಿದ್ದಾರೆ ಎಂದು ಮುಕೇಶ್‌ ಅಂಬಾನಿ ಅವರನ್ನು ಶ್ಲಾಘಿಸಿದ್ದಾರೆ.


ಇದನ್ನೂ ಓದಿ: Mukesh Ambani: ಮುಕೇಶ್‌ ಅಂಬಾನಿ ರಿಲಯನ್ಸ್ ಚುಕ್ಕಾಣಿ ಹಿಡಿದು 20 ವರ್ಷ, 2 ದಶಕಗಳಲ್ಲಿ ಉದ್ಯಮವಲಯದಲ್ಲಿ ಸಾವಿರಾರು ಸಾಹಸ


“ಮುಕೇಶ್ ಅವರು ನನಗೆ ತುಂಬಾ ಒಳ್ಳೆಯ ಸ್ನೇಹಿತ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಪೆಟ್ರೋಕೆಮಿಕಲ್ಸ್‌ನ ಸಾಂಪ್ರದಾಯಿಕ ವ್ಯವಹಾರದ ಜೊತೆಗೆ ಜಿಯೋ, ತಂತ್ರಜ್ಞಾನ ಮತ್ತು ಚಿಲ್ಲರೆ ವ್ಯಾಪಾರದೊಂದಿಗೆ ರಿಲಯನ್ಸ್‌ಗೆ ಅವರು ಹೊಸದೊಂದು ದಿಕ್ಕನ್ನೇ ನೀಡಿದ್ದಾರೆ. ಅವರ ಎಲ್ಲಾ ಪ್ರಯತ್ನಗಳು ದೇಶದ ಪ್ರಗತಿಗೆ ದೊಡ್ಡ ಕೊಡುಗೆಯಾಗಿದೆ" ಎಂದು ಅವರು ಹೇಳಿದರು.


ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ


ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ


ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ, ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಈ ವರ್ಷ ವಿಶ್ವದಲ್ಲೇ ಗರಿಷ್ಠ ಗಳಿಕೆ ದಾಖಲಿಸಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಏಷ್ಯಾದಲ್ಲೇ ಅತಿ ಹೆಚ್ಚು ಕಾರ್ಯನಿರತವಾಗಿದ್ದ ಉದ್ಯಮಿ ಎಂದು ಸುದ್ದಿ ಸಂಸ್ಥೆ 'ಬ್ಲೂಮ್‌ಬರ್ಗ್' ಹೇಳಿದೆ.


ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ USD 117 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಅದಾನಿ ಮೂರನೇ ಸ್ಥಾನದಲ್ಲಿದ್ದರೆ, RIL CMD ಅವರು USD 86.8 ಶತಕೋಟಿ ಸಂಪತ್ತಿನೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆಂದು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Dharavi Slum: ಏಷ್ಯಾದ ಅತೀ ದೊಡ್ಡ ಸ್ಲಂ ಅಭಿವೃದ್ಧಿ ಸಾಧ್ಯವೇ? ಧಾರಾವಿ ಪುನರ್‌ ನಿರ್ಮಾಣ ಅದಾನಿ ಗ್ರೂಪ್‌ಗೆ ಚಾಲೆಂಜಿಂಗ್ ಏಕೆ?


ವಿರೋಧ ಪಕ್ಷಗಳ ಟೀಕೆಗಳಿಗೆ ಕೂಲ್‌ ಆಗಿ ಉತ್ತರಿಸಿದ ಬಿಲಿಯನೇರ್


ಗೌತಮ್‌ ಅದಾನಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ನಿಕಟ ಸಂಬಂಧದಿಂದ ಅಪಾರ ಲಾಭ ಪಡೆದಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಲೇ ಬಂದಿವೆ. ಅರದಲ್ಲೂ ರಾಹುಲ್‌ ಗಾಂಧಿಯವರು ಅದಾನಿ ವಿರುದ್ಧ ಇಂತಹ ಹಲವು ಆರೋಪಗಳನ್ನು ಮಾಡಿದ್ದಾರೆ.


ಈ ಕುರಿತು ಮಾತನಾಡಿದ ಅದಾನಿ, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಒಬ್ಬ ಕೈಗಾರಿಕೋದ್ಯಮಿಯಾಗಿ, ನಾನು ಅವರ ಬಗ್ಗೆ ಕಾಮೆಂಟ್ ಮಾಡುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ.


reliance-agm-2022-mukesh-ambani-succession-ipo-telecom-jio- Mukesh Ambani announces partnership with Qualcomm
ಮುಕೇಶ್​ ಅಂಬಾನಿ


ಅವರು ಗೌರವಾನ್ವಿತ ನಾಯಕ ಮತ್ತು ದೇಶದ ಪ್ರಗತಿಯನ್ನು ಬಯಸುತ್ತಾರೆ. ಕೆಲವೊಮ್ಮೆ ರಾಜಕೀಯದ ಬಿಸಿಯಲ್ಲಿ, ನನ್ನ ವಿರುದ್ಧ ಇಂತಹ ಕಾಮೆಂಟ್ ಮಾಡುತ್ತಾರೆ, ಆದರೆ ನಾನು ಅದನ್ನು ರಾಜಕೀಯ ಹೇಳಿಕೆಗಿಂತ ಹೆಚ್ಚಿನದಾಗಿ ಅಥವಾ ವೈಯಕ್ತಿಕವಾಗಿ ಪರಿಗಣಿಸುವುದಿಲ್ಲ ಎಂದರು.


ತನ್ನ ಕಂಪನಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಯೋಜನೆಗಳನ್ನು ತಂದಿಲ್ಲ. “ನಾವು ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ.


ಅದಾನಿ ಗ್ರೂಪ್ 22 ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ ಮತ್ತು ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

First published: