Gas Leak: ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆ; ಕಣ್ಣುನೋವು, ವಾಕರಿಕೆ, ವಾಂತಿಯಿಂದ ಕಾರ್ಮಿಕರು ಅಸ್ವಸ್ಥ

ಉಡುಪು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಶುಕ್ರವಾರ ಸಮೀಪದ ರಾಸಾಯನಿಕ ಪ್ರಯೋಗಾಲಯದಿಂದ ಅಮೋನಿಯಾ ಅನಿಲ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ (Vishakhapatnam) ಪೋರಸ್ ಲ್ಯಾಬೊರೇಟರೀಸ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ 87 ಜನರು ಅಸ್ವಸ್ಥಗೊಂಡ ದುರ್ಘಟನೆ (Gas Leak) ಸಂಭವಿಸಿದೆ. ಜೂನ್ 3 ರಂದು ಶುಕ್ರವಾರ ಗ್ಯಾಸ್ ಸೋರಿಕೆಯಲ್ಲಿ ಅಸ್ವಸ್ಥಗೊಂಡ ಕನಿಷ್ಠ 30 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಷಾತ್ ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ವಿಶಾಖಪಟ್ಟಣಂನ ಅಚ್ಚುತಪುರಂನಲ್ಲಿರುವ ಪೋರಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಅನಿಲ ಸೋರಿಕೆಯಿಂದಾಗಿ ಈ ದುರ್ಘಟನೆ (Gas Leak In Vishakhapatnam) ಸಂಭವಿಸಿದೆ.

  ಉಡುಪು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಶುಕ್ರವಾರ ಸಮೀಪದ ರಾಸಾಯನಿಕ ಪ್ರಯೋಗಾಲಯದಿಂದ ಅಮೋನಿಯಾ ಅನಿಲ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದಾರೆ.

  ಕಾರ್ಮಿಕರಿಗೆ ಕಣ್ಣುನೋವು, ವಾಕರಿಕೆ ಮತ್ತು ವಾಂತಿ
  ಅಚ್ಯುತಪುರಂನಲ್ಲಿರುವ SEZ ನ ಹೊರಗಿರುವ ಪೋರಸ್ ಲ್ಯಾಬೊರೇಟರೀಸ್ ಘಟಕದಿಂದ ಅನಿಲ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದೆ. ಆದರೆ ಅದರ ಪರಿಣಾಮವು SEZ ಒಳಗಿನ ಉಡುಪು ಘಟಕದಲ್ಲಿ ಕಂಡುಬಂದಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳಾ ಕಾರ್ಮಿಕರು ಕಣ್ಣುನೋವು, ವಾಕರಿಕೆ ಮತ್ತು ವಾಂತಿ ಎಂದು ದೂರಿದ ನಂತರ ತಕ್ಷಣವೇ ಪ್ರಜ್ಞಾಹೀನರಾಗಿದ್ದಾರೆ.

  ಮಾರಣಾಂತಿಕ ಅನಿಲ ಅಲ್ಲ, ಸದ್ಯ ಬಚಾವ್
  ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ) ಮತ್ತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸೋರಿಕೆಯ ಮೂಲವನ್ನು ಗುರುತಿಸಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅನಿಲವು ಮಾರಣಾಂತಿಕವಾಗಿಲ್ಲ ಎಂದು ತಿಳಿದುಬಂದಿದೆ.   

  ಘಟಕದಲ್ಲಿ ಹಾನಿಗೊಳಗಾದ ಸ್ಕ್ರಬ್ಬರ್‌ಗಳು ಅನಿಲ ಸೋರಿಕೆಗೆ ಕಾರಣವೆಂದು ಹೇಳಲಾಗಿದೆ ಎಂದು ಪ್ರಾಥಮಿಕ ತನಿಖೆಯ ನಂತರ ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿMarriage Certificate: ಮದುವೆ ಪ್ರಮಾಣಪತ್ರ ನೀಡಲು ಆರ್ಯ ಸಮಾಜಕ್ಕೆ ಯಾವುದೇ ಅರ್ಹತೆಯಿಲ್ಲ! ಸುಪ್ರೀಂ ಕೋರ್ಟ್ ಆದೇಶ

  ಅನಿಲ ಸೋರಿಕೆಯ ದುರ್ಘಟನೆಯಲ್ಲಿ ಅಸ್ವಸ್ಥರಾದ ಸಂತ್ರಸ್ತ ಕಾರ್ಮಿಕರ ಆರೋಗ್ಯ ಈಗ ಸ್ಥಿರವಾಗಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಗುಡಿವಾಡ ಅಮರನಾಥ್ ಪಿಟಿಐಗೆ ತಿಳಿಸಿದ್ದಾರೆ.

  ಪ್ರಥಮ ಚಿಕಿತ್ಸೆ ನಂತರ ಚೇತರಿಕೆ
  "ಈ ದುರ್ಘಟನೆಯಲ್ಲಿ ಕೆಲವು ಕಾರ್ಮಿಕರು ಪ್ರಜ್ಞಾಹೀನರಾದರು. ಹೆಚ್ಚಿನವರು ಕಣ್ಣುಗಳಲ್ಲಿ ಕಿರಿಕಿರಿ ಮತ್ತು ವಾಕರಿಕೆ ಅನುಭವಿಸಿದರು. ಅವರನ್ನು ಚಿಕಿತ್ಸೆಗಾಗಿ ಅನಕಾಪಲ್ಲಿ ಮತ್ತು ವಿಶಾಖಪಟ್ಟಣಂನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಮರನಾಥ್ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಅನೇಕ ಕಾರ್ಮಿಕರು ಚೇತರಿಸಿಕೊಂಡಿದ್ದಾರೆ ಎಂದು ಅನಕಾಪಲ್ಲಿ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.

  "ಕೆಲವು ಕಾರ್ಮಿಕರನ್ನು ಅನಕಾಪಲ್ಲಿಯ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ನಾವು ಅವರನ್ನು ನಿಗಾದಲ್ಲಿ ಇರಿಸಿದ್ದೇವೆ. ಯಾರಿಗೂ ಅಪಾಯವಾಗಿಲ್ಲ' ಎಂದು ಅನಕಾಪಲ್ಲಿ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

  ಘಟನೆಗೆ ಕಾರಣ ತನಿಖೆ
  ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌತಮಿ ಸಾಲಿ ತಿಳಿಸಿದ್ದಾರೆ. ಕಾರ್ಮಿಕರು ಸ್ಥಿರರಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  ಶುಕ್ರವಾರ ಮಧ್ಯಾಹ್ನದ ಊಟದ ಸಮಯದಲ್ಲಿ ಸೀಡ್ ಅಪ್ಯಾರಲ್ ಘಟಕದ ಕೆಲಸಗಾರರು ಕಣ್ಣುಗಳಲ್ಲಿ ಕಿರಿಕಿರಿ, ವಾಕರಿಕೆ ಮತ್ತು ತಲೆತಿರುಗುವಿಕೆ ಎಂದು ದೂರಲು ಪ್ರಾರಂಭಿಸಿದರು. ತೀಕ್ಷ್ಣವಾದ ವಾಸನೆಯು ಇದ್ದಕ್ಕಿದ್ದಂತೆ ಗಾಳಿಯನ್ನು ತುಂಬಿತು. ಅವರನ್ನು ಮೊದಲು SEZ ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.  ನಂತರ ಅನಕಾಪಲ್ಲಿ ಮತ್ತು ವಿಶಾಖಪಟ್ಟಣಂನ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.

  ಇದನ್ನೂ ಓದಿ: Guru Granth Sahib: ಆಪರೇಷನ್ ಬ್ಲೂ ಸ್ಟಾರ್​ ಸಮಯದಲ್ಲಿ ಹಾನಿಗೊಂಡ ಗುರು ಗ್ರಂಥ ಸಾಹೀಬ್​ ವೀಕ್ಷಣೆಗೆ ಅವಕಾಶ

  ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪೋರಸ್ ಘಟಕವನ್ನು ತಲುಪಿ ಎಂಜಿನಿಯರ್‌ಗಳೊಂದಿಗೆ ಅನಿಲ ಸೋರಿಕೆಯನ್ನು ಮುಚ್ಚಿದ್ದಾರೆ.
  Published by:guruganesh bhat
  First published: