Pak Ministerಗೆ ಬೆಳ್ಳುಳ್ಳಿ ಯಾವುದು, ಶುಂಠಿ ಯಾವುದು ಅಂತ ಗೊತಿಲ್ವಾ? ಟ್ರೋಲ್​ಗೆ ಆಹಾರವಾದ ಸಚಿವ!

ಸಚಿವ(Pakistani minister) ಫವಾದ್‌ ಚೌಧರಿ ಅವರು( ಬೆಳ್ಳುಳ್ಳಿ ಅನ್ನು ಶುಂಠಿ ಅಂತ ಕರೆದಿದ್ದಾರೆ) ಗಾರ್ಲಿಕ್‌ ಅಂದ್ರೆ ಶುಂಠಿ ಅಂತ ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಈ ವಿಡಿಯೋ ನೋಡಿ ನೆಟ್ಟಿಗರಿಗೆ ನಗೆಪಾಟಲಿಗೆ ಗುರಿಯಾಗಿದೆ.

ಪಾಕ್‌ ಸಚಿವ ಫವಾದ್‌ ಚೌಧರಿ

ಪಾಕ್‌ ಸಚಿವ ಫವಾದ್‌ ಚೌಧರಿ

 • Share this:
  ಇದು ಶುಂಠಿ, ಬೆಳ್ಳುಳ್ಳಿ (Garlic-Ginger) ವಿಷ್ಯಾ.. ಮನೆಯಲ್ಲಿ ಶುಂಠಿ ಬೆಳ್ಳುಳ್ಳಿ ಇಲ್ಲಾಂದ್ರೆ ಎಷ್ಟೋ ಮಹಿಳೆಯರು ಅಡಿಗೆಯೇ ಮಾಡಲ್ಲ ಬಿಡಿ. ಈ  ಎರಡು ಪದಾರ್ಥಗಳು ಅಡುಗೆ ರುಚಿಯನ್ನು ಹೆಚ್ಚೆಸುವುದು ನಿಜ. ಆದರೆ ಪಾಕಿಸ್ತಾನದ ಸಚಿವ ಫವಾದ್ ಚೌಧರಿ  (Pak Minister Fawad Chaudhry) ಅವರು ಬೆಳ್ಳುಳ್ಳಿ ಬಗ್ಗೆ ಮಾಡಿದ ಎಡವಟ್ಟು ನಮ್ಮನೆ ಹೆಣ್ಮಕ್ಕಳಿಗೆ ನಗೆಗಡಲಿನಲ್ಲಿ ತೆಲುವಂತೆ ಮಾಡಿದೆ. ಹೌದು ಈರುಳ್ಳಿ- ಬೆಳ್ಳುಳ್ಳಿ ಬೆಲೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾದ ಮಾಹಿತಿ ಮತ್ತು ಪ್ರಸಾರ ಸಚಿವ(Pakistani minister) ಫವಾದ್‌ ಚೌಧರಿ ಅವರು( ಬೆಳ್ಳುಳ್ಳಿ ಅನ್ನು ಶುಂಠಿ ಅಂತ ಕರೆದಿದ್ದಾರೆ) ಗಾರ್ಲಿಕ್‌ ಅಂದ್ರೆ ಶುಂಠಿ ಅಂತ ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ನಗೆಪಾಟಲಿನಲ್ಲಿ ತೇಲಾಡಿದ್ದಾರೆ.

  ಇದನ್ನು ಓದಿ:Pakistan: ಪಾಕಿಸ್ತಾನದಲ್ಲಿ ರೇಪಿಸ್ಟ್​​ಗಳಿಗೆ ರಾಸಾಯನಿಕ ನೀಡಿ 'ಅದನ್ನೇ' ಕಿತ್ತುಕೊಳ್ತಾರೆ!

  ಟ್ವಿಟರ್‌ ನಲ್ಲಿ ಶೇರ್‌(Share on Twitter)
  ಇತ್ತೀಚೆಗೆ ಅವರು ಆಡಿದ ಮಾತುಗಳನ್ನು ಪಾಕ್ ನ ಪತ್ರಕರ್ತೆ ನೈಲಾ ಇನಾಯತ್‌ ಅವರು ಟ್ವಿಟರ್‌ ನಲ್ಲಿ ಶೇರ್‌ ಮಾಡಿದೇ ತಡ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಈ ಪೋಸ್ಟ್‌ ಗಾರ್ಲಿಕ್‌ ಈಸ್‌ ಅದ್ರಕ್‌ ಎಂದು ಇನ್‌ ಫರ್ಮೆಶನ್‌ ಮಿನಿಸ್ಟರ್‌ ಫವಾದ್‌ ಚೌಧರಿ ತಪ್ಪಾಗಿ ಮಾಹಿತಿ ನೀಡಿದ್ದಾರೆ.ನಾವು ಪ್ರತಿದಿನ ಏನಾದರೂ ಹೊಸದನ್ನು ಕಲಿಯುತ್ತದೆ ಎಂದು ಹಾಸ್ಯ ಮಾಡಿದ್ದಾರೆ. ಈ ವಿಡಿಯೋ ತುಣುಕುನಲ್ಲಿ ಚೌಧರಿ ಹಿಂದಿಯಲ್ಲಿ ಈರುಳ್ಳಿಗೆ ಪ್ಯಾಸ್‌ ಎಂದು ಸರಿಯಾಗಿ ಹೇಳಿದರೇ, ಬೆಳ್ಳುಳ್ಳಿಗೆ ಹಿಂದಿ ಶಬ್ದದಲ್ಲಿ ತಡಕಾಡಿದ್ದಾರೆ. ಅಲ್ಲಿನ ಜನರು ಲೆಹಸುನ್‌ ಎಂದು ಹೇಳಿಕೊಟ್ಟಿದ್ದಾರೆ. ಗಾರ್ಲಿಕ್‌ ಈಸ್‌ ಅದ್ರಕ್‌... ಹಿಂದಿಯಲ್ಲಿ ಅದ್ರಕ್‌ ಎಂದರೆ ಶುಂಠಿ ಎಂದು ಬಳಸುತ್ತಾರೆ. ವಿಡಿಯೋ ನೋಡಿದ ನೆಟ್ಟಿಗರ ನಗಾಡುತ್ತಿದ್ದಾರೆ.

  ಗಾರ್ಲಿಕ್‌ ಅಂದ್ರೆ ಅದ್ರಕ್‌(Garlic Andrei Adrak)
  ಬೆಳ್ಳುಳ್ಳಿಯನ್ನು ಶುಂಠಿ ಎಂದು ಬಣ್ಣಿಸಿರುವ ವಿಡಿಯೋಗೆ ಸಾಕಷ್ಟು ಜನರು ಮೀಮ್ಸ್‌ ಮತ್ತು ಟ್ರೋಲ್‌ ಮಾಡಿದ್ದಾರೆ. ಹಣದುಬ್ಬರದ ಕುರಿತು ಮಾತನಾಡುವ ಬರದಲ್ಲಿ ಸಚಿವ ವಿಶ್ವದಾದ್ಯಂತ ಅಡುಗೆಯಲ್ಲಿ ವ್ಯಾಪಕವಾಗಿ ಬಳಸುವ ಎರಡು ಭಿನ್ನ ಸಾಮಾನ್ಯ ಪದಾರ್ಥಗಳು ಗಾರ್ಲಿಕ್‌ ಈಸ್‌ ಅದ್ರಕ್‌ ಎಂದು ಹೇಳುವುದನ್ನು ಕೇಳಬಹುದು. ಅಂದಹಾಗೆ ಹಿಂದಿಯಲ್ಲಿ ಬೆಳ್ಳುಳ್ಳಿಗೆ ಲಹ್ಸುನ್‌ ಅಂದ್ರೆ, ಶುಂಠಿ ಯನ್ನು ಅದ್ರಕ್‌ ಅಂತಾರೆ, ಸಚಿವರು ಗಾರ್ಲಿಕ್‌ ಅಂದ್ರೆ ಅದ್ರಕ್‌ ಎಂದು ಹೇಳಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಚೌಧರಿ ಹಣದುಬ್ಬರ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಚೌಧರಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬೆಲೆ ಇಳಿಕೆಯ ಬಗ್ಗೆ ಮಾತನಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಈ ಎರಡು ಗಿಡಮೂಲಿಕೆಗಳ ನಡುವೆ ಗೊಂದಲಕ್ಕೀಡಾಗುವುದು ದೊಡ್ಡ ವಿಷಯವಲ್ಲ, ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಅವರ ಮಾಹಿತಿಯ ಕೊರತೆಗಾಗಿ ಅವರು ಟ್ರೋಲ್‌ಗೆ ಗುರಿಯಾಗಿದ್ದಾರೆ.

  ಇದನ್ನು ಓದಿ: China Warship: ಪಾಕಿಸ್ತಾನಕ್ಕೆ ಅತಿದೊಡ್ಡ, ಅತ್ಯಾಧುನಿಕ ಯುದ್ಧನೌಕೆಯನ್ನು ಒದಗಿಸಿದ ಚೀನಾ

  ಸಾಮಾಜಿಕ ತಾಣದಲ್ಲಿ ಭಾರಿ ಸದ್ದು(Huge noise on social site)

  ಪಾಕ್‌ ಸಚಿವರ ತಪ್ಪಾದ ಮಾಹಿತಿಗೆ ಜನರು ಭಾರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಓರ್ವ ಪ್ರತಿಷ್ಠಿತ ಸ್ಥಾನದಲ್ಲಿರುವ ವ್ಯಕ್ತಿಗೆ ಸಾಮಾನ್ಯ ಜ್ಞಾನವಿಲ್ಲದಿದ್ರೇ ಹೇಗೆ, ಇವರು ಸರಕಾರವನ್ನು ಹೇಗೆ ನಡೆಸುತ್ತಾರೆ ಎಂದು ಪ್ರಶ್ನೆ ಮಾಡುವಂತಾಗಿದೆ. ಇನ್ನು ಕೆಲವರು ಮಾಹಿತಿ ಸಚಿವರೇ ಮಾಹಿತಿಯನ್ನು ತಪ್ಪಾಗಿ ಹರಡುವುದು ಸರಿಯೇ ಎನ್ನುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಅದರಲ್ಲೂ ಪಾಕ್‌ ಸರಕಾರದ ವಿರೋಧಿಗಳು ವಿಡಿಯೋ ಶೇರ್‌ ಮಾಡುತ್ತ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಜನರಿಗೆ ಗಾರ್ಲಿಕ್‌ ಜಿಂಜರ್‌ ವಿಚಾರದಲ್ಲಿ ಸಾಕಷ್ಟು ಗೊಂದಲವಾಗುವುದು ನಿಜ,
  Published by:vanithasanjevani vanithasanjevani
  First published: