ವಾಯುಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸಿದ ಗಾರ್ಡನ್​​​​ ಸಿಟಿ ಬೆಂಗಳೂರು

news18
Updated:August 13, 2018, 12:09 PM IST
ವಾಯುಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸಿದ ಗಾರ್ಡನ್​​​​ ಸಿಟಿ ಬೆಂಗಳೂರು
news18
Updated: August 13, 2018, 12:09 PM IST
-ನ್ಯೂಸ್ 18 ಕನ್ನಡ

ಬೆಂಗಳೂರು (ಆ.13): ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ,  ಐಟಿ-ಬಿಟಿ ಸಿಟಿ ಎಂಬೆಲ್ಲ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಈಗ ವಾಯುಮಾಲಿನ್ಯಗೊಂಡಿರುವ ಸಿಟಿ ಎಂಬ ಕುಖ್ಯಾತಿಗೂ ಭಾಜನವಾಗಿದೆ.

ಹೌದು, ವಾಯುಮಾಲಿನ್ಯದಲ್ಲಿ ಇದೀಗ ಬೆಂಗಳೂರು ದೇಶದ ರಾಜಧಾನಿ ದೆಹಲಿಯನ್ನು ಮೀರಿಸಿದೆ. ವಾಯುಮಾಲಿನ್ಯಗೊಂಡಿರುವ ದೇಶದ ಆರು ಪ್ರಮುಖ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅಧ್ಯಯನ ವರದಿ ಹೇಳಿದೆ.

ನಗರದ ಹೊರವಲಯದಲ್ಲಿ ಹೆಚ್ಚಿದ ಕೈಗಾರಿಕೆಗಳ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಕಾರಣ ಎಂದು ಸಿಪಿಸಿಬಿ ಹೇಳಿದೆ. ಸಿಪಿಸಿಬಿ ಹೇಳುವ ಪ್ರಕಾರ, ರಸ್ತೆ ಧೂಳು ಮತ್ತು ವಾಹನಗಳ ಹೊಗೆಯಿಂದ ಬೆಂಗಳೂರು ತೀವ್ರ ಮಟ್ಟದಲ್ಲಿ ವಾಯುಮಾಲಿನ್ಯಗೊಂಡಿರುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ಪುಣೆ ಇದೆ.

ಸಿಪಿಸಿಬಿಯ ವರದಿ ಬಗ್ಗೆ ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಅನುಮಾನ ವ್ಯಕ್ತಪಡಿಸಿದೆ. ಕೆಎಸ್ ಪಿಸಿಬಿಯ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, “ಕೈಗಾರಿಕೆಗಳಿಂದ ಬೆಂಗಳೂರು ವಾಯುಮಾಲಿನ್ಯಗೊಂಡಿದೆ ಎಂದು ಹೇಳಲಾಗುವುದಿಲ್ಲ. ಈ ಅಂಕಿ-ಸಂಖ್ಯೆಗಳು ನಿಖರವಾಗಿವೆ ಎಂದು ನನಗೆ ಅನಿಸುತ್ತಿಲ್ಲ,” ಎಂದು ಹೇಳಿದ್ದಾರೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...