ಚಿಕ್ಕಪ್ಪನನ್ನೇ ಕೊಂದವನು ಏನು ಬೇಕಾದರೂ ಮಾಡಿಯಾನು; ಜಗನ್ಮೋಹನ್​ ರೆಡ್ಡಿ ವಿರುದ್ಧ ಚಂದ್ರಬಾಬು ನಾಯ್ಡು ವಾಗ್ದಾಳಿ

ಜಗನ್ಮೋಹನ್ ರೆಡ್ಡಿ ತನ್ನ ಚಿಕ್ಕಪ್ಪ ವಿವೇಕಾನಂದ ರೆಡ್ಡಿಯ ಕೊಲೆಯನ್ನು ತನ್ನ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಯೋಚಿಸಿದ್ದಾರೆ. ಅದಕ್ಕೆ ಆಂಧ್ರಪ್ರದೇಶದ ಜನರು ಅವಕಾಶ ಕೊಡಬಾರದು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ

sushma chakre | news18
Updated:March 24, 2019, 10:47 PM IST
ಚಿಕ್ಕಪ್ಪನನ್ನೇ ಕೊಂದವನು ಏನು ಬೇಕಾದರೂ ಮಾಡಿಯಾನು; ಜಗನ್ಮೋಹನ್​ ರೆಡ್ಡಿ ವಿರುದ್ಧ ಚಂದ್ರಬಾಬು ನಾಯ್ಡು ವಾಗ್ದಾಳಿ
ಚಂದ್ರಬಾಬು ನಾಯ್ಡು
sushma chakre | news18
Updated: March 24, 2019, 10:47 PM IST
ಕಡಪ (ಮಾ. 24): ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ನಾಯಕ ವೈಎಸ್​ ಜಗನ್ಮೋಹನ್​ ರೆಡ್ಡಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜಗನ್ಮೋಹನ್ ರೆಡ್ಡಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿದ್ದಾರೆ.

ಜಗನ್ಮೋಹನ್​ ರೆಡ್ಡಿ ಅವರ ತವರು ಕ್ಷೇತ್ರವಾಗಿರುವ ಕಡಪ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು, 'ಕಡಪ ಜಿಲ್ಲೆ ಗಣ್ಯ ವ್ಯಕ್ತಿಗಳಾದ ಅಣ್ಣಮ್ಮಯ್ಯ, ವೀರ ಭ್ರಮೇಂದ್ರ ಸ್ವಾಮಿ, ಯೋಗಿ ವೇಮನರಂತಹವರಿಗೆ ಜನ್ಮ ನೀಡಿದೆ. ತುಳಸಿ ಗಾರ್ಡನ್​ನಂತಿರುವ ಈ ಜಿಲ್ಲೆಯಲ್ಲಿ ಒಂದು ಗಾಂಜಾ ಗಿಡ ಕೂಡ ಹುಟ್ಟಿಬಿಟ್ಟಿದೆ. ಆ ಗಾಂಜಾ ಗಿಡವೇ ಜಗನ್ಮೋಹನ್​ ರೆಡ್ಡಿ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರು ಉಗ್ರರಿಗೆ ಬಿರಿಯಾನಿ ತಿನ್ನಿಸಿದರೆ ನಾವು ಗುಂಡಿನ ರುಚಿ ತೋರಿಸಿದ್ದೇವೆ; ಸಿಎಂ ಯೋಗಿ ಆದಿತ್ಯನಾಥ್​

ಈ ಹಿಂದೆ ಜಗನ್ಮೋಹನ್ ರೆಡ್ಡಿಯನ್ನು 'ಅಪರಾಧಗಳ ಬ್ರ್ಯಾಂಡ್​ ಅಂಬಾಸಡರ್​' ಎಂದು ಕರೆದಿದ್ದ ಚಂದ್ರಬಾಬು ನಾಯ್ಡು, ಈ ದೇಶದಲ್ಲಿ ಬರೋಬ್ಬರಿ 31 ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಏಕೈಕ ನಾಯಕನೆಂದರೆ ಅದು ಜಗನ್ಮೋಹನ್​ ರೆಡ್ಡಿ ಎಂದು ಟೀಕಿಸಿದ್ದರು.

ತನ್ನ ಸ್ವಂತ ಚಿಕ್ಕಪ್ಪನನ್ನೇ ಕೊಂದವನು ಏನು ಮಾಡಲೂ ಹೇಸುವುದಿಲ್ಲ. ಹೀಗಾಗಿ, ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳುವ ಚಂದ್ರಬಾಬು ಹೇಳಿರುವ ನಾಯ್ಡು, ಜಗನ್ಮೋಹನ್ ರೆಡ್ಡಿ ತನ್ನ ಚಿಕ್ಕಪ್ಪ ವಿವೇಕಾನಂದ ರೆಡ್ಡಿಯ ಕೊಲೆಯನ್ನು ತನ್ನ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಯೋಚಿಸಿದ್ದಾರೆ. ಅದಕ್ಕೆ ಆಂಧ್ರಪ್ರದೇಶದ ಜನರು ಅವಕಾಶ ಕೊಡಬಾರದು ಎಂದು ಆರೋಪಿಸಿದ್ದಾರೆ.

First published:March 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ