ಕಾನ್ಪುರದ ಬಿಕ್ರು ಪ್ರಕರಣ ಮತ್ತು ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣದ ತನಿಖೆಗಾಗಿ ರಚಿಸಲಾದ ನ್ಯಾಯಾಂಗ ಆಯೋಗವು ಉತ್ತರ ಪ್ರದೇಶ ಪೊಲೀಸ್ ತಂಡಕ್ಕೆ ಕ್ಲೀನ್ ಚಿಟ್ ನೀಡಿದೆ.
ಆಯೋಗದ ಪ್ರಕಾರ, ಎನ್ಕೌಂಟರ್ ನಕಲಿ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಈ ನ್ಯಾಯಾಂಗ ಆಯೋಗವನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಾ. ಬಿ.ಎಸ್. ಚೌಹಾಣ್ ನೇತೃತ್ವ ವಹಿಸಿದ್ದರು. ಅದೇ ಸಮಯದಲ್ಲಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಶಶಿಕಾಂತ್ ಅಗರ್ವಾಲ್ ಮತ್ತು ಮಾಜಿ ಡಿಜಿಪಿ ಕೆಎಲ್ ಗುಪ್ತಾ ಸಮಿತಿಯ ಸದಸ್ಯರಾಗಿದ್ದರು. ವಿಚಾರಣಾ ಆಯೋಗದ ವರದಿಯನ್ನು ಯುಪಿ ಸರ್ಕಾರವು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿತು.
132 ಪುಟಗಳ ವರದಿಯ ಪ್ರಕಾರ, ವಿಕಾಸ್ ದುಬೆ ಮತ್ತು ಆತನ ತಂಡವು ಕಾನ್ಪುರದಲ್ಲಿ ಸ್ಥಳೀಯ ಪೊಲೀಸ್ ಹಾಗೂ ಕಂದಾಯ ಮತ್ತು ಆಡಳಿತ ಅಧಿಕಾರಿಗಳ ಬೆಂಬಲದೊಂದಿಗೆ ಅಷ್ಟು ದೊಡ್ಡ ಅಪರಾಧಿಯಾಗಿ ಬೆಳೆಯಲು ಸಾಧ್ಯವಾಯಿತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ವಿಕಾಸ್ ದುಬೆ ಅವರ ಮನೆ ಮೇಲೆ ಪೋಲಿಸ್ ದಾಳಿ ಆಗಲಿದೆ ಎನ್ನುವುದರ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿತ್ತು. ಅಧಿಕಾರಿಗಳೊಂದಿಗಿನ ಸಂಪರ್ಕದಿಂದಾಗಿ, ವಿಕಾಸ್ ದುಬೆ ಹೆಸರನ್ನು ಟಾಪ್ 10 ಅಪರಾಧಿಗಳ ಪಟ್ಟಿಯಲ್ಲಿ ಸೇರಿಸಲು ಬಿಟ್ಟಿರಲಿಲ್ಲ, ಆದರೆ ಆತನ ವಿರುದ್ಧ 64 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಇದನ್ನು ಹೊರತುಪಡಿಸಿ, ಆತನ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ನ್ಯಾಯಯುತ ತನಿಖೆ ಎಂದಿಗೂ ನಡೆದಿಲ್ಲ ಎನ್ನುವುದನ್ನು ಆಯೋಗ ಬಯಲಿಗೆ ಎಳೆದಿದೆ.
ಆಯೋಗವು ತನಿಖಾ ವರದಿಯಲ್ಲಿ ಸಾರ್ವಜನಿಕರ ಅಥವಾ ಮಾಧ್ಯಮದ ಕಡೆಯಿಂದ ಯಾವ ಪೊಲೀಸರ ಕಡೆಯಿಂದ ಮತ್ತು ಘಟನೆಗೆ ಸಂಬಂಧಿಸಿದ ಸಾಕ್ಷ್ಯವನ್ನು ನಿರಾಕರಿಸಲು ಬಂದಿಲ್ಲ ಎಂದು ಹೇಳಿದೆ. ವಿಕಾಸ್ ದುಬೆ ಅವರ ಪತ್ನಿ ಕೂಡ ಆಯೋಗದ ಮುಂದೆ ಹಾಜರಾಗಲಿಲ್ಲ.
ಆಯೋಗವು ತನ್ನ 132 ಪುಟಗಳ ತನಿಖಾ ವರದಿಯಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ಸುಧಾರಣೆಗಳ ಕುರಿತು ಹಲವಾರು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ, ರಾಜ್ಯದ ದೊಡ್ಡ ನಗರಗಳಾದ ಪ್ರಯಾಗ್‌ರಾಜ್, ಆಗ್ರಾ ಮತ್ತು ಮೀರತ್‌ನಲ್ಲಿ ಪೊಲೀಸ್ ಕಮೀಷನರೇಟ್ ವ್ಯವಸ್ಥೆಯನ್ನು ಜಾರಿಗೆ ತರಲು ಶಿಫಾರಸು ಇದೆ. ಇದರೊಂದಿಗೆ, ಪೊಲೀಸರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಆಧುನೀಕರಣಕ್ಕೆ ಒತ್ತು ನೀಡಲು, ಮಾನವ ಶಕ್ತಿಯನ್ನು ಹೆಚ್ಚಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ತನಿಖೆಯನ್ನು ಪ್ರತ್ಯೇಕಿಸಲು ಸೂಚಿಸಲಾಗಿದೆ.
ಇದರೊಂದಿಗೆ, ಕುಖ್ಯಾತ ಅಪರಾಧಿಗಳ ಬಂಧನಕ್ಕಾಗಿ ಪೊಲೀಸ್ ದಾಳಿಗಳಿಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಯನ್ನು ಆಯೋಗವು ಶಿಫಾರಸು ಮಾಡಿದೆ. ಈ ಮಾರ್ಗಸೂಚಿಯಲ್ಲಿ, ದಾಳಿಯ ಮೊದಲು ಪೊಲೀಸರು ಯಾವ ಸಿದ್ಧತೆಗಳನ್ನು ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಿದೆ.
ಇದನ್ನೂ ಓದಿ: ’’ಕಣ್ಣೆದುರೆ ಬಾಂಬ್ ಸಿಡಿದು 30 ಜನ ಸತ್ತರು’’: ಬೆಂಗಳೂರಿಗೆ ಬಂದ ಆಫ್ಘಾನ್ ಕುಟುಂಬ ಬಿಚ್ಚಿಟ್ಟ ಭಯಾನಕ ಸತ್ಯ
ರಾಜ್ಯದಲ್ಲಿ ಅಪರಾಧಿಗಳ, ಆಡಳಿತಾತ್ಮಕ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ದೊಡ್ಡ ಸಂಬಂಧವಿದೆ. ಸರ್ಕಾರವು ಕೇವಲ ಪತ್ರಿಕೆಗಳಲ್ಲಿ ಮಾತ್ರ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಈ ನೆಂಟಸ್ಥಿಕೆಯನ್ನು ಮುರಿಯಲು ನೋಡುತ್ತದೆ ಹೊರತು ವಾಸ್ತವಾಗಿ, ಬಿಜೆಪಿಗರೇ ಬೆಳೆಸಿದ ಕ್ರಿಮಿಗಳು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ