• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Atiq Ahmed: ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಟೌಟ್

Atiq Ahmed: ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಟೌಟ್

ಗ್ಯಾಂಗಸ್ಟರ್‌ ಅತೀಕ್ ಅಹ್ಮದ್ ಗುಂಡೇಟಿಗೆ ಬಲಿ (ಸಂಗ್ರಹ ಚಿತ್ರ)

ಗ್ಯಾಂಗಸ್ಟರ್‌ ಅತೀಕ್ ಅಹ್ಮದ್ ಗುಂಡೇಟಿಗೆ ಬಲಿ (ಸಂಗ್ರಹ ಚಿತ್ರ)

Atiq Ahmed Shot Dead: ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್‌ನ ಮಗ ಅಸದ್ ಅಹ್ಮದ್‌ನನ್ನು ಮೊನ್ನೆಯಷ್ಟೇ ಹತ್ಯೆ ಮಾಡಲಾಗಿತ್ತು. ಆತ ಹತ್ಯೆಯಾದ ಎರಡು ದಿನದ ನಂತರ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

 • News18 Kannada
 • 2-MIN READ
 • Last Updated :
 • Uttar Pradesh, India
 • Share this:

ಉತ್ತರ ಪ್ರದೇಶ: ಕುಖ್ಯಾತ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ (Notorious gangster Atiq Ahmed) ಗುಂಡೇಟಿಗೆ ಬಲಿಯಾಗಿದ್ದಾನೆ. ಆತನೊಂದಿಗೆ ಆತನ ಸಹೋದರ ಅಶ್ರಫ್ ಅಹ್ಮದ್ (Ashraf Ahmed) ಕೂಡ ಗುಂಡೇಟಿಗೆ ಬಲಿಯಾಗಿದ್ದಾನೆ. ಇಬ್ಬರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಗರಾಜ್‌ಗೆ (Prayagraj) ಕರೆದೊಯ್ಯುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಗಿದೆ. ಝಾನ್ಸಿಯಲ್ಲಿ (Jhansi) ನಡೆದ ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್‌ನ ಮಗ ಅಸದ್ ಅಹ್ಮದ್‌ನನ್ನು (Asad Ahmed) ಮೊನ್ನೆಯಷ್ಟೇ ಹತ್ಯೆ ಮಾಡಲಾಗಿತ್ತು. ಆತ ಹತ್ಯೆಯಾದ ಹತನಾದ ಒಂದು ದಿನದ ನಂತರ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಂದಹಾಗೆ ತೀವ್ರ ಸುದ್ದಿ ಮಾಡಿದ್ದ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಇವರಿಬ್ಬರು ಆರೋಪಿಗಳಾಗಿದ್ದರು.


ಅತಿಕ್ ಅಹ್ಮದ್‌ ಗುಂಡಿಗೆ ಬಲಿ


ಅತಿಕ್ ಅಹ್ಮದ್ ಮತ್ತು ಆತನ ಸಹೋದರ, ಅಶ್ರಫ್ ಅಹ್ಮದ್ ಇಬ್ಬರನ್ನೂ ಶೂಟೌಟ್‌ನಲ್ಲಿ ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜು ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ ಅಂತ ತಿಳಿದು ಬಂದಿದೆ. ಪ್ರಯಾಗರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ಎಂಎಲ್‌ಎನ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಹೊರಬರುತ್ತಿದ್ದಂತೆ, ಇಬ್ಬರು-ಮೂರು ಜನರು ಅವರ ಮೇಲೆ ಗುಂಡು ಹಾರಿಸಿದ್ದಾರೆ ಅಂತ ಹೇಳಲಾಗುತ್ತಿದೆ.


ಪೊಲೀಸರ ಮುಂದೆಯೇ ಗುಂಡೇಟು


ಪೊಲೀಸರು ಇಬ್ಬರನ್ನೂ ಮೆಡಿಕಲ್ ಕಾಲೇಜ್‌ಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾಧ್ಯಮದವರು ಅತೀಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಅಹ್ಮದ್‌ನ ಮುಂದೆ ಮೈಕ್ ಹಿಡಿದು, ಪ್ರಶ್ನೆ ಕೇಳುತ್ತಿದ್ದರು. ಅವರನ್ನು ಪೊಲೀಸರು ಸುತ್ತುವರೆದಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅತೀಕ್ ಅಹ್ಮದ್ ತಲೆಗೆ ಗುಂಡಿಟ್ಟು, ಪೊಲೀಸರ ಮುಂದೆಯೇ ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಮೂವರು ದಾಳಿಕೋರರಾದ ಸನ್ನಿ, ಲವ್ಲೇಶ್ ಮತ್ತು ಅರುಣ್ ಎಂಬುವರನ್ನು ಬಂಧಿಸಲಾಗಿದೆ.


ಇದನ್ನೂ ಓದಿ: Asad Ahmad Encounter: ಅತೀಕ್ ಅಹ್ಮದ್​ ಯಾರು ? ಗ್ಯಾಂಗ್​ಸ್ಟರ್​ನ ಮಗ ಎನ್​ಕೌಂಟರ್​ನಲ್ಲಿ ಬಲಿಯಾಗಿದ್ದೇಕೆ?


ಅತೀಕ್ ಅಹ್ಮದ್​ ಯಾರು?


ಆಗಸ್ಟ್ 10, 1962 ರಂದು ಜನಿಸಿದ್ದ ಅತೀಕ್​ ಅಹ್ಮದ್​ ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಸಂಸದ. ಆತ ರಾಜಕೀಯಕ್ಕೆ ಬರುವ ಮುನ್ನ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಂಡಿದ್ದ. ಮಾಫಿಯಾದಲ್ಲಿ ಗುರುತಿಸಿಕೊಂಡಿದ್ದ ಅತೀಕ್ ಅಹ್ಮದ್​ ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಸತತ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದ. ಜೊತೆಗೆ 2004 ರಿಂದ 2009ರ ವರೆಗೆ ಎಸ್​ಪಿ ಪಕ್ಷದಿಂದಲೇ ಸಂಸದನಾಗಿದ್ದ.


ಮೂರೇ ತಿಂಗಳಿಗೆ ರಾಜು ಪಾಲ್ ಕೊಲೆ


ಅಲಹಾಬಾದ್ (ಪಶ್ಚಿಮ) ಈ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಆತೀಕ್, ಫುಲ್ಬಾರ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಅಲಹಾಬಾದ್​ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಆತೀಕ್ ಅಹ್ಮದ್ ಸಹೋದರ  ಅಶ್ರಫ್ ಸ್ಪರ್ಧಿಸಿದ್ದರು, ಆದರೆ ರಾಜು ಪಾಲ್​ ತಮ್ಮ ಮೊದಲ ಚುನಾವಣೆಯಲ್ಲಿಯೇ ಅಶ್ರಪ್​ನನ್ನು ಸೋಲಿಸಿದ್ದರು. ಕ್ಷೇತ್ರದ ಶಾಸಕರಾಗಿ ಗೆಲುವು ಕಂಡ ಮೂರೇ ತಿಂಗಳಿಗೆ ರಾಜು ಪಾಲ್ ಕೊಲೆ ನಡೆದಿತ್ತು.


 ಇದನ್ನೂ ಓದಿ: Atiq Ahmed son Asad encounter: ಮಾಫಿಯಾ ಡಾನ್​, ಮಾಜಿ ಸಂಸದ ಅತೀಕ್​ ಅಹ್ಮದ್​ ಮಗನನ್ನು ಎನ್​ಕೌಂಟರ್​ ಮಾಡಿದ ಯುಪಿ ಪೊಲೀಸ್​


ಮೊನ್ನೆ ಅತೀಕ್ ಪುತ್ರನ ಕೊಲೆ
ಮೊನ್ನೆಯಷ್ಟೇ ಅತೀಕ್ ಅಹ್ಮದ್ ಪುತ್ರನನ್ನು ಎನ್‌ಕೌಂಟರ್ ಮಾಡಲಾಗಿತ್ತು. ಯುಪಿಎಸ್‌ಟಿಎಫ್ ಅಂದರೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗುರುವಾರ ಝಾನ್ಸಿಯಲ್ಲಿ (Jhansi) ನಡೆದ ಎನ್‌ಕೌಂಟರ್‌ನಲ್ಲಿ ಅಸದ್ ಮತ್ತು ಅವನ ಸಹಚರ ಗುಲಾಮ್‌ನನ್ನು ಕೊಂದಿತ್ತು. ಪ್ರಯಾಗ್‌ರಾಜ್‌ನಲ್ಲಿ ನಡೆದಿದ್ದ ಉಮೇಶ್ ಪಾಲ್ ಹತ್ಯೆ (Umesh Pal) ಪ್ರಕರಣದಲ್ಲಿ ಅಸದ್ ಮತ್ತು ಗುಲಾಂ ಇಬ್ಬರು ಪ್ರಮುಖ ಆರೋಪಿಗಳಾಗಿದ್ದರು.

First published: