Firing in Delhi's Rohini Court: ದೆಹಲಿಯ ಕೋರ್ಟ್​ ಆವರಣದಲ್ಲಿ ಸಿನಿಮೀಯ ರೀತಿ ಗುಂಡಿನ ಚಕಮಕಿ; ಗ್ಯಾಂಗ್​ಸ್ಟರ್​ ಸೇರಿ ನಾಲ್ವರ ಹತ್ಯೆ

ಸಿನಿಮೀಯ ರೀತಿಯಲ್ಲಿ ಆತನ ಎದುರಾಳಿ ತಂಡದ ನ್ಯಾಯಾಲಯದಲ್ಲಿ ವಕೀಲರ ವೇಷ ಧರಿಸಿ ಬಂದು, ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
   ದೆಹಲಿಯ ನ್ಯಾಯಾಲಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ಗಲಭೆ ವೇಳೆ ಒಬ್ಬ ಗ್ಯಾಂಗ್​ ಸ್ಟರ್​ ಮತ್ತು ಇತರೆ ಮೂವರು ಸಾವನ್ನಪ್ಪಿದ್ದಾರೆ. ಜಿತೇಂದರ್​ ಗೋಗಿ (gangster Jitender Gogi)  ಸಾವನ್ನಪ್ಪಿರುವ ಗ್ಯಾಂಗ್​ಸ್ಟರ್​. ದೆಹಲಿಯ ರೋಹಿಣಿ ನ್ಯಾಯಾಲಯದ ( Delhi’s Rohini court) ಆವರಣದಲ್ಲಿ ಗ್ಯಾಂಗ್​ಸ್ಟರ್​ ಜಿತೇಂದರ್​ ಗೋಗಿ ಎದುರಾಳಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರ ತಂಡ ಕೂಡ ಗುಂಡಿನ ದಾಳಿ ನಡೆಸಿದೆ. ತಿಹಾರ್​ ಜೈಲಿನಲ್ಲಿದ್ದ ಹಲವಾರು ಕ್ರಿಮಿನಲ್​ ಪ್ರಕರಣದಲ್ಲಿ ಮೋಸ್ಟ್​ ವಾಂಟೆಡ್​ ಆಗಿದ್ದ ಜಿತೇಂದರ್​ ಗೋಗಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತು. ಈ ವೇಳೆ ಸಿನಿಮೀಯ ರೀತಿಯಲ್ಲಿ ಆತನ ಎದುರಾಳಿ ತಂಡದ ನ್ಯಾಯಾಲಯದಲ್ಲಿ ವಕೀಲರ ವೇಷ ಧರಿಸಿ ಬಂದು, ಆತನ ಮೇಲೆ ಗುಂಡು ಹಾರಿಸಿದ್ದಾರೆ.

  ಹಲವಾರು ಕ್ರಿಮಿನಲ್​ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜಿತೇಂದರ್​ ಗೋಗಿ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನನ್ನು ಇಂದು ನ್ಯಾಯಾಲಯಕ್ಕೆ ಕರೆತರುವ ವಿಷಯ ತಿಳಿಯುತ್ತಿದ್ದಂತೆ ಆತನ ವಿರೋಧಿ ಗುಂಪು ಆತನ ಮೇಲೆ ಹಲ್ಲೆಗೆ ಸಂಚು ರೂಪಿಸಿತು. ವಕೀಲರ ವೇಷ ತೊಟ್ಟು ಬಂದ ವರು ನ್ಯಾಯಾಲಯಕ್ಕೆ ಗೋಗಿ ಬರುತ್ತಿದ್ದಂತೆ ಗುಂಡಿನ ಮಳೆಗರೆದರು. ಈ ವೇಳೆ ತಕ್ಷಣಕ್ಕೆ ಎಚ್ಚೆತ್ತ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿದರು. ಇದರಿಂದ ನ್ಯಾಯಾಲಯದ ಆವರಣದಲ್ಲಿ ಆತಂಕ ಮೂಡಿಗ ಗುಂಡಿನ ಚಕಮಕಿಗೆ ಅಲ್ಲಿದ್ದ ಜನರು ಬೆಚ್ಚಿ ಬಿದ್ದರು.  ಟಿಲ್ಲು ಗ್ಯಾಂಗ್​ಗೆ ಸೇರಿದ ಕೆಲವು ಮಂದಿ ಈ ದಾಳಿ ನಡೆಸಿದ್ದಾರೆ. ಇದು ಗ್ಯಾಂಗ್​ ವಾರ್​ ಅಲ್ಲ. ಈ ದಾಳಿಯ ವೇಳೆ ಪೊಲೀಸರ ಗುಂಡಿಗೆ ರಾಕೇಶ್​ ಅಸ್ಥಾನಾ (Rakesh Asthana) ಬಲಿಯಾಗಿದ್ದಾನೆ ಎಂದು ರೋಹಿಣಿ ಸಿಡಿಪಿ ಪ್ರಣವ್​ ತಾಯಲ್​ ತಿಳಿಸಿದ್ದಾರೆ.

  ಇದನ್ನು ಓದಿ: ಸಬ್ಸಿಡಿ ಸಂಬಂಧ ಹೊಸ ಚಿಂತನೆ ನಡೆಸಿದ ಕೇಂದ್ರ; ಇಳಿಕೆಯಾಗಲಿದೆಯಾ ಗ್ಯಾಸ್​ ಸಿಲಿಂಡರ್​ ದರ?

  ಕೊಲೆ, ದರೋಡೆ, ಸುಲಿಗೆ ಸೇರಿದಂತೆ 19 ಪ್ರಕರಣಗಳ ಮೇಲೆ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿ ಕಳೆದ ಏಪ್ರಿಲ್​ನಲ್ಲಿ ಜಿತೇಂದರ್​ ಗೋಗಿಯನ್ನು ಬಂಧಿಸಲಾಗಿತ್ತು.

  30 ವರ್ಷದ ಗೋಗಿ 2010ರಲ್ಲಿ ತನ್ನ ತಂದೆಯ ಸಾವಿನ ಬಳಿಕ ಶಾಲೆ ತೊರೆದು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ.

  ಗೋಗಿ 2010ರಲ್ಲಿ ಪ್ರವೀಣ್ ಎಂಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ. ಬಳಿಕ ದೆಹಲಿ ವಿಶ್ವವಿದ್ಯಾನಿಲಯದ ಶ್ರದ್ಧಾನಂದ ಕಾಲೇಜಿನಲ್ಲಿ ನಡೆದ ಚುನಾವಣೆ ವೇಳೆ ಗೋಗಿ ಮತ್ತು ಸ್ನೇಹಿತರು ಸಂದೀಪ್ ಮತ್ತು ರವೀಂದರ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ, ಗುಂಡು ಹಾರಿಸಿದರು.

  (ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿ)
  Published by:Seema R
  First published: