Ecuador Jail Riots| ಈಕ್ವೆಡಾರ್ ಜೈಲಿನಲ್ಲಿ ಗ್ಯಾಂಗ್ ವಾರ್; ಕನಿಷ್ಠ 116 ಜನ ಸಾವು, ಐವರ ಶಿರಚ್ಛೇದ!

ಕಾರಾಗೃಹಗಳ ನಿಯಂತ್ರಣಕ್ಕಾಗಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ಹೋರಾಡುತ್ತಿರುವ ಮಾರಕ ಘಟನೆಗಳ ಸರಣಿಯಲ್ಲಿ ಇದು ಇತ್ತೀಚಿನದು. ಫೆಬ್ರವರಿಯಲ್ಲೂ ಸಹ ಇಂತಹದ್ದೇ ಘಟನೆ ನಡೆದಿದ್ದು, ಈ ವೇಳೆ 79 ಕೈದಿಗಳು ಏಕಕಾಲದ ಕೊಲ್ಲಲ್ಪಟ್ಟಿದ್ದರು ಎಂದು ತಿಳಿದುಬಂದಿದೆ.

ಈಕ್ವೆಡಾರ್ ಜೈಲಿನ ಹೊರಗೆ ಕಂಡು ಬಂದ ದೃಶ್ಯ.

ಈಕ್ವೆಡಾರ್ ಜೈಲಿನ ಹೊರಗೆ ಕಂಡು ಬಂದ ದೃಶ್ಯ.

 • Share this:
  ಕ್ವಿಟೊ, ಈಕ್ವೆಡಾರ್; ದಕ್ಷಿಣ ಅಮೆರಿಕದ (South America) ಈಕ್ವೆಡಾರ್ (Ecuador) ದೇಶದ ಜೈಲನಲ್ಲಿ ನಡೆದ ಗ್ಯಾಂಗ್​ವಾರ್​ಗೆ (Gang War) ಕನಿಷ್ಟ 116 ಜನ ಮೃತಪಟ್ಟಿದ್ದು (116 Prisoners Killed in Ecuador), 5 ಜನರ ಶಿರಚ್ಚೇದ ಮಾಡಲಾಗಿದೆ, ಉಳಿದವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಇದು ಈಕ್ವೆಡಾರ್ ಇತಿಹಾಸದಲ್ಲೇ ಅತ್ಯಂತ ಕರಾಳ ಹತ್ಯಾಕಾಂಡ ಎಂದು ಹೇಳಲಾಗುತ್ತಿದೆ. ಈಕ್ವೆಡಾರ್​ ಜೈಲಿನಲ್ಲಿ ಪ್ರಮುಖ ಡ್ರಗ್ ಮಾಫಿಯಾದ ಕೈದಿಗಳನ್ನು ಬಂಧಿಸಿ ಇಡಲಾಗಿತ್ತು. ಆದರೆ, ಈ ಡ್ರಗ್ ಮಾಫಿಯಾದ (Drugs Mafia) ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ಈ ಹತ್ಯಾಕಾಂಡ ನಡೆದಿದೆ. ಈ ಹತ್ಯಾಕಾಂಡದಲ್ಲಿ 116 ಜನ ಮೃತಪಟ್ಟಿದ್ದು, ಕೈದಿಗಳು ಗ್ರೆನೇಡ್‌ಗಳನ್ನು ಎಸೆದಿದ್ದಾರೆ ಎಂದು ಪೊಲೀಸ್ ಕಮಾಂಡರ್ ಫೌಸ್ಟೊ ಬ್ಯೂನಾನೊ (Police commander Fausto Buenaño) ಮಾಹಿತಿ ನೀಡಿದ್ದಾರೆ. ಹೀಗಾಗಿ ಈಕ್ವೆಡಾರ್ ದೇಶದಲ್ಲೇ ಅತ್ಯಂತ ಕೆಟ್ಟ ಜೈಲು ಹಿಂಸಾಚಾರ ಎನ್ನಲಾಗುತ್ತಿದೆ.

  ಪ್ರಸ್ತುತ ಈಕ್ವೆಡಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಬಲ ಮೆಕ್ಸಿಕನ್ ಮಾದಕವಸ್ತು ಕಳ್ಳಸಾಗಣೆ ತಂಡಗಳಿಂದ ದಂಗೆಯನ್ನು ಆದೇಶಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈಕ್ವೆಡಾರ್ ನ ಕಾರಾಗೃಹ ಸೇವಾ ನಿರ್ದೇಶಕ ಬೊಲಿವಾರ್ ಗಾರ್​ಜೋನ್ (Bolivar Garzon) ಸ್ಥಳೀಯ ರೇಡಿಯೋಗೆ "ಪರಿಸ್ಥಿತಿ ಭಯಾನಕವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಜೈಲಿನ ನಿಯಂತ್ರಣವನ್ನು ಮರಳಿ ಪಡೆಯುವ ಸಲುವಾಗಿ ಅಲ್ಲಿನ ಸರ್ಕಾರ 400 ಜನ ಹೆಚ್ಚವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ್ಧಾರೆ.

  ಜೈಲಿನ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಈಕ್ವೆಡಾರ್ ನ ಕಾರಾಗೃಹ ಸೇವಾ ನಿರ್ದೇಶಕ ಬೊಲಿವಾರ್ ಗಾರ್​ಜೋನ್, "ಜೈಲಿನಲ್ಲಿ ಡ್ರಗ್ಸ್ ಮಾಫಿಯಾದ ನಡುವೆ ಇದ್ದಕ್ಕಿದ್ದಂತೆ ಗ್ಯಾಂಗ್ ವಾರ್ ಆರಂಭವಾಗಿತ್ತು. ಈ ಗಲಭೆಯಲ್ಲಿ ಸ್ಪೋಟಕ ಮತ್ತು ಬಂದೂಕನ್ನು ಬಳಕೆ ಮಾಡಲಾಗಿದೆ. ಹಲವು ಕೈದಿಗಳು ಗ್ರಾನೇಡ್ ಗಳನ್ನೂ ಸಹ ಎಸೆದಿದ್ದಾರೆ.  ಈ ಘರ್ಷಣೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಕೊನೆಗೆ ಜೈಲಿಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಈಗ ನಾವು ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಅಲ್ಲದೆ, ಜೈಲಿನಲ್ಲಿ ಅನೇಕ ಶವಗಳು ಪತ್ತೆಯಾಗುತ್ತಿದ್ದು, ಅದನ್ನು ಹೊರತೆಗೆಯಲಾಗುತ್ತಿದೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: ಅ.2ರೊಳಗೆ ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸದಿದ್ದರೆ ಜಲ ಸಮಾಧಿಯಾಗುತ್ತೇನೆ; ಪರಮಹಂಸ ಆಚಾರ್ಯ

  ಕಾರಾಗೃಹಗಳ ನಿಯಂತ್ರಣಕ್ಕಾಗಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ಹೋರಾಡುತ್ತಿರುವ ಮಾರಕ ಘಟನೆಗಳ ಸರಣಿಯಲ್ಲಿ ಇದು ಇತ್ತೀಚಿನದು. ಫೆಬ್ರವರಿಯಲ್ಲೂ ಸಹ ಇಂತಹದ್ದೇ ಘಟನೆ ನಡೆದಿದ್ದು, ಈ ವೇಳೆ 79 ಕೈದಿಗಳು ಏಕಕಾಲದ ಕೊಲ್ಲಲ್ಪಟ್ಟಿದ್ದರು ಎಂದು ತಿಳಿದುಬಂದಿದೆ. ಜೈಲಿನ ಸಾಮರ್ಥ್ಯಕ್ಕಿಂತ ಶೇ.30 ರಷ್ಟು ಅಧಿಕ ಖೈದಿಗಳನ್ನು ಈ ಜೈಲಿನಲ್ಲಿ ಬಂಧಿಸಿ ಇಟ್ಟಿದ್ದೆ ಈ ದುರ್ಘಟನೆ ಮತ್ತೊಂದು ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೆ, ಈ ಘಟನೆ ಬೆನ್ನಿಗೆ ಈಕ್ವೆಡಾರ್​ ದೇಶದ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ದೇಶದ ಜೈಲು ವ್ಯವಸ್ಥೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: