Gang Rape: ಮಧ್ಯಪ್ರದೇಶ; ಸಾಮೂಹಿಕ ಅತ್ಯಾಚಾರವೆಸಗಿ ಮಹಿಳೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡು ತುರುಕಿದ ಕಾಮುಕರು!

Crime News: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಾಲ್ವರು ಯುವಕರು ಮಧ್ಯ ವಯಸ್ಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ತುರುಕಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಜ. 11): ಕೆಲವು ದಿನಗಳ ಹಿಂದಷ್ಟೇ ಜಾರ್ಖಂಡ್​ನಲ್ಲಿ 50 ವರ್ಷದ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಮಧ್ಯಪ್ರದೇಶದಲ್ಲಿ ಇನ್ನೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಾಲ್ವರು ಯುವಕರು ಮಧ್ಯ ವಯಸ್ಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ತುರುಕಿ ಕೊಲ್ಲಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಆ ಮಹಿಳೆ ಬದುಕುಳಿದಿದ್ದು, ಗುಪ್ತಾಂಗದೊಳಗಿನ ಗಾಯದಿಂದ ರಕ್ತಸ್ರಾವವುಂಟಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಸಂತ್ರಸ್ತ ಮಹಿಳೆ ಮನೆಯಲ್ಲಿದ್ದಾಗ ಶನಿವಾರ ರಾತ್ರಿ ಆಕೆಯ ಮನೆಯ ಬಾಗಿಲು ತಟ್ಟಿದ ಆರೋಪಿ ಕುಡಿಯಲು ನೀರು ಬೇಕೆಂದು ಕೇಳಿದ್ದ. ಆದರೆ, ಆ ಮಹಿಳೆ ಅಷ್ಟು ತಡರಾತ್ರಿಯಲ್ಲಿ ಬಾಗಿಲು ತೆರೆಯಲು ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ತನ್ನ ಸ್ನೇಹಿತರನ್ನು ಕರೆಸಿ, ಆ ಮನೆಯ ಬಾಗಿಲು ಒಡೆದು ಒಳಗೆ ಹೋಗಿದ್ದ. ಬಳಿಕ ನಾಲ್ವರು ಸ್ನೇಹಿತರು ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ನಂತರ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ತೂರಿಸಿ, ಹೊಡೆದು ಹಿಂಸೆ ನೀಡಿದ್ದರು.

4 ವರ್ಷಗಳ ಹಿಂದೆ ಆ ಮಹಿಳೆಯ ಗಂಡ ಸಾವನ್ನಪ್ಪಿದ್ದರು. ಬಳಿಕ ಒಂಟಿ ಮನೆಯಲ್ಲಿ ತನ್ನಿಬ್ಬರು ಚಿಕ್ಕ ಮಕ್ಕಳೊಂದಿಗೆ ಆಕೆ ಏಕಾಂಗಿಯಾಗಿ ವಾಸವಾಗಿದ್ದರು. ಆ ಮನೆಯ ಎದುರು ಸಣ್ಣ ಗೂಡಂಗಡಿಯನ್ನು ಇಟ್ಟುಕೊಂಡಿದ್ದ ಆ ಮಹಿಳೆಗೆ ಅದೇ ಜೀವನಾಧಾರವಾಗಿತ್ತು. ಆ ಮಹಿಳೆಯ ಮನೆಗೆ ನಡುರಾತ್ರಿ ನೀರು ಕೇಳಿಕೊಂಡು ಆರೋಪಿಗಳು ಹೋಗಿದ್ದರು. ಬಳಿಕ ಈ ದುರ್ಘಟನೆ ನಡೆದಿತ್ತು.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಜಾರ್ಖಂಡ್​​ ವಿಧವೆಯ ಸ್ಥಿತಿ ಗಂಭೀರ

ಗಂಭೀರವಾಗಿ ಗಾಯಗೊಂಡಿದ್ದ ಆ ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ವಿಪರೀತ ರಕ್ತಸ್ರಾವ ಉಂಟಾಗಿದ್ದರಿಂದ ಅಲ್ಲಿನ ವೈದ್ಯರು ಸಿಧಿ ಜಿಲ್ಲಾಸ್ಪತ್ರೆಗೆ ಸೇರಿಸಲು ಸೂಚಿಸಿದ್ದರು. ಪ್ರಜ್ಞಾಹೀನರಾಗಿದ್ದ ಆ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆಸಿ, ವಿಕೃತಿ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 ಮೂರ್ನಾಲ್ಕು ದಿನಗಳ ಹಿಂದೆ ಜಾರ್ಖಂಡ್​ನಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಇಲ್ಲಿನ ಚತ್ರಾ ಜಿಲ್ಲೆಯಲ್ಲಿ 50 ವರ್ಷದ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಕಾಮುಕರು ಆಕೆಯ ಗುಪ್ತಾಂಗದೊಳಗೆ ಗ್ಲಾಸ್ ಪೀಸ್​ಗಳನ್ನು ತೂರಿಸಿದ್ದರು. ಆಕೆಯನ್ನು ಬಿಹಾರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಅಂಗಗಳಿಗೆ ಗಾಯವಾಗಿರುವುದರಿಂದ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ.

ಗುರುವಾರ ರಾತ್ರಿ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದ ಆಕೆಯನ್ನು ಅಪಹರಿಸಿದ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕುಡಿದ ಮತ್ತಿನಲ್ಲಿ ಅತ್ಯಾಚಾರ ನಡೆಸಿದ್ದ ಕಾಮುಕರು ತಾವು ಕುಡಿದ ಬಾಟಲಿಯನ್ನೇ ಒಡೆದು, ಆ ಗ್ಲಾಸ್​ ಪೀಸ್​ಗಳಿಂದ ಆಕೆಯ ಗುಪ್ತಾಂಗಕ್ಕೆ ಗಾಯ ಮಾಡಿದ್ದರು. ಗುಪ್ತಾಂಗದೊಳಗೆ ಗ್ಲಾಸ್​ ಪೀಸ್​ಗಳು ಸೇರಿಕೊಂಡು ಆಕೆ ಅರೆಜೀವವಾಗಿದ್ದರು. ಅದೇ ರೀತಿಯ ಘಟನೆ ಇದೀಗ ಮಧ್ಯಪ್ರದೇಶದಲ್ಲಿ ನಡೆದಿರುವುದು ಇಡೀ ದೇಶದ ಜನರು ತಲೆ ತಗ್ಗಿಸುವಂತೆ ಮಾಡಿದೆ.
Published by:Sushma Chakre
First published: