Sushma ChakreSushma Chakre
|
news18-kannada Updated:January 19, 2021, 9:01 AM IST
ಪ್ರಾತಿನಿಧಿಕ ಚಿತ್ರ.
ತಿರುವನಂತಪುರಂ (ಜ.19): ಕೇರಳದ ಮಲಪ್ಪುರಂನ 17 ವರ್ಷದ ಅಪ್ರಾಪ್ತೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಕೆಲವು ತಿಂಗಳಿನಿಂದ 38 ಜನರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಆ ಯುವತಿ ದೂರು ನೀಡಿದ್ದಾಳೆ.
ನಿರ್ಭಯಾ ಸೆಂಟರ್ನಲ್ಲಿ ಕೌನ್ಸೆಲಿಂಗ್ ಸೆಷನ್ ವೇಳೆ ಆ ಯುವತಿ ತನ್ನ ಮೇಲಾದ ನಿರಂತರ ಅತ್ಯಾಚಾರದ ವಿಷಯ ಹೇಳಿಕೊಂಡಿದ್ದಾಳೆ ಎಂದು ಪಿಟಿಐ ವರದಿ ಮಾಡಿದೆ. 2016ರಲ್ಲಿ ಆಕೆಗೆ 13 ವರ್ಷವಾಗಿದ್ದಾಗ ಮೊದಲ ಬಾರಿಗೆ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಅದಾದ ಒಂದು ವರ್ಷದ ಬಳಿಕ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಅದಾದ ಬಳಿಕ ಆಕೆಯನ್ನು ಚೈಲ್ಡ್ ಹೋಂನಲ್ಲಿ ಇರಿಸಲಾಗಿತ್ತು.
ಆದರೆ, ಒಂದು ವರ್ಷದ ಹಿಂದೆ ಆಕೆಯ ಅಮ್ಮ ಮತ್ತು ಅಣ್ಣನ ಜೊತೆ ಮನೆಗೆ ಹೋಗಲು ಅನುಮತಿ ನೀಡಲಾಗಿತ್ತು. ಅದಾದ ಬಳಿಕ ಕೆಲಕಾಲ ಆಕೆ ನಾಪತ್ತೆಯಾಗಿದ್ದಳು. ಚೈಲ್ಡ್ ಹೋಂನಿಂದ ಹೊರಬಂದ ಆಕೆ ಎಲ್ಲಿ ಹೋದಳು ಎಂದು ಹುಡುಕಾಡಿದಾಗ ಆಕೆ ಕಳೆದ ಡಿಸೆಂಬರ್ನಲ್ಲಿ ಪಲಕ್ಕಾಡ್ನಲ್ಲಿ ಇರುವುದು ಗೊತ್ತಾಯಿತು. ಅದಾದ ನಂತರ ಆಕೆಯನ್ನು ನಿರ್ಭಯಾ ಸೆಂಟರ್ಗೆ ಸೇರಿಸಲಾಯಿತು.
ಇದನ್ನೂ ಓದಿ: Crime News: ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ; ಗರ್ಭಪಾತ ಮಾಡಿಸುವಂತೆ ಒತ್ತಾಯ
ನಿರ್ಭಯಾ ಸೆಂಟರ್ನಲ್ಲಿ ನಡೆದ ಕೌನ್ಸೆಲಿಂಗ್ ಸೆಷನ್ನಲ್ಲಿ ಹಲವು ವರ್ಷಗಳಿಂದ ತನ್ನ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಆಕೆ ಹೇಳಿಕೊಂಡಿದ್ದಾಳೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದವರಲ್ಲಿ ಬಹುತೇಕರು ನಾನಾ ಕಾರಣಗಳಿಂದ ಅಪರಾಧ ಪ್ರಕರಣಗಳಲ್ಲಿ ಸಿಲುಕಿದವರೇ ಆಗಿದ್ದರು. ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಪೋಕ್ಸೋ ಕಾಯ್ದೆಯಡಿ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಖಿನ್ನತೆಗೊಳಗಾಗಿದ್ದ ಆಕೆಗೆ ಕೌನ್ಸೆಲಿಂಗ್ ನಡೆಸಬೇಕೆಂದು ಯೋಚಿಸಿದ ನಂತರ ಆಕೆಯಿಂದ ಅಸಲಿ ಸತ್ಯ ಹೊರಗೆ ಬಂದಿತು. ಬಾಲ್ಯದಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಆಕೆಯ ಮನಸ್ಥಿತಿ ಬಹಳ ಹದಗೆಟ್ಟಿದೆ. ಆಕೆ ಇಷ್ಟಪಟ್ಟರೆ ಆಕೆಯನ್ನು ಅಮ್ಮ-ಅಣ್ಣನೊಂದಿಗೆ ಮನೆಗೆ ಕಳುಹಿಸಲಾಗುವುದು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.
Published by:
Sushma Chakre
First published:
January 19, 2021, 9:01 AM IST