HOME » NEWS » National-international » GANG RAPE DALIT GIRL GANG RAPED AND MURDERD IN UTTAR PRADESH MAHOBA CRIME NEWS SCT

Gang Rape: ದಲಿತ ಯುವತಿ ಮೇಲೆ ಅತ್ಯಾಚಾರವೆಸಗಿ, ನೇಣು ಹಾಕಿ ಕೊಂದ ಕಾಮುಕರು

Uttar Pradesh Rape: ಉತ್ತರ ಪ್ರದೇಶದ ಮಹೋಬದಲ್ಲಿ ಶನಿವಾರ ಸಂಜೆ ದಿನಸಿ, ತರಕಾರಿಗಳನ್ನು ತರಲು ಮನೆಯಿಂದ ಹೊರಗೆ ಹೋಗಿದ್ದ ದಲಿತ ಯುವತಿಯನ್ನು ಎಳೆದೊಯ್ದ ಕಾಮುಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆಯನ್ನು ಕೊಂದು, ಮರಕ್ಕೆ ನೇತು ಹಾಕಿದ್ದಾರೆ.

Sushma Chakre | news18-kannada
Updated:January 19, 2021, 3:52 PM IST
Gang Rape: ದಲಿತ ಯುವತಿ ಮೇಲೆ ಅತ್ಯಾಚಾರವೆಸಗಿ, ನೇಣು ಹಾಕಿ ಕೊಂದ ಕಾಮುಕರು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜ. 19): ಪಿಯುಸಿ ಓದುತ್ತಿದ್ದ 16 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರು ಈ ವಿಷಯ ಬೇರೆಯವರಿಗೆ ಗೊತ್ತಾಗಬಹುದು ಎಂಬ ಭಯದಿಂದ ಆಕೆಗೆ ನೇಣು ಹಾಕಿ ಕೊಂದಿದ್ದಾರೆ. ಉತ್ತರ ಪ್ರದೇಶದ ಮಹೋಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಲಕ್ನೋದಿಂದ 230 ಕಿ.ಮೀ. ದೂರದಲ್ಲಿರುವ ಮಹೋಬದಲ್ಲಿ ಈ ಘಟನೆ ನಡೆದಿದೆ. ಕಳೆದ ಶನಿವಾರ ಸಂಜೆ ದಿನಸಿ, ತರಕಾರಿಗಳನ್ನು ತರಲು ಮನೆಯಿಂದ ಹೊರಗೆ ಹೋಗಿದ್ದ ಯುವತಿಯನ್ನು ಎಳೆದೊಯ್ದ ಮೂವರು ಕಾಮುಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ನಂತರ ಆಕೆಗೆ ನೇಣು ಬಿಗಿದು ಕೊಂದು, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ದಿನಸಿ ಸಾಮಾನು ತರಲು ಅಂಗಡಿಗೆ ಹೋಗಿದ್ದ ಮಗಳು ರಾತ್ರಿಯಾದರೂ ಬಾರದಿದ್ದಾಗ ಅನುಮಾನಗೊಂಡ ಮನೆಯವರು ಸುತ್ತಮುತ್ತಲೂ ಹುಡುಕಾಡಿದ್ದರು. ಆಗ ರಸ್ತೆ ಬದಿಯ ಮರದಲ್ಲಿ ಮಗಳ ದೇಹ ನೇತಾಡುತ್ತಿದ್ದುದು ಕಂಡಿತ್ತು.

ಅವರದೇ ಊರಿನ ರೋಹಿತ್, ತರುಣ್, ಭೂಪೇಂದ್ರ ಎಂಬ ಮೂವರು ಪುಂಡರು ಆಕೆಯ ಮೇಲೆ ಕಣ್ಣಿಟ್ಟಿದ್ದರು. ಅವರೇ ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಮೃತ ಯುವತಿಯ ತಂದೆ ಆರೋಪಿಸಿದ್ದಾರೆ.

ಇದನ್ನೂ ಓದಿ: Crime News: ಕುರಿ ಎಂದುಕೊಂಡು 8 ತಿಂಗಳ ಮಗುವನ್ನು ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ!

ಇದಕ್ಕೂ ಮೊದಲು ಕೂಡ ಅವರು ತಮ್ಮ ಮಗಳಿಗೆ ಕಿರುಕುಳ ನೀಡಿದ್ದರು. ದಿನವೂ ಫೋನ್ ಮಾಡಿ, ಆಕೆಯನ್ನು ಹೊರಗೆ ಬರುವಂತೆ ಪೀಡಿಸುತ್ತಿದ್ದರು. ಆದರೆ, ಅದಕ್ಕೆ ಆಕೆ ವಿರೋಧಿಸಿದ್ದಳು. ಅದೇ ಕೋಪದಿಂದ ಅವರು ಮಗಳನ್ನು ಕೊಂದಿದ್ದಾರೆ ಎಂದು ಮೃತ ಯುವತಿಯ ತಾಯಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಹತ್ರಾಸ್​ನಲ್ಲಿ 20 ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ 1 ತಿಂಗಳ ಅಂತರದಲ್ಲಿ ಉತ್ತರ ಪ್ರದೇಶದಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ನಡೆದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹತ್ರಾಸ್​ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಮೃತದೇಹವನ್ನು ಅವರ ಕುಟುಂಬಸ್ಥರಿಗೂ ನೀಡದೆ ಪೊಲೀಸರೇ ಸುಟ್ಟುಹಾಕಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು.
Published by: Sushma Chakre
First published: January 19, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories