ಬಿಜೆಪಿ ಶಾಸಕನ ವಿರುದ್ಧದ ಗ್ಯಾಂಗ್​ ರೇಪ್ ಪ್ರಕರಣ; ಸಾಕ್ಷಗಳಿಲ್ಲ ಎಂದು ಕ್ಲೀನ್​ಚಿಟ್​ ನೀಡಿದ ಉತ್ತರಪ್ರದೇಶ ಪೊಲೀಸರು

ಬಿಜೆಪಿ ಶಾಸಕ ತ್ರಿಪಾಠಿ ಮತ್ತು ಅವರ ರಕ್ತಸಂಬಂಧಿ 7 ಜನರ ವಿರುದ್ಧ 40 ವರ್ಷದ ವಿಧವೆ ಮಹಿಳೆಯೊಬ್ಬರು 2016-2017 ರಲ್ಲಿ ಇವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬುಧವಾರ ದೂರು ನೀಡಿದ್ದರು. ಈ ದೂರನ್ನು ಆದರಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು. 

MAshok Kumar | news18-kannada
Updated:February 22, 2020, 7:46 PM IST
ಬಿಜೆಪಿ ಶಾಸಕನ ವಿರುದ್ಧದ ಗ್ಯಾಂಗ್​ ರೇಪ್ ಪ್ರಕರಣ; ಸಾಕ್ಷಗಳಿಲ್ಲ ಎಂದು ಕ್ಲೀನ್​ಚಿಟ್​ ನೀಡಿದ ಉತ್ತರಪ್ರದೇಶ ಪೊಲೀಸರು
ಪ್ರಾತಿನಿಧಿಕ ಚಿತ್ರ.
  • Share this:
ಬದೋಹ: ಸಾಮೂಹಿಕ ಅತ್ಯಾಚಾರ ಪ್ರಕರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ ಅವರಿಗೆ ಉತ್ತರ ಪ್ರದೇಶ ಪೊಲೀಸರು ಶನಿವಾರ ಕ್ಲೀನ್ ಚಿಟ್ ನೀಡಿದ್ದು, ಅವರ ವಿರುದ್ಧ "ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸೋದರಳಿಯನನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.

ಬಿಜೆಪಿ ಶಾಸಕ ತ್ರಿಪಾಠಿ ಮತ್ತು ಅವರ ರಕ್ತಸಂಬಂಧಿ 7 ಜನರ ವಿರುದ್ಧ 40 ವರ್ಷದ ವಿಧವೆ ಮಹಿಳೆಯೊಬ್ಬರು 2016-2017 ರಲ್ಲಿ ಇವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬುಧವಾರ ದೂರು ನೀಡಿದ್ದರು. ಈ ದೂರನ್ನು ಆದರಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು.

ದೂರಿನಲ್ಲಿ, "ಮೊದಲು 2016 ರಲ್ಲಿ ತ್ರಿಪಾಠಿ ಅವರಿಂದ ನಾನು ಅತ್ಯಾಚಾರಕ್ಕೊಳಗಾಗಿದ್ದೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು.
ಇನ್ನೂ 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತ್ರಿಪಾಠಿ ನನ್ನನ್ನು ಒಂದು ತಿಂಗಳ ಕಾಲ ಹೋಟೆಲೊಂದರಲ್ಲಿ ಕೂಡಿಹಾಕಿದ್ದರು.

ಈ ಸಂದರ್ಭದಲ್ಲಿ ಏಳು ಆರೋಪಿಗಳು ಹೋಟೆಲ್​ಗೆ ಭೇಟಿ ನೀಡಿ ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ನಾನು ಇದರಿಂದ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಲು ಒತ್ತಾಯಿಸಲಾಯಿತು" ಎಂದು ಸಂತ್ರಸ್ತೆ ಆರೋಪಿಸಿದ್ದಳು.

ಆದರೆ, ಈ ಎಫ್ಐಆರ್ ಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಸೇರದಂರೆ ಐದು ಮಂದಿಯನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದನ್ ಸಿಂಗ್, “ತನಿಖೆಯ ಸಮಯದಲ್ಲಿ ಬದೋಹ ಶಾಸಕ ಮತ್ತು ಇತರ ಐವರ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಹೀಗಾಗಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ತ್ರಿಪಾಠಿ ಅವರ ಸೋದರ ಅಳಿಯ ಸಂದೀಪ್ ತಿವಾರಿ ಅವರನ್ನು ಬಂಧಿಸಲಾಗಿದೆ.ಅಲ್ಲದೆ, ಎಫ್ಐಆರ್​ನಲ್ಲಿ ಹೆಸರಿಸಲಾಗಿರುವ ಕುಟುಂಬದ ಮತ್ತೊಬ್ಬ ಸದಸ್ಯ ನಿತೇಶ್ ವಿರುದ್ಧ ಮಹಿಳೆಯನ್ನು ದುರುಪಯೋಗಪಡಿಸಿಕೊಂಡ ಮತ್ತು ನಿಂದಿಸಿದ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

“ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ ನಂತರ, ತನಿಖೆಯನ್ನು ಗುಲಾಫ್ಷಾ ಮಹಿಳಾ ಪೊಲೀಸ್ ಠಾಣೆ ಇನ್​ಚಾರ್ಚ್​ ಸೇರಿದಂತೆ ಇಬ್ಬರು ಸದಸ್ಯರ ತಂಡಕ್ಕೆ ಹಸ್ತಾಂತರಿಸಲಾಗಿದ್ದು, ಆಕೆಯ ಆರೋಪಗಳನ್ನು ದೃಢೀಕರಿಸಲು ಯಾವುದೇ ಪುರಾವೆಗಳು ಸಿಗಲಿಲ್ಲ. ಸಂತ್ರಸ್ತ ಮಹಿಳೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ನಿರ್ಭಯಾ ಪ್ರಕರಣ: ಮಾನಸಿಕ ಅಸ್ವಸ್ಥ ಎಂಬ ಅಪರಾಧಿ ವಿನಯ್ ಶರ್ಮಾ ಮನವಿಯನ್ನು ತಿರಸ್ಕರಿಸಿದ ದೆಹಲಿ ಕೋರ್ಟ್
First published: February 22, 2020, 7:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading