Madhya Pradesh Gang Rape: ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ; ಘಟನೆ ಚಿತ್ರೀಕರಿಸಿ ಬೆದರಿಸುತ್ತಿದ್ದ ಆರೋಪಿಗಳ ಬಂಧನ

ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ದುಷ್ಕರ್ಮಿಗಳು ಆಕೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದರು. ಅಲ್ಲದೇ, ಈ ವಿಡಿಯೋ ತೋರಿಸಿ ಬೆದರಿಸಿ ಹಣ ಕೀಳುತ್ತಿದ್ದರು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಇಂದೋರ್​(ಸೆ. 25): 30 ವರ್ಷದ ಪೊಲೀಸ್​ ಕಾನ್ಸ್​​ಟೇಬಲ್ (Gang Rape on Women police)​ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯಲ್ಲಿ (Madhya Pradesh) ಈ ಅಮಾನವೀಯ ಘಟನೆ ನಡೆದಿದೆ. ಮಹಿಳಾ ಕಾನ್ಸ್​​ಟೇಬಲ್​ ಮೇಲೆ ಎರಗಿದ ಕಾಮುಕರು ಈ ಘಟನೆಯ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದು, ಈ ಘಟನೆ ಕುರಿತು ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಒಡ್ಡಿದ್ದರು​. ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳಾ ಕಾನ್ಸ್​​ಟೇಬಲ್​ ಸೆ. 13ರಂದು ದೂರು ದಾಖಲಿಸಿದ್ದರು.

  ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ಸಂಬಂದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಘಟನೆಯ ಮುಖ್ಯ ಆರೋಪಿಯ ತಾಯಿಯನ್ನು ಸಹ ಬಂಧಿಸಲಾಗಿದೆ.

  ಆರೋಪಿಗಳು ಫೇಸ್​​ ಬುಕ್​ ಮೂಲಕ ಸಂತ್ರಸ್ತೆ ಸ್ನೇಹ ಬೆಳಸಿದ್ದಾರೆ. ಬಳಿಕ ಮೊಬೈಲ್​ ನಂಬರ್​ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದು, ವಾಟ್ಸಾಪ್​ನಲ್ಲಿ ಚಾಟಿಂಗ್​ ನಡೆಸುತ್ತಿದ್ದರು.

  ಇದೇ ಆತ್ಮೀಯತೆ ಹಿನ್ನಲೆ ಸಂತ್ರಸ್ತೆಯನ್ನು ಆರೋಪಿ ತನ್ನ ಸಹೋದರನ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದ. ಅಲ್ಲಿಯೇ ಇಬ್ಬರು ಸಹೋದರರು ಮತ್ತೊರ್ವ ವ್ಯಕ್ತಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ದುಷ್ಕರ್ಮಿಗಳು ಆಕೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದರು. ಅಲ್ಲದೇ, ಈ ವಿಡಿಯೋ ತೋರಿಸಿ ಬೆದರಿಸಿ ಹಣ ಕೀಳುತ್ತಿದ್ದರು.

  ಇದನ್ನು ಓದಿ: ಅತ್ಯಾಚಾರ ಸಂತ್ರಸ್ತೆ ಮಗು ಮಾರಾಟ ಮಾಡಲು ಯತ್ನ; 13 ಮಂದಿ ವಿರುದ್ಧ ಪ್ರಕರಣ

  ಪ್ರಕರಣ ಮುಖ್ಯ ಆರೋಪಿಯ ತಾಯಿ ಮತ್ತು ಆತನ ಸಂಬಂಧಿ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೇ ಹಣವನ್ನು ಕೀಳಲು ಯತ್ನಿಸಿದರು ಎಂದಿದ್ದಾರೆ.‘

  ಸದ್ಯ ಈ ಮಹಿಳಾ ಕಾನ್ಸಟೇಬಲ್​ ಇಂದೋರ್​ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾವುಇ ನೀಮಚ್​ನಲ್ಲಿ ಕಾರ್ಯ ನಿರ್ವಹಿಸುವಾಗ ಈ ಘಟನೆ ನಡೆದಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದು ಮಹಿಳಾ ಪೊಲೀಸ್​​ ಠಾಣೆಯ ಅಧಿಕಾರಿ ಅನುರಾಧ ಗಿರ್ವಾಲ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
  Published by:Seema R
  First published: