Ganesh Chaturthi: ಮಗಳ ಸ್ಕೂಲ್ ಫೀಸ್ ಪಾವತಿಸಲು ಖೈದಿಯಿಂದ ಗಣೇಶನ ಮೂರ್ತಿ ತಯಾರಿಸಿ ಮಾರಾಟ!

ಸೆರೆಯಲ್ಲಿ ಖೈದಿಯಾಗಿ ಜೀವನ ಸಾಗಿಸುವಾಗ ಜೈಲಿನಿಂದ ಹೊರಬಂದು ಕುಟುಂಬದೊಂದಿಗೆ ಶಾಂತಿಯುತ ಜೀವನ ನಡೆಸುವ ತವಕದಲ್ಲಿರುತ್ತಾರೆ. ಇಂಥದ್ದೇ ಒಂದು ಕಥೆ ಇಲ್ಲಿದೆ ಓದಿ

ಗಣೇಶ ವಿಗ್ರಹಗಳನ್ನು ತಯಾರಿ

ಗಣೇಶ ವಿಗ್ರಹಗಳನ್ನು ತಯಾರಿ

  • Share this:
ಯಾವುದೋ ಒಂದು ಕಾರಣದಿಂದ ಕುಟುಂಬವನ್ನು ಪೋಷಿಸುವ ಅದೆಷ್ಟೋ ವ್ಯಕ್ತಿಗಳು ಜೈಲುವಾಸಿಯಾಗಿ (Jail) ಜೀವನ ಪೂರ್ತಿ ಸೆರೆಮನೆಯಲ್ಲಿಯೇ ಕಳೆಯಬೇಕಾಗುತ್ತದೆ. ತಪ್ಪು ಮಾಡುವ ಸಮಯದಲ್ಲಿ ಅವರಿಗೆ ಪಶ್ಚಾತ್ತಾಪ ಹಾಗೂ ಮುಂದಿನ ಜೀವನದ ಕರಾಳತೆಯ ಅನುಭವ ಆಗದೇ ಇದ್ದರೂ, ಸೆರೆಯಲ್ಲಿ ಖೈದಿಯಾಗಿ (Prisoner) ಜೀವನ ಸಾಗಿಸುವಾಗ ಜೈಲಿನಿಂದ ಹೊರಬಂದು ಕುಟುಂಬದೊಂದಿಗೆ (Family) ಶಾಂತಿಯುತ ಜೀವನ ನಡೆಸುವ ತವಕದಲ್ಲಿರುತ್ತಾರೆ. ತಾವಿಲ್ಲದೇ ಕುಟುಂಬ ಸದಸ್ಯರು ಪಡುತ್ತಿರುವ ಬವಣೆಗಳು ಕಣ್ಣಿಗೆ ಕಟ್ಟುತ್ತದೆ. ಅಹಮದಾಬಾದ್‌ನ ಸೆಂಟ್ರಲ್ ಜೈಲ್‌ನಲ್ಲಿ ಜೀವಾವಧಿ ಶಿಕ್ಷೆ (Life Imprisonment) ಅನುಭವಿಸುತ್ತಿರುವ 47 ರ ಹರೆಯದ ವಿಗ್ರಹ ತಯಾರಕ ಗಣೇಶ್ ಭಾಟಿ ಕೂಡ ಇಂತಹುದೇ ಕ್ಷೋಭೆಯಲ್ಲಿದ್ದಾರೆ. ಕೊಲೆ ಶಿಕ್ಷೆ ಅನುಭವಿಸುತ್ತಿರುವ ಭಾಟಿ ಕಾರಣಾಂತರಗಳಿಂದ ಪೆರೋಲ್ ಮೇಲೆ ಹೊರಬಂದಿದ್ದಾರೆ.

ಕೊಲೆ ಆರೋಪಿಯಾಗಿರುವ ವಿಗ್ರಹ ತಯಾರಕ ಗಣೇಶ್ ಪನ್ನಾಭಾಯಿ, ಜುಲೈ 11 ರಂದು ಜೈಲಿನಿಂದ ತಾತ್ಕಾಲಿಕವಾಗಿ ಹೊರಬಂದಿದ್ದರೂ ಗಣೇಶ ಮೂರ್ತಿಗಳನ್ನು ತಯಾರಿಸಲು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಮಗಳ ಶಾಲಾ ಶುಲ್ಕ ಪಾವತಿಸಲು ಗಣೇಶ ವಿಗ್ರಹಗಳ ತಯಾರಿ
ಗಣೇಶ ಚತುರ್ಥಿಯ ಸಮಯದಲ್ಲಿ ಒಂದಿಷ್ಟು ಗಣೇಶ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ತನ್ನ 12 ರ ಹರೆಯದ ಮಗಳ ಶಾಲಾ ಶುಲ್ಕವನ್ನು ಪಾವತಿಸಬಹುದು ಹೀಗೆ ನನ್ನ ಕುಟುಂಬಕ್ಕೆ ಆಧಾರವಾಗಿರಬಹುದು ಎಂದು ಗಣೇಶ್ ಹೇಳುತ್ತಾರೆ. ಕ್ಷುಲ್ಲಕ ವಿಷಯಕ್ಕೆ ಪಕ್ಕದ ಮನೆಯವನನ್ನು ಕೊಲೆ ಮಾಡಿದ ವಿಚಾರಕ್ಕೆ ಜೈಲು ಸೇರಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಗಣೇಶ್‌ನೊಂದಿಗೆ ಅವರ ತಂದೆ ಹಾಗೂ ಚಿಕ್ಕಪ್ಪ ಕೂಡ ತಪ್ಪಿತಸ್ಥರಾಗಿದ್ದು ಸೆರೆಮನೆವಾಸ ಅನುಭವಿಸುತ್ತಿದ್ದಾರೆ.

ಗಣೇಶ ಮೂರ್ತಿ ತಯಾರಿಕೆಯಲ್ಲಿ ಗಣೇಶ್ ಭಾಟಿ
ತಾತ್ಕಾಲಿಕವಾಗಿ ಸೆರೆಮನೆಯಿಂದ ಗಣೇಶ್ ಭಾಟಿ ಬಿಡುಗಡೆಗೊಂಡಿದ್ದರೂ ಗಣೇಶ ಮೂರ್ತಿಗಳ ತಯಾರಿಯಲ್ಲಿ ತೊಡಗಿದ್ದಾರೆ. ಈಗಾಗಲೇ 30 ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಭಾಟಿ ತಯಾರಿಸಿದ್ದು ಆಗಸ್ಟ್ 31 ರಂದು ಗಣೇಶ ಚತುರ್ಥಿ ಇರುವುದರಿಂದ ಹಬ್ಬಕ್ಕೆ ಎರಡು ಮೂರು ದಿನಗಳು ಇರುವಾಗಲೇ ವಿಗ್ರಹಗಳ ಖರೀದಿಗೆ ಜನ ಮುಗಿಬೀಳುತ್ತಾರೆ.

ಒಳ್ಳೆಯ ಸಂಪಾದನೆ ಇದೆ
ಮಗಳ ಶಾಲಾ ಶುಲ್ಕವನ್ನು ಪಾವತಿಸಲು ನೆರವಾಗುವ ಈ ಮೂರ್ತಿಗಳನ್ನು ಮಾರಿ ಗಣೇಶ್ ಭಾಟಿ ರೂ 40,000 ದಿಂದ ರೂ 50,000 ಹಣ ಸಂಪಾದಿಸಬಹುದು ಎಂದು ಹೇಳುತ್ತಾರೆ. ಭಾಟಿ ಅವರ ಕುಟುಂಬ ಕೂಡ ಗಣೇಶ ವಿಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದೆ.

2017 ರಲ್ಲಿ ದೆಹಲಿಯ ತಿಹಾರ್ ಜೈಲ್‌ನಲ್ಲಿ ಆಯೋಜಿಸಲಾದ ಗಣೇಶ ಮೂರ್ತಿ ತಯಾರಿಕೆ ಸ್ಪರ್ಧೆಯಲ್ಲಿ ನಾನು ಗುಜರಾತ್ ಜೈಲ್ ಅನ್ನು ಪ್ರತಿನಿಧಿಸಿದ್ದೆ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಗಣೇಶ್.

ಇದನ್ನೂ ಓದಿ:  Father and Daughter: ಮಗಳ ಫೀಸ್ ಕಟ್ಟೋದ್ದಕ್ಕೆ ಈ ತಂದೆ ಏನೆಲ್ಲಾ ಕೆಲಸ ಮಾಡ್ತಾರೆ ನೋಡಿ; ನೋಡಿದ್ರೆ ಪಾಪ ಅನಿಸುತ್ತೆ

ರಾಜ್ಯ ಸರ್ಕಾರದ ಉಪಶಮನದ ಮಾನದಂಡಗಳ ಅಡಿಯಲ್ಲಿ ಗಣೇಶ್ ಅವರು ಪೂರ್ವ ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರವು ಗಣೇಶ್ ಅರ್ಜಿಯನ್ನು ಅನುಕೂಲಕರವಾಗಿ ಪರಿಗಣಿಸಿದಲ್ಲಿ ನಾನು ಮರಳಿ ಸಮಾಜದಲ್ಲಿ ಬದುಕಬಹುದು ಹಾಗೂ ಕುಟುಂಬದೊಂದಿಗೆ ಶಾಂತಿಯುತ ಜೀವನವನ್ನು ನಡೆಸಬಹುದು ಎಂಬುದಾಗಿ ಗಣೇಶ್ ಆಶಾದಾಯಕವಾಗಿ ಹೇಳುತ್ತಾರೆ.

ಕುಟುಂಬಕ್ಕೆ ನೆರವಾಗಲು ಪೆರೋಲ್ ಮೇಲೆ ಬಿಡುಗಡೆ
ಕೆಲವು ಕಠಿಣ ಸಮಯಗಳನ್ನು ಎದುರಿಸುತ್ತಿರುವ ಅವರ ಕುಟುಂಬಕ್ಕೆ ಸಹಾಯ ಮಾಡುವುದಕ್ಕಾಗಿ ಹಣವನ್ನು ಸಂಪಾದಿಸಲು ನೆರವಾಗುವಂತೆ ಭಾಟಿಗೆ ಪೆರೋಲ್ ನೀಡಲಾಗಿದೆ ಎಂದು ಹೆಚ್ಚುವರಿ ಡಿಜಿಪಿ (ಜೈಲುಗಳು) ಕೆಎಲ್‌ಎನ್ ರಾವ್ ತಿಳಿಸಿದ್ದಾರೆ. ಸೆರೆಮನೆಯಲ್ಲಿ ಕೂಡ ಗಣೇಶ್ ಭಾಟಿ ಉತ್ತಮ ನಡವಳಿಕೆಯನ್ನು ಪ್ರದರ್ಶಿಸಿದ್ದು ಒಳ್ಳೆಯ ದಾಖಲೆಯನ್ನು ಹೊಂದಿದ್ದಾರೆ. ಪರೋಲ್‌ನಲ್ಲಿ ಎಂದಿಗೂ ಅವರು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ನಡೆಸಲಿಲ್ಲ. ಪರೋಲ್ ಅವಧಿ ಮುಗಿದ ಬಳಿಕ ಸ್ವತಃ ತಾವೇ ಸೆರೆಮನೆಗೆ ಮರಳುತ್ತಾರೆ. ಒಳ್ಳೆಯ ರೆಕಾರ್ಡ್ ಹೊಂದಿರುವ ಅಪರಾಧಿಗಳು ಸಾಮಾನ್ಯವಾಗಿ ಪರೋಲ್ ಪಡೆಯುತ್ತಾರೆ ಅಂತೆಯೇ ತಮ್ಮ ಕೌಶಲ್ಯಗಳನ್ನು ಬಳಸಿ ಕುಟುಂಬಗಳಿಗೆ ಆಧಾರವಾಗಿರುವಂತೆ ದುಡಿಯುತ್ತಾರೆ. ಎಂಬುದು ಜೈಲುಗಳ ಆಡಳಿತ ಅಧಿಕಾರಿ ಎಫ್‌ಎಂ ರಾಥ್ವಾ ಅಭಿಪ್ರಾಯವಾಗಿದೆ.

ಇದನ್ನೂ ಓದಿ:  Viral News: ಮಗನ ಜೊತೆ ತಾಯಿಯೂ ಶಾಲೆ ಕಲೀತಾಳೆ! ಹೀಗೊಂದು ವಿಚಿತ್ರ ಘಟನೆ

ಈ ದಿಸೆಯಲ್ಲಿಯೇ ಭಾಟಿಗೆ ಕೂಡ ಪರೋಲ್ ನೀಡಲಾಗಿದೆ. ಭಾಟಿ ಕೂಡ ಸಮಾಜಕ್ಕೆ ಮರಳಿ ತಮ್ಮ ಕುಟುಂಬದೊಂದಿಗೆ ಶಾಂತಿಯುತವಾಗಿ ಬದುಕಬೇಕೆಂದು ನಾವು ಭಾವಿಸುತ್ತೇವೆ ಎಂಬುದು ರಾಥ್ವಾ ಹೇಳಿಕೆಯಾಗಿದೆ.
Published by:Ashwini Prabhu
First published: