• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Asaram Bapu: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ! ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವನಿಗೆ ಮತ್ತೊಂದು ಶಾಕ್!

Asaram Bapu: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ! ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವನಿಗೆ ಮತ್ತೊಂದು ಶಾಕ್!

ಅಸಾರಾಂ ಬಾಪು

ಅಸಾರಾಂ ಬಾಪು

ಅಹಮದಾಬಾದ್‌ನ ತನ್ನ ಆಶ್ರಮದಲ್ಲಿ ಶಿಷ್ಯೆಯೊಬ್ಬಳನ್ನು ತನ್ನ ಕಾಮಕ್ಕೆ ಕಾಮಕ್ಕೆ ಬಲಿಯಾಗಿಸಿದ ಅಸಾರಾಂನನ್ನು ನ್ಯಾಯಾಲಯ ನಿನ್ನೆ ದೋಷಿ ಎಂದು ಘೋಷಿಸಿತ್ತು. ಇಂದು ಶಿಕ್ಷೆಯ ಮೇಲಿನ ಚರ್ಚೆಯ ನಂತರ, ನಂಬಿಕೆಯ ಸೋಗಿನಲ್ಲಿ ಅಪರಾಧ ಎಸಗಿದ ತಪ್ಪಿಗೆ ಅಸಾರಾಂಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Gujarat, India
 • Share this:

ಗಾಂಧಿನಗರ, ಗುಜರಾತ್: ಜೋಧಪುರ ಜೈಲಿನಲ್ಲಿ (Jodhpur Jail) ಜೀವಾವಧಿ (life sentence) ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ (self-proclaimed godman Asaram Bapu) ಕೋರ್ಟ್ ಮತ್ತೊಂದು ಶಾಕ್ ಕೊಟ್ಟಿದೆ. ಮತ್ತೊಂದು ಕೇಸ್‌ನಲ್ಲಿ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆಯಾಗಿದೆ. ದಶಕಗಳ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಗಾಂಧಿನಗರ ಸೆಷನ್ಸ್ ಕೋರ್ಟ್ (Gandhinagar Sessions Court) ಜೀವಾವಧಿ ಶಿಕ್ಷೆ ವಿಧಿಸಿದೆ. ಅಹಮದಾಬಾದ್‌ನ ತನ್ನ ಆಶ್ರಮದಲ್ಲಿ ಶಿಷ್ಯೆಯೊಬ್ಬಳನ್ನು ತನ್ನ ಕಾಮಕ್ಕೆ ಕಾಮಕ್ಕೆ ಬಲಿಯಾಗಿಸಿದ ಅಸಾರಾಂನನ್ನು ನ್ಯಾಯಾಲಯ ನಿನ್ನೆ ದೋಷಿ ಎಂದು ಘೋಷಿಸಿತ್ತು. ಮಂಗಳವಾರ, ಶಿಕ್ಷೆಯ ಮೇಲಿನ ಚರ್ಚೆಯ ನಂತರ, ನಂಬಿಕೆಯ ಸೋಗಿನಲ್ಲಿ ಅಪರಾಧ ಎಸಗಿದ ತಪ್ಪಿಗೆ ಅಸಾರಾಂಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.


2013ರಲ್ಲಿ ದಾಖಲಾಗಿದ್ದ ದೂರು


2013ರಲ್ಲಿ ಸಂತ್ರಸ್ತೆ ಅಸಾರಾಂ ಬಾಪು ವಿರುದ್ಧ ದೂರು ದಾಖಲಿಸಿದ್ದರು. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಬಲಪ್ರಯೋಗ ಸೇರಿದಂತೆ ಹಲವು ಅಪರಾಧಗಳಲ್ಲಿ ಅಸಾರಾಂ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಸಾರಾಂ ಅವರ ಪತ್ನಿ ಮತ್ತು ಪುತ್ರಿ ಸೇರಿದಂತೆ ಆರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಸಂತ್ರಸ್ತೆಯ ತಂಗಿಯನ್ನು ಅಸಾರಾಂನ ಮಗ ನಾರಾಯಣ ಸಾಯಿ ಕಾಮತೃಷೆಗೆ ಬಲಿಯಾಗಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನೂ ಅನುಭವಿಸಿದ್ದಾನೆ.


ಜೈಲಿನಲ್ಲಿದ್ದ ಸ್ವಯಂ ಘೋಷಿತ ದೇವಮಾನವನಿಗೆ ಮತ್ತೆ ಶಿಕ್ಷೆ


ವಕೀಲರು ಈಗ ಹೈಕೋರ್ಟ್ ಮೆಟ್ಟಿಲೇರಲು ಹೊರಟಿದ್ದಾರೆ. ಈ ತೀರ್ಪನ್ನು ನಾವು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಅಸಾರಾಂ ಪರ ವಕೀಲರು ಹೇಳಿದ್ದಾರೆ. ಇಲ್ಲಿಯವರೆಗೂ ಅಸಾರಾಂ ಅವರಿಗೆ ನ್ಯಾಯಾಲಯದಿಂದ ಯಾವುದೇ ರಿಲೀಫ್ ಸಿಕ್ಕಿಲ್ಲ ಎಂಬುವುದು ಉಲ್ಲೇಖನೀಯ. ಅವರು ಎದುರಿಸುತ್ತಿರುವ ಎರಡನೇ ಅತ್ಯಾಚಾರ ಪ್ರಕರಣದಲ್ಲಿ, ಕಳೆದ ವರ್ಷ ನವೆಂಬರ್‌ನಲ್ಲಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.


ಇದನ್ನೂ ಓದಿ: Bharat Jodo Yatra: 12 ರಾಜ್ಯ, 136 ದಿನ, 4 ಸಾವಿರ ಕಿಲೋ ಮೀಟರ್ ಪಾದಯಾತ್ರೆ! ಭಾರತ್ ಜೋಡೋ ಯಾತ್ರೆಗೆ ಶ್ರೀನಗರದಲ್ಲಿ ತೆರೆ


ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್


ಅಸಾರಾಂ ಅವರಿಗೆ ವಯಸ್ಸಾಗಿದೆ, ಹಲವು ರೀತಿಯ ಕಾಯಿಲೆಗಳಿವೆ, ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಜಾಮೀನು ಪಡೆಯುವ ಹಕ್ಕಿದೆ ಎಂದು ಅಸಾರಾಂ ಪರವಾಗಿ ವಾದಿಸಲಾಯಿತು. ಆದರೆ ನ್ಯಾಯಾಲಯ ಯಾವುದೇ ರೀತಿಯ ರಿಲೀಫ್ ನೀಡದ ಕಾರಣ ವಿಚಾರಣೆಯನ್ನು ಮುಂದೂಡಲಾಗಿತ್ತು.


ಅಸಾರಾಂ ದೋಷಿ ಎಂದು ತೀರ್ಪು ನೀಡಿದ್ದ ಕೋರ್ಟ್


2013ರಲ್ಲಿ ಸಂತ್ರಸ್ತೆ ಅಸಾರಾಂ ಬಾಪು ವಿರುದ್ಧ ದೂರು ದಾಖಲಿಸಿದ್ದರು. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಬಲಪ್ರಯೋಗ ಸೇರಿದಂತೆ ಹಲವು ಅಪರಾಧಗಳಲ್ಲಿ ಅಸಾರಾಂ ದೋಷಿ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ ಕೆ ಸೋನಿ ನಿನ್ನೆ ತೀರ್ಪು ನೀಡಿದ್ದರು.


9 ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆ


ಇನ್ನು, ಈ ಬಾರಿ ಅಸಾರಾಂ ದೋಷಿ ಎಂದು ಸಾಬೀತಾಗಿರುವ ಪ್ರಕರಣದ ವಿಚಾರಣೆಯು ಸುಮಾರು 9 ವರ್ಷಗಳಿಂದ ನಡೆದು ಬಂದಿದೆ. ಈ ಪ್ರಕರಣದ ತನಿಖಾಧಿಕಾರಿ ದಿವ್ಯಾ ರವಿಯಾ ಅವರಿಗೆ ಹಲವು ಬಾರಿ ಕೊಲೆ ಬೆದರಿಕೆ ಕೂಡ ಬಂದಿತ್ತು. ಆದರೂ ದಿವ್ಯಾ ರವಿಯಾ ತಮ್ಮ ಕರ್ತವ್ಯದಿಂದ ಹಿಂದೆ ಸರಿಯದೆ, ತನಿಖೆ ಮುಂದುವರೆಸಿದ್ದರು. ಈ ಪ್ರಕರಣ ಸಂಬಂಧ ಒಟ್ಟು 68 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಯಾವ ಯಾವ ಸೆಕ್ಷನ್ ಅಡಿ ಕೇಸ್?


ನ್ಯಾಯಾಲಯವು ಭಾರತೀಯ ದಂಡ ಸಂಹಿತೆ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು), 342 (ತಪ್ಪು ಬಂಧನ), 354 (ಹೆಣ್ಣಿನ ನಮ್ರತೆಯನ್ನು ಆಕ್ರಮಣ ಅಥವಾ ಕ್ರಿಮಿನಲ್ ಬಲದಿಂದ ದುರುಪಯೋಗ ಮಾಡುವುದು), 357 ಅಡಿಯಲ್ಲಿ ಅಸಾರಾಂ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಹಲ್ಲೆ) ಮತ್ತು 506 (ಅಪರಾಧ ಬೆದರಿಕೆ)  ಅಡಿ ಶಿಕ್ಷೆ ಘೋಷಣೆಯಾಗಿದೆ.

Published by:Annappa Achari
First published: