• Home
  • »
  • News
  • »
  • national-international
  • »
  • Gandhi Jayanti 2022: ಮಹಾತ್ಮಾ ಗಾಂಧಿ ಜನ್ಮದಿನ; ಪಿಎಂ ಮೋದಿ ಸೇರಿ ಹಲವರಿಂದ ಸ್ಮರಣೆ

Gandhi Jayanti 2022: ಮಹಾತ್ಮಾ ಗಾಂಧಿ ಜನ್ಮದಿನ; ಪಿಎಂ ಮೋದಿ ಸೇರಿ ಹಲವರಿಂದ ಸ್ಮರಣೆ

ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸಿ ಸಾರ್ವಜನಿಕರು ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.

  • Share this:

ದೆಹಲಿ: ಮಹಾತ್ಮ ಗಾಂಧೀಜಿಯವರ 153 ನೇ ಜನ್ಮದಿನದಂದು (Gandhi Jayanti 2022)  ಪ್ರಧಾನಿ ನರೇಂದ್ರ ಮೋದಿ ಅವರು (PM Narendra Modi) ಭಾನುವಾರ  ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿ ನಮನ ಸಲ್ಲಿಸಿದ ಅವರು "ಗಾಂಧಿಜಯಂತಿಯಂದು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಈ ಗಾಂಧಿ ಜಯಂತಿಯು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಯಾವಾಗಲೂ ಬಾಪು ಅವರ ಆದರ್ಶಗಳನ್ನು ಪಾಲಿಸುತ್ತೇವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸಿ ಸಾರ್ವಜನಿಕರು ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಟ್ವಿಟರ್‌ನಲ್ಲಿ  ಪ್ರತಿಯೊಬ್ಬರೂ ಮಹಾತ್ಮ ಗಾಂಧಿಯವರ ಹೆಜ್ಜೆಗಳನ್ನು ಅನುಸರಿಸಿ ಮತ್ತು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಗಾಂಧಿ ಜನ್ಮ ವಾರ್ಷಿಕೋತ್ಸವವು ಪ್ರತಿಯೊಬ್ಬರಿಗೂ "ತಮ್ಮ ಜೀವನದ ಮೌಲ್ಯಗಳಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು" ಒಂದು ಸಂದರ್ಭವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ..


ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಮಹಾತ್ಮಾ ಗಾಂಧೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ಭಾರತ್ ಜೋಡೋ ಯಾತ್ರೆಯಲ್ಲಿ ಗಾಂಧಿ ಸ್ಮರಣೆ
ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮೂರನೇ ದಿನಕ್ಕೆ ಕಾಲಿಡಲಿದ್ದು ಬದನವಾಳು ಗ್ರಾಮದಲ್ಲಿ ರಾಹುಲ್ ಗಾಂಧಿಯಿಂದ ಗಾಂಧಿ ಸ್ಮರಣೆ ಮಾಡಲಿದ್ದಾರೆ. ಬದನವಾಳು ಗಾಂಧಿ ಗ್ರಾಮೋದ್ಯೋಗ ಕೇಂದ್ರದಿಂದ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಪುಷ್ಪ ನಮನ ಸಲ್ಲಿಸಿ ಬಳಿಕ ಗಾಂಧಿ ಸ್ಮರಣೆ ಪ್ರಾರ್ಥನೆ ನಡೆಸಲಿದ್ದಾರೆ.  ಜೋಡೋ ಭಾರತ್ ಯಾತ್ರಿಗಳಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ.


ಇದನ್ನೂ ಓದಿ: Congress President: ಕೈ ಅಧ್ಯಕ್ಷ ಗಾದಿಗೆ ಖರ್ಗೆ, ತರೂರ್ ಫೈಟ್! ರಾಜ್ಯಸಭಾ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ


ಬೆಳಗ್ಗೆ 10 ಗಂಟೆಗೆ ಬದನವಾಳು ಶಾಲೆಗೆ ಭೇಟಿ ನೀಡಲಿರುವ ಸಂಸದ ರಾಹುಲ್ ಗಾಂಧಿ ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚುವ ಕಾರ್ಯ, ಶ್ರಮದಾನ ನಡೆಸಲಿದ್ದಾರೆ. ಬಳಿಕ ಖಾದಿ ಕೇಂದ್ರದಲ್ಲಿ ಖಾದಿ ಗ್ರಾಮೋದ್ಯೋಗಿಗಳೊಂದಿಗೆ ಸಂವಾದ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಕಡಕೋಳ ಇಂಡಸ್ಟ್ರಿಯಲ್ ಏರಿಯಾದಿಂದ ಮೈಸೂರು ಎಪಿಎಂಸಿಗೆ ಪಾದಯಾತ್ರೆ ನಡೆಸಲಿದ್ದಾರೆ.


ಇದನ್ನೂ ಓದಿ: Viral Video: ಏರ್‌ಪೋರ್ಟ್‌ಗೆ ಬಂದ ಶ್ರೀರಾಮ, ಕಾಲಿಗೆರಗಿ ನಮಸ್ಕರಿಸಿದ ಮಹಿಳೆ! ಭಕ್ತಿಪೂರ್ವಕ ದೃಶ್ಯ ನೀವೂ ನೋಡಿ


ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಟ್ವೀಟ್‌ನಲ್ಲಿ ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಸ್ಮರಿಸಿದ್ದಾರೆ ಮತ್ತು ಗಾಂಧಿಯವರ ಬೋಧನೆಗಳನ್ನು ನೆನಪಿಸಿಕೊಂಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: