ಮಹಾರಾಷ್ಟ್ರ ರಾಜಕೀಯಕ್ಕೆ ಹಿಂದಿರುಗುವುದಿಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದ ನಿತಿನ್ ಗಡ್ಕರಿ

ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಗೆ ಆತ್ಮೀಯರಾಗಿದ್ದ ಗಡ್ಕರಿ ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಇವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಅದಕ್ಕೆ ಶಿವಸೇನೆ ಒಪ್ಪಿಕೊಳ್ಳಲಿದೆ ಎಂಬ ಲೆಕ್ಕಾಚಾರದಲ್ಲಿ ಗಡ್ಕರಿ ಹೆಸರು ಸಿಎಂ ಸ್ಥಾನಕ್ಕೆ ಹರಿದಾಡಿತ್ತು.

HR Ramesh | news18-kannada
Updated:November 7, 2019, 3:16 PM IST
ಮಹಾರಾಷ್ಟ್ರ ರಾಜಕೀಯಕ್ಕೆ ಹಿಂದಿರುಗುವುದಿಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದ ನಿತಿನ್ ಗಡ್ಕರಿ
ರೇಖಾಚಿತ್ರ- ಮೀರ್ ಸುಹೈಲ್
  • Share this:
ಮುಂಬೈ: ಮಹಾರಾಷ್ಟ್ರ ರಾಜಕೀಯಕ್ಕೆ ತಾನು ಮತ್ತೆ ಬರುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಪದವಿ ವಿಚಾರವಾಗಿ ಶಿವಸೇನೆ ಜೊತೆಗಿನ ಬಿಕ್ಕಟ್ಟು ಶಮನದ ಪರಿಹಾರವಾಗಿ ಗಡ್ಕರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

ದೇವೇಂದ್ರ ಫಡ್ನವೀಸ್ ಅವರನ್ನು ಆಯ್ಕೆ ಮಾಡಲಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಏನೇ ನಡೆದರೂ ಅದು ಫಡ್ನವೀಸ್ ಅಡಿಯಲ್ಲೇ ನಡೆಯಲಿದೆ. ನಾನು ದೆಹಲಿಯಲ್ಲಿದ್ದೇನೆ. ಮಹಾರಾಷ್ಟ್ರಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ ಎಂದು ನಿತಿನ್ ಗಡ್ಕರಿ ಸುದ್ದಿಗಾರರಿಗೆ ಹೇಳಿದ್ದಾರೆ. ಜೊತೆಗೆ ಶಿವಸೇನೆ ಜೊತೆಗಿನ ಮಾತುಕತೆ ಶೀಘ್ರದಲ್ಲೇ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿವಸೇನೆ ಜೊತೆಗಿನ ಮೈತ್ರಿಯೊಂದಿಗೆ ದೇವೇಂದ್ರ ಫಡ್ನವೀಸ್ ನಾಯಕತ್ವದಲ್ಲಿ ಸರ್ಕಾರ ರಚನೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಗೆ ಆತ್ಮೀಯರಾಗಿದ್ದ ಗಡ್ಕರಿ ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಇವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಅದಕ್ಕೆ ಶಿವಸೇನೆ ಒಪ್ಪಿಕೊಳ್ಳಲಿದೆ ಎಂಬ ಲೆಕ್ಕಾಚಾರದಲ್ಲಿ ಗಡ್ಕರಿ ಹೆಸರು ಸಿಎಂ ಸ್ಥಾನಕ್ಕೆ ಹರಿದಾಡಿತ್ತು.

ಮಹಾರಾಷ್ಟ್ರದ ಹಿರಿಯ ನಾಯಕರಾಗಿರುವ ನಿತಿನ್ ಗಡ್ಕರಿ ಅವರು ಬುಧವಾರ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರನ್ನು ಭೇಟಿಯಾಗುವ ಮೂಲಕ ರಾಜಕೀಯ ಕಿಡಿ ಹೊತ್ತಿಸಿದ್ದರು. ಪ್ರಸ್ತುತ ಗಡ್ಕರಿ ಅವರು ನಾಗಪುರದಲ್ಲಿ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಸಭೆಯಲ್ಲಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ? ಇಂದು ರಾಜ್ಯಪಾಲರ ಭೇಟಿ

ಕೇಂದ್ರ ಸಚಿವರ ಹೆಸರನ್ನು ಪರಿಗಣಿಸಿರುವುದನ್ನು ಶಿವಸೇನೆ ಕೂಡ ಅಲ್ಲಗಳೆದಿದೆ. ಅವರು ಮುಖ್ಯಮಂತ್ರಿ ಆಗಬೇಕೆಂದು ಪಕ್ಷ ಬಯಸಿದೆ. ಮತ್ತು ಠಾಕ್ರೆ ಹಾಗೂ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರ ನಡುವೆ ಸಭೆ ನಡೆದಿದೆ ಎಂಬ ವರದಿಯನ್ನು ಶಿವಸೇನೆ ಮುಖಂಡ ಸಂಜಯ್ ರಾವತ್ ನಿರಾಕರಿಸಿದ್ದಾರೆ.

First published: November 7, 2019, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading