ದುಬಾರಿ ಸಂಚಾರಿ ದಂಡದ ಮುಖ್ಯ ಉದ್ದೇಶ ಜೀವ ರಕ್ಷಣೆ; ನೂತನ ಕಾಯ್ದೆ ಸಮರ್ಥಿಸಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕಾನೂನು ಉಲ್ಲಂಘಿಸದ ಜನರು ಭಯಪಡಬಾರದು. ತಪ್ಪು ಮಾಡದಿದ್ದರೆ ಅವರು ಯಾವುದೇ ದಂಡ ತೆರಬೇಕಿಲ್ಲ. ಅತಿ ಹೆಚ್ಚು ರಸ್ತೆ ಅಪಘಾತಗಳು ನಮ್ಮಲ್ಲಿ ಆಗುತ್ತಿವೆ. ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರು ಕಾನೂನನ್ನು ಅರಿತುಕೊಳ್ಳಬೇಕಿದೆ ಎಂದು ಗಡ್ಕರಿ ಹೇಳಿದರು.

HR Ramesh | news18-kannada
Updated:September 11, 2019, 8:13 PM IST
ದುಬಾರಿ ಸಂಚಾರಿ ದಂಡದ ಮುಖ್ಯ ಉದ್ದೇಶ ಜೀವ ರಕ್ಷಣೆ; ನೂತನ ಕಾಯ್ದೆ ಸಮರ್ಥಿಸಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
  • Share this:
ನವದೆಹಲಿ: ರಾಜ್ಯಗಳು ರಸ್ತೆ ನಿಯಮ ಉಲ್ಲಂಘನೆ ದಂಡವನ್ನು ಇಳಿಕೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆ್ದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಸಿಎನ್​ಎನ್​-ನ್ಯೂಸ್​ 18 ನೊಂದಿಗೆ ಮಾತನಾಡಿದ ಸಚಿವ ನಿತನ್​ ಗಡ್ಕರಿ, ಅತಿ ಹೆಚ್ಚಿನ ದಂಡವನ್ನು ಬಲವಂತವಾಗಿ ವಿಧಿಸುತ್ತಿರುವ ಮುಖ್ಯಕಾರಣ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಮತ್ತು ಜನರ ಜೀವನ್ನು ರಕ್ಷಿಸಲು ಎಂದು ತಿಳಿಸಿದರು.

ಹೊಸ ಮೋಟಾರ್ ವಾಹನ ಕಾಯ್ದೆಯಡಿ ಸಂಚಾರಿ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುತ್ತಿರುವ ದುಬಾರಿ ದಂಡದ ಮೊತ್ತವನ್ನು ಕಡಿಮೆಗೊಳಿಸಿ ಗುಜರಾತ್​ ರಾಜ್ಯ ಸರ್ಕಾರ ಘೋಷಣೆ ಹೊರಡಿಸಿದ ಮರುದಿನ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್​ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) ಅಳವಡಿಕೆ ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದು ತಿಳಿಸಿದರು.


ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ಪೊಲೀಸರು ದೇಶಾದ್ಯಾಂತ ಸೆಪ್ಟೆಂಬರ್​ 1ರಿಂದ ಜಾರಿಗೆ ಬಂದಿದೆ. ಹೊಸ ಕಾಯ್ದೆಯ ಪ್ರಕಾರ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದುಬಾರಿ ದಂಡವನ್ನು ಪೊಲೀಸರು ವಿಧಿಸುತ್ತಿದ್ದಾರೆ. ಇದಕ್ಕೆ ಎಲ್ಲ ರಾಜ್ಯಗಳಲ್ಲೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಈಗಾಗಲೇ ಗುಜರಾತ್​ ರಾಜ್ಯ ಸರ್ಕಾರ, ದಂಡದ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರ ಕೂಡ ದಂಡದ ಪ್ರಮಾಣ ಇಳಿಕೆ ಮಾಡುವ ಚಿಂತನೆ ಮಾಡುವುದಾಗಿ ತಿಳಿಸಿದೆ.

ಇದನ್ನು ಓದಿ: ಪ್ರತಿಭಟನೆ ಬಿಸಿ; ಟ್ರಾಫಿಕ್​ ದಂಡ ಇಳಿಕೆ ಮಾಡಲು ಸರ್ಕಾರ ನಿರ್ಧಾರ

ಹೊಸ ಮೋಟಾರು ವಾಹನ ಕಾಯ್ದೆಯಡಿ ಗುಜರಾತ್​ ರಾಜ್ಯ ಸರ್ಕಾರ ಬದಲಿಸಿರುವ ದಂಡದ ಪ್ರಮಾಣ

ಹೆಲ್ಮೇಟ್​ ಧರಿಸದಿದ್ದರೆ 1000 ದಂಡದ ಬದಲಿಗೆ 500

ಸೀಟ್​ ಬೆಲ್ಟ್​ ಹಾಕದಿದ್ದರೆ 1000 ದಂಡದ ಬದಲಿಗೆ 500

ಡಿಎಲ್​ ಇಲ್ಲದೇ ವಾಹನ ಚಲಾಯಿಸಿದರೆ ಹೊಸ ಕಾಯ್ದೆ ಪ್ರಕಾರ 5 ಸಾವಿರ ದಂಡ ಹಾಕಲಾಗುತ್ತಿದೆ. ಇದರ ಪ್ರಮಾಣವನ್ನು 3 ಸಾವಿರ ಕಡಿಮೆ ಮಾಡಿ, 2 ಸಾವಿರ ದಂಡ ವಿಧಿಸಲಾಗುತ್ತಿದೆ.

ತ್ರಿಬಲ್​ ರೈಡಿಂಗ್​ಗೆ ಸಾವಿರ ರೂ. ದಂಡದ ಬದಲಿಗೆ 100 ರೂ. ದಂಡ

ವಾಹನ ದಾಖಲಾತಿಗಳು ಇಲ್ಲದಿದ್ದರೆ ಮೊದಲ ಬಾರಿಗೆ 500 ರೂ. ಮತ್ತು ಎರಡನೇ ಬಾರಿಗೆ 1000 ರೂ. ದಂಡ

 

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ