Congress Crisis: ಜಿ-23 ನಾಯಕರಿಂದ 24 ಗಂಟೆಯೊಳಗೆ 2ನೇ ಸಭೆ, ಕುತೂಹಲ ಮೂಡಿಸಿರುವ ಕಾಂಗ್ರೆಸ್ ಬೆಳವಣಿಗೆ

ಜಿ 23 ಸದಸ್ಯರು 'ಕಾಂಗ್ರೆಸ್ ಪಕ್ಷದ ಬಗ್ಗೆ ನಂಬಿಕೆ ಇದೆ, ರಾಹುಲ್ ಗಾಂಧಿ ನಾಯಕತ್ವದಲ್ಲಿ ನಂಬಿಕೆ ಇಲ್ಲ" ಎಂದು ಹೇಳಿದ್ದಾರೆ. ಪರ್ಯಾಯವಾಗಿ 'ಸಾಮೂಹಿಕ ನಾಯಕತ್ವ' ಎಂಬ ಮಂತ್ರ ಪಠಿಸುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ಒತ್ತಡ ಹೇರಲು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಜಿ23 ನಾಯಕರು

ಜಿ23 ನಾಯಕರು

  • Share this:
ನವದೆಹಲಿ, ಮಾ.‌ 17: ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ (Five State Elections) ತೀವ್ರ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಪಕ್ಷದಲ್ಲಿ (Congress Party) ಮಳೆ ನಿಂತರೂ ಹನಿ ನಿಲ್ಲಲ್ಲ ಎನ್ನುವಂತೆ ಒಂದರ ಮೇಲೊಂದು ಘಟನಾವಳಿಗಳು ನಡೆಯುತ್ತಲೇ ಇವೆ. ಮಾರ್ಚ್ 10ರಂದು ಫಲಿತಾಂಶ ಬಂದ ಮರುದಿನವೇ ಕಾಂಗ್ರೆಸ್ ಪಕ್ಷದ ಬಂಡಾಯಗಾಋ ಗುಂಪು ಎಂದೇ ಕರೆಯಲ್ಪಡುವ ಜಿ-23 ನಾಯಕರು (G-23 Leaders) ಸಭೆ ಸೇರಿದ್ದರು. ಅಂದು ಆರಂಭವಾದ ಸಂಚಲನ ಇಂದಿಗೂ ನಿಂತಿಲ್ಲ. ನಿನ್ನೆ (ಮಾರ್ಚ್ 16)ರಂದು ಕೂಡ ಸಭೆ ನಡೆಸಿದ್ದರು. ಈಗ 24 ಗಂಟೆಗಳ ಅವಧಿಯೊಳಗೆ ಮತ್ತೆ ಸಭೆ ನಡೆಸಿದ್ದಾರೆ.

ಬೆಳಿಗ್ಗೆ ರಾಹುಲ್ ಗಾಂಧಿ ಭೇಟಿ, ಸಂಜೆ ಬಂಡಾಯ ಸಭೆ
ಗುರುವಾರ ಬೆಳಿಗ್ಗೆ ಜಿ- 23 ನಾಯಕರ ಗುಂಪಿನ ಪೈಕಿ ಒಬ್ಬರಾದ  ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಜಿ-23 ಗುಂಪಿನ ನಾಯಕ ಎಂದೇ ಹೇಳಲಾಗುತ್ತಿರುವ ಗುಲಾಮ್ ನಭಿ ಆಜಾದ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗುತ್ತಾರೆ ಎನ್ನಲಾಗುತ್ತಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ ಸಂಜಿ "ಬಂಡಾಯಗಾರರು" ಮತ್ತೊಂದು ಸಭೆ ನಡೆಸಿದ್ದಾರೆ.

ಇದನ್ನು ಓದಿ: Rahul Gandhi​ ಮೇಲೆ ನಂಬಿಕೆ ಇಲ್ಲ. ಆದರೆ, ಕಾಂಗ್ರೆಸ್​ ಮೇಲಿದೆ; ನಾಯಕತ್ವ ಬದಲಾವಣೆಗೆ G23 ನಾಯಕರ ಆಗ್ರಹ

ಒತ್ತಡ ಹೇರಲು ಸಭೆ ಮೇಲೆ ಸಭೆ
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ದೆಹಲಿ ನಿವಾಸದಲ್ಲಿ ಜಿ 23 ಸದಸ್ಯರು ಸಭೆ ಸೇರಿದ್ದಾರೆ. ಭೂಪೇಂದ್ರ ಹೂಡಾ ಮತ್ತು ಮಾಜಿ ಸಚಿವ ಕಪಿಲ್ ಸಿಬಲ್ ಅವರು ಸಭೆಯಲ್ಲಿದ್ದರು. ಈ ಹಿಂದೆ ಜಿ 23 ಸದಸ್ಯರು 'ಕಾಂಗ್ರೆಸ್ ಪಕ್ಷದ ಬಗ್ಗೆ ನಂಬಿಕೆ ಇದೆ, ಆದರೆ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ನಂಬಿಕೆ ಇಲ್ಲ" ಎಂದು ಹೇಳಿದ್ದರು. ಅದಕ್ಕಾಗಿ ಇವರು 'ಸಾಮೂಹಿಕ ನಾಯಕತ್ವ' ಎಂಬ ಮಂತ್ರ ಪಠಿಸುತ್ತಿದ್ದು ಇದೇ ಹಿನ್ನಲೆಯಲ್ಲಿ ಒತ್ತಡ ಹೇರಲು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಸುಧಾರಣೆ ಬಗ್ಗೆ ಚರ್ಚೆ
ಬುಧವಾರದ ಸಭೆಯಲ್ಲಿ ಉಪಸ್ಥಿತರಿದ್ದ ಜಿ 23 ಸದಸ್ಯ ಶಂಕರ್ ಸಿಂಗ್ ವಘೇಲಾ ಅವರು ನ್ಯೂಸ್ 18 ಜೊತೆ ಮಾತನಾಡಿ 'ಸಾಂಸ್ಥಿಕ ರಚನೆಯಲ್ಲಿ ಪುನಶ್ಚೇತನಕ್ಕೆ ಕರೆ ನೀಡಿದ್ದಾರೆ. ಪಕ್ಷಕ್ಕೆ ಹೊಸ ನಾಯಕತ್ವ ಬರಬೇಕು. ನಾವು ಕಾಂಗ್ರೆಸ್‌ನ ಸುಧಾರಣೆಯನ್ನು ಬಯಸುತ್ತೇವೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸುತ್ತಿದ್ದು ಶೀಘ್ರದಲ್ಲೇ ನಮ್ಮ ಜೊತೆಗೆ ಇತರ ನಾಯಕರು ಕೂಡ ಸೇರಿಕೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ. ಇದಲ್ಲದೆ ಭೂಪೇಂದ್ರ ಹೂಡ ಅವರು 'ಜಿ 23 ನಾಯಕರು ಕಾಂಗ್ರೆಸ್ ಪಕ್ಷವನ್ನು ವಿಭಜಿಸುವ ವಿಚಾರವನ್ನು ಹೊಂದಿಲ್ಲ' ಎಂಬ ಸಂಗತಿಯನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಇದನ್ನು ಓದಿ: ಲಂಚ ಕೇಳಿದ್ರೆ ವಾಟ್ಸಪ್ ಮಾಡಿ.. ಪಂಜಾಬ್​​​ ಅನ್ನು ಲಂಡನ್-ಪ್ಯಾರಿಸ್ ಮಾಡಬೇಕಿಲ್ಲ.. ಹೊಸ CM ಹೊಸ ಸ್ಟೈಲ್!

ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಜಿ-23 ನಾಯಕರು
ಜಿ 23 ನಾಯಕರು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. G23 ನಾಯಕರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, "ನಾವು ಕಾಂಗ್ರೆಸ್ ಪಕ್ಷದ ಈ ಕೆಳಗಿನ ಸದಸ್ಯರು ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ನಿರಾಶಾದಾಯಕ ಸಂಗತಿ ಮತ್ತು ನಮ್ಮ ಕಾರ್ಯಕರ್ತರು ಹಾಗೂ ನಾಯಕರ ನಿರಂತರ ನಿರ್ಗಮನದ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೇವೆ. ಕಾಂಗ್ರೆಸ್ ಎಲ್ಲಾ ಹಂತಗಳಲ್ಲಿ ಸಾಮೂಹಿಕ ಮತ್ತು ಅಂತರ್ಗತ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮಾದರಿಯನ್ನು ಅಳವಡಿಸಿಕೊಳ್ಳುವುದು ಒಂದೇ ದಾರಿ ಎಂದು ನಾವು ನಂಬುತ್ತೇವೆ.

ಭಾರತೀಯ ಜನತಾ ಪಕ್ಷವನ್ನು ವಿರೋಧಿಸಲು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಅವಶ್ಯಕ. 2024ಕ್ಕೆ ವಿಶ್ವಾಸಾರ್ಹ ಪರ್ಯಾಯಕ್ಕೆ ದಾರಿ ಮಾಡಿಕೊಡಲು ವೇದಿಕೆಯನ್ನು ಸೃಷ್ಟಿಸಲು ಇತರ ಸಮಾನ ಮನಸ್ಕ ಶಕ್ತಿಗಳೊಂದಿಗೆ ಸಂವಾದವನ್ನು ಪ್ರಾರಂಭಿಸಲು ನಾವು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತೇವೆ . ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು' ಎಂದು ತಿಳಿಸಿದ್ದಾರೆ.
Published by:Seema R
First published: