Mission Paani: ಈಗ ಜಲ ಜಾಗೃತಿ ಮೂಡಿದರೆ ಭವಿಷ್ಯದ ರಕ್ಷಣೆ ಸಾಧ್ಯ; ಮಹಾರಾಷ್ಟ್ರ ಸಿಎಂ ಫಡ್ನವಿಸ್

ಜಲಜಾಗೃತಿ ಭಾಗವಾಗಿ ಮಳೆಕೊಯ್ಲು ಅತಿಮುಖ್ಯವಾದುದು. ಜನರಿಗೆ ಮಳೆಕೊಯ್ಲು ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಕರೆ ನೀಡಿದರು.

Latha CG | news18
Updated:August 27, 2019, 3:22 PM IST
Mission Paani: ಈಗ ಜಲ ಜಾಗೃತಿ ಮೂಡಿದರೆ ಭವಿಷ್ಯದ ರಕ್ಷಣೆ ಸಾಧ್ಯ; ಮಹಾರಾಷ್ಟ್ರ ಸಿಎಂ ಫಡ್ನವಿಸ್
ದೇವೇಂದ್ರ ಫಡ್ನವಿಸ್
Latha CG | news18
Updated: August 27, 2019, 3:22 PM IST
ಮುಂಬೈ(ಆ.27): ಹಾರ್ಪಿಕ್‌ ಹಾಗೂ ನ್ಯೂಸ್ 18 ಕನ್ನಡ ಸಹಯೋಗದಲ್ಲಿ ಮಿಷನ್ ಪಾನಿ ಮೆಗಾ ಅಭಿಯಾನ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಭಿಯಾನದ ಮೂಲ ಉದ್ದೇಶ ಜಲ ಸಂರಕ್ಷಣೆ. ಈಗಾಗಲೇ ಹಲವು ಬಾಲಿವುಡ್‌ ಸ್ಟಾರ್‌ಗಳು ಮಿಷನ್ ಪಾನಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ನ್ಯೂಸ್​ 18 ಆರಂಭಿಸಿರುವ ಮಿಷನ್ ಪಾನಿ ಅಭಿಯಾನಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಶ್ಲಾಘನೆ ವ್ಯಕ್ತಪಡಿಸಿದರು. ಇದೊಂದು ಅದ್ಭುತ ಅಭಿಯಾನ, ಎಲ್ಲರೂ ಕೈ ಜೋಡಿಸಬೇಕು. ಅಮಿತಾಬ್​ ಬಚ್ಚನ್​​​ ಅಷ್ಟೇ ಅಲ್ಲ, ಎಲ್ಲರೂ ರಾಯಭಾರಿಗಳು ಎಂದು ಫಡ್ನವಿಸ್​ ಹೇಳಿದರು.



Mission Paani | ಮಕ್ಕಳಿಗೆ ನೀರಿನ ಉಳಿತಾಯದ ಪಾಠ ಹೇಳಿಕೊಡಿ: ಶಾಲೆಗಳಿಗೆ ಸಿಬಿಎಸ್ಇ ನಿರ್ದೇಶನ

ನೀರು ದೇಶದ ಆದ್ಯತೆ ವಿಷಯವಾಗಬೇಕು. ನೀರು ಬಳಕೆ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಬೇಕು. ಸದ್ಯಕ್ಕೇನು ಸಮಸ್ಯೆಯಿಲ್ಲ ಅಂದ್ರೂ, ಭವಿಷ್ಯ ಮುಖ್ಯ. ಈಗ ಜಲಜಾಗೃತಿ ಮೂಡಿದರೆ ಭವಿಷ್ಯದ ರಕ್ಷಣೆ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಎಚ್ಚರಿಕೆ ನೀಡಿದರು.

ಜಲಜಾಗೃತಿ ಭಾಗವಾಗಿ ಮಳೆಕೊಯ್ಲು ಅತಿಮುಖ್ಯವಾದುದು. ಜನರಿಗೆ ಮಳೆಕೊಯ್ಲು ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಕರೆ ನೀಡಿದರು.

First published:August 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...