ನವ ದೆಹಲಿ (ಆಫ್ಘನ್ 22); ತಾಲಿಬಾನ್ ಅಧಿಕಾರಕ್ಕೆ ಬರುತ್ತಲೇ ಅಫ್ಘಾನಿಸ್ತಾನ ದಿಂದ ಹೊರಹೋಗಲು ಸಾವಿರಾರು ಜನರು ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿವೆ. ಭಾರತ ವಿವಿಧ ರೀತಿಯಲ್ಲಿ ತನ್ನ ನಾಗರಿಕರನ್ನ ಅಲ್ಲಿಂದ ತೆರವುಗೊಳಿಸಿ ವಾಪಸ್ ಕರೆಸಿಕೊಳ್ಳುತ್ತದೆ. ನೇಪಾಳದ ಇಬ್ಬರು ನಾಗರಿಕರು ಸೇರಿ 390 ಜನರನ್ನ ಭಾರತದ ಮಿಲಿಟರಿ ವಿಮಾನಗಳು ಆಫ್ಘಾನಿಸ್ತಾನದಿಂದ ಇಂದು ಕರೆ ತಂದಿವೆ. ಇವರೆಲ್ಲಾ ದೆಹಲಿ ಬಳಿಯ ಹಿಂದೋನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿಯನ್ನ ಕರೆತರಲಾಗಿದೆ. 135 ಮಂದಿಯನ್ನ ಕತಾರ್ನ ರಾಜಧಾನಿ ದೋಹಾಗೆ ಸಾಗಿಸಿ ಅಲ್ಲಿಂದ ಭಾರತಕ್ಕೆ ತರಲಾಗಿದೆ. ಇನ್ನು, ಕಾಬೂಲ್ನಿಂದ ತಜಿಕಿಸ್ತಾನದ ದುಶಾನಬೆಗೆ ಸಾಗಿಸಲಾಗಿದ್ದ 87 ಮಂದಿಯನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇನ್ನೂ ಈ ಪೈಕಿ 7 ಜನ ಕನ್ನಡಿಗರನ್ನೂ ಸಹ ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳಿಂದ ಘರ್ಷಣೆ ಆರಂಭವಾದ ವೇಳೆ ಕನ್ನಡಿಗರೂ ಸಹ ಕಾಬೂಲ್ನಲ್ಲಿ ಸಿಲುಕಿದ್ದರು. ಕಳೆದ ಭಾನುವಾರವೇ 2 ಸೇನಾ ವಿಮಾನವನ್ನು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಭಾರತ ಸರ್ಕಾರ ರಾಯಭಾರಿ ಕಚೇರಿ ಅಧಿಕಾರಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿತ್ತು. ಇದರಲ್ಲಿ ಅನೇಕರು ಕನ್ನಡಿಗರೂ ಸಹ ಇದ್ದರು. ಇದೀಗ ಇಂದೂ ಸಹ ಅಫ್ಘಾನಿಸ್ತಾನದಿಂದ ರಕ್ಷಿಸಲ್ಪಟ್ಟವರಲ್ಲಿ 7 ಜನ ಕನ್ನಡಿಗರಿದ್ದಾರೆ ಎಂದು ತಿಳಿದುಬಂದಿದೆ.
ದಿನೇಶ್ ರೈ , ಜಗದೀಶ್ ಪೂಜಾರಿ, ಡಿಸೋಜ ಸೇರಿ ಮತ್ತೆ ಐವರನ್ನು ರಕ್ಷಿಸಲಾಗಿದ್ದು, ಈ ಎಲ್ಲರೂ ಮಂಗಳೂರು ಮೂಲದ ನಿವಾಸಿಗಳು ಎನ್ನಲಾಗಿದೆ. ಇವರು ಕಾಬೂಲ್ ಏರ್‌ಪೋರ್ಟ್ ನಲ್ಲಿ ಒಎಸ್ಎಸ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸ್ತಿದ್ದರು. ಆದರೆ, ಕಾಬೂಲ್ ದೀಢಿರೆಂದು ತಾಲಿಬಾನಿಗಳ ವಶವಾಶ ಕಾರಣ ವಿಚಲಿತರಾಗಿದ್ದರು. ಆದರೆ, ಇದೀಗ ಇವರನ್ನೂ ಸಹ ರಕ್ಷಿಸುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ.
ಇದನ್ನೂ ಓದಿ: ರಕ್ಷಾ ಬಂಧನದ ವಿಶೇಷ: ಭಾರತದ ರಾಜಕಾರಣದ ಪ್ರಮುಖ 5 ಅಣ್ಣ- ತಂಗಿಯರು ಇವರು...!
ಅಫ್ಘಾನಿಸ್ತಾನದಿಂದ ರಕ್ಷಿಸಲ್ಪಟ್ಟ ಎಲ್ಲರನ್ನೂ ವಿಮಾನ ನಿಲ್ದಾಣದಲ್ಲಿ ಆರ್ಟಿ ಪಿಸಿಆರ್ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಅದರ ರಿಪೋರ್ಟ್ ಬಂದ ಬಳಿಕ ಅವರ ಊರುಗಳಿಗೆ ಕಳುಹಿಸಲು ಸಿದ್ದತೆ ನಡೆಸಲಾಗುತ್ತಿದೆ. ಭಾಹಶಃ ನಾಳೆ ಕೊರೋನಾ ವರದಿ ಸಿಗುವ ಸಾಧ್ಯತೆ ಇದ್ದು, ನಾಳೆಯೇ ಎಲ್ಲರೂ ದೆಹಲಿಯಿಂದ ಕರ್ನಾಟಕಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಎಂಇಎಯಿಂದ ಕರ್ನಾಟಕ ನೋಡಲ್ ಅಧಿಕಾರಿಗೆ ಮಾಹಿತಿ ರವಾನೆಯಾಗಿದೆ ಎನ್ನಲಾಗಿದೆ.
ಇದಲ್ಲದೆ, ಮತ್ತೊಬ್ಬ ಕನ್ನಡಿಗ ಸದ್ಯ ಕಾಬೂಲ್ ಏರ್ ಪೋರ್ಟ್ ನಲ್ಲೇ ಸಿಲುಕಿದ್ದು, ಶೀಘ್ರದಲ್ಲೇ ಆತನನ್ನೂ ರಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಬ್ಬ ಕನ್ನಡಿಗ ಕಾಬೂಲ್ ನಿಂದ ಇಟಲಿಗೆ ಪ್ರಯಾಣ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Caste-Based Census| ಜಾತಿ ಆಧಾರಿತ ಜನಗಣತಿ ಒಮ್ಮೆ ನಡೆಯಬೇಕು, ಇದರಿಂದ ಜನರಿಗೆ ಪ್ರಯೋಜನವಾಗಲಿದೆ; ನಿತೀಶ್ ಕುಮಾರ್
ಈ ನಡುವೆ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಪ್ರಜೆಗಳಿಗೂ ಭಾರತಕ್ಕೆ ಬರಲು ಅವಕಾಶ ನೀಡಲಾಗಿದೆ. ಹಲವು ಆಫ್ಘನ್ ಸಿಖ್ ಮತ್ತು ಹಿಂದೂಗಳು ಭಾರತಕ್ಕೆ ಬರಲು ಹಾತೊರೆಯುತ್ತಿದ್ದಾರೆ. ಆದರೆ, ತಾವೆಲ್ಲರೂ ಅಫ್ಘನ್ನರಾಗಿರುವುದಿರಂದ ಭಾರತಕ್ಕೆ ಹೋಗದಿರಿ ಎಂದು ತಾಲಿಬಾನ್ ತಾಕೀತು ಮಾಡುತ್ತಿದೆ ಎಂದೂ ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ