ಕೇರಳದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಫ್ರಾಂಕೋ ಪ್ರಕರಣ; ಆತ್ಮಚರಿತ್ರೆಯಿಂದ ಬಯಲಾಯ್ತು ನಿಜಾಂಶ

ಈ ಪುಸ್ತಕದಲ್ಲಿನ ಹೆಚ್ಚಿನ ಆರೋಪಗಳು 2009ರಲ್ಲಿ ಇದೇ ಡಿಸಿ ಬುಕ್ಸ್​ನಿಂದಲೇ ಪ್ರಕಟವಾಗಿದ್ದ ಸಿಸ್ಟರ್ ಜೆಸ್ಮಿಯ ಆತ್ಮಚರಿತ್ರೆಯಂತೆಯೇ ಇದೆ ಎನ್ನಲಾಗುತ್ತಿದೆ.

MAshok Kumar | news18-kannada
Updated:December 2, 2019, 4:20 PM IST
ಕೇರಳದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಫ್ರಾಂಕೋ ಪ್ರಕರಣ; ಆತ್ಮಚರಿತ್ರೆಯಿಂದ ಬಯಲಾಯ್ತು ನಿಜಾಂಶ
ಸಿಸ್ಟರ್​ ಲೂಸಿ ಅವರ ಆತ್ಮ ಚರಿತ್ರೆಯ ಮುಖಪುಟ
  • Share this:
ಕ್ರೈಸ್ತ ಸನ್ಯಾಸಿಯರ ಮೇಲೆ ಅತ್ಯಾಚಾರ ವೆಸಗಿದ ಕೇರಳದ ಫ್ರಾಂಕೋ ಪ್ರಕರಣದಲ್ಲಿ ಬದುಕುಳಿದ ಸನ್ಯಾಸಿನಿಯರ ಬೆಂಬಲಿಗ 54 ವರ್ಷದ ಕ್ಯಾಥೋಲಿಕ್ ಸಿಸ್ಟರ್ ಲೂಸಿ ಕಲಪ್ಪುರ ಬರೆದಿರುವ ಆತ್ಮಚರಿತ್ರೆ ಇದೀಗ ಮಲಬಾರ್ ಚರ್ಚ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಆತ್ಮಚರಿತ್ರೆಯಲ್ಲಿ ಪ್ರಖ್ಯಾತ ಮಲಬಾರ್ ಚರ್ಚ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಲಾಗಿದೆ. ಆದರೆ, ಈ ಕುರಿತು ಕಾನೂನು ಬದ್ಧ ಕ್ರಮ ಜರುಗಿಸಲು ಹಾಗೂ ಅಧಿಕೃತವಾಗಿ ಪ್ರತಿಕ್ರಿಯಿಸಲು ಮಾತ್ರ ಚರ್ಚ್ ನಿರಾಕರಿಸಿದೆ.

ಈ ಆತ್ಮಚರಿತ್ರೆಯಲ್ಲಿ ಹಲವಾರು ಕ್ರೈಸ್ತ ಸನ್ಯಾಸಿನಿಯರು ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ಶೋಷಣೆಗೆ ಒಳಗಾದ ವಿವಿಧ ನಿದರ್ಶನಗಳ ಕುರಿತು ಉಲ್ಲೇಖಿಸಲಾಗಿದೆ. ಚರ್ಚ್​ನಲ್ಲಿನ ಸನ್ಯಾಸಿಯರ ಪೈಕಿ ಕೆಲವರು ಅನ್ಯದಾರಿಯಿಲ್ಲದೆ ಲೈಂಗಿಕತೆಗೆ ಸಹಮತ ವ್ಯಕ್ತಪಡಿಸಿದ್ದರೆ, ಅನೇಕರು ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯಕ್ಕೆ  ಬಳಲಿದ್ದಾರೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಡಿಸೆಂಬರ್ 10 ರಂದು ಡಿಸಿ ಬುಕ್ಸ್ ಅಧಿಕೃತವಾಗಿ ಬಿಡುಗಡೆ ಮಾಡಲಿರುವ "ಕಾರ್ತವಿಂಟೆ ನಾಮತ್ತಿಲ್" (ಸರ್ವಶಕ್ತನ ಹೆಸರಿನಲ್ಲಿ) ಎಂಬ ಆತ್ಮಚರಿತ್ರೆಯಲ್ಲಿ, "ಚರ್ಚ್​ನಲ್ಲಿ ದೇವರ ಹೆಸರಿನಲ್ಲಿ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಎಸಗಲಾಗಿರುವ ಲೈಂಗಿಕ ದೌರ್ಜನ್ಯದ ಕುರಿತು ಅನೇಕ ನಿದರ್ಶನಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಕೆಲವು ಕ್ರೈಸ್ತ ಕಾನ್ವೆಂಟ್​ಗಳಲ್ಲಿ ಯುವ ಸನ್ಯಾಸಿಗಳನ್ನು ಪಾದ್ರಿಗಳ ಬಳಿ ಬಲವಂತವಾಗಿ ಕಳುಹಿಸಲಾಗುತ್ತಿತ್ತು.

ಇದನ್ನೂ ಓದಿ : ಉಪ ಚುನಾವಣೆ; ಅನರ್ಹರ ಕುರಿತು ಜನರ ಮನಸ್ಥಿತಿ ಏನು? ಯಾರಿಗೆ ಸಿಹಿ, ಯಾರಿಗೆ ಕಹಿ? ಏನಾಗಲಿದೆ ಫಲಿತಾಂಶ? ಇಲ್ಲಿದೆ ಡೀಟೈಲ್ಸ್​

ಸನ್ಯಾಸಿಗಳನ್ನು ಅನೈಸರ್ಗಿಕ ಲೈಂಗಿಕ ವಿಕೃತಿಗೆ ಬಳಸಿಕೊಳ್ಳಲಾಗುತ್ತಿತ್ತು. ಪಾದ್ರಿಗಳು ಹಲವಾರು ಗಂಟೆಗಳ ಕಾಲ ಅವರ ಸನ್ಯಾಸಿನಿಯರ ನಗ್ನ ದೇಹವನ್ನು ನೋಡುತ್ತಿದ್ದರು. ಇದರಿಂದ ಸನ್ಯಾಸಿನಿಯರು ಸಾಕಷ್ಟು ಕಿರುಕುಳಗಳನ್ನು ಅನುಭವಿಸಿದ್ದಾರೆ" ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ. ಆದರೆ, ವ್ಯಯಕ್ತಿಕವಾಗಿ ಯಾರ ಹೆಸರನ್ನೂ ಇಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ.

ಈ ಪುಸ್ತಕದಲ್ಲಿನ ಹೆಚ್ಚಿನ ಆರೋಪಗಳು 2009ರಲ್ಲಿ ಇದೇ ಡಿಸಿ ಬುಕ್ಸ್​ನಿಂದಲೇ ಪ್ರಕಟವಾಗಿದ್ದ ಸಿಸ್ಟರ್ ಜೆಸ್ಮಿಯ ಆತ್ಮಚರಿತ್ರೆಯಂತೆಯೇ ಇದೆ ಎನ್ನಲಾಗುತ್ತಿದೆ.

ಸನ್ಯಾಸಿನಿಯರು ಚರ್ಚ್ ವಿರುದ್ಧ ತೋರಿಸುತ್ತಿರುವ ಈ ಆಕ್ರೋಶ ಹಾಗೂ ಇದೀಗ ಆತ್ಮಚರಿತ್ರೆಯಲ್ಲಿ ದೂರಲಾಗಿರುವ ವಿಚಾರದ ಕುರಿತು ಅಸಮಾಧಾನಗೊಂಡಿದ್ದರೂ ಸಹ ಮಲಬಾರ್​ ಕ್ಯಾಥೋಲಿಕ್​ ಚರ್ಚ್ ಈ ಕುರಿತು ಮಾತನಾಡಲು ಅಥವಾ ಕಾನೂನು ಬದ್ಧವಾಗಿ ತನ್ನ ಪ್ರತಿರೋಧವನ್ನು ಒಡ್ಡಲು ಹಿಂದೇಟು ಹಾಕುತ್ತಿದೆ.ಈ ನಡುವೆ ದೇವರ ಹೆಸರಿನಲ್ಲಿ ಚರ್ಚ್​ನಲ್ಲಿ ಸನ್ಯಾಸಿನಿಯರ ಮೇಲೆ ನಡೆಸಲಾಗುತ್ತಿದ್ದ ಲೈಂಗಿಕ ದೌರ್ಜನ್ಯದ ಕುರಿತು ಈ ಪುಸ್ತಕ ಸಾಕಷ್ಟು ಬೆಳಕು ಚೆಲ್ಲಿದ್ದು, ಇದೀಗ ಕೇರಳದ ಕ್ರೈಸ್ತ ಸಮುದಾಯದ ನಡುವೆ ಈ ವಿಚಾರ ಮತ್ತೊಮ್ಮೆ ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿದೆ.

ವರದಿ: ಚಂದ್ರಕಾಂತ್​ ವಿಶ್ವನಾಥ್​

 
First published: December 2, 2019, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading