Corona Virus: 99 ದೇಶಗಳ ಪ್ರಯಾಣಿಕರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ: 2 ಡೋಸ್​ ವ್ಯಾಕ್ಸಿನ್ ಕಡ್ಡಾಯ!

Corona Virus: ಈ 99 ರಾಷ್ಟ್ರಗಳ ಪ್ರಯಾಣಿಕರಿಗೆ ಕಡ್ಡಾಯವಾದ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದ್ದರೂ, ಅವರು ಎಲ್ಲಾ ಪ್ರಯಾಣಿಕರಂತೆ ಕೆಲವು ಮಾನದಂಡ(Criteria)ಗಳನ್ನು ಅನುಸರಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೇಂದ್ರ ಸರ್ಕಾರವು ಇತ್ತೀಚೆಗೆ ನವೀಕರಿಸಿದ ಅಧಿಸೂಚ(Updated notification)ನೆಯ ಪ್ರಕಾರ, ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ವಿರುದ್ಧ ಸಂಪೂರ್ಣವಾಗಿ ಲಸಿಕೆ(Vaccine) ಪಡೆದ 99 ದೇಶಗಳ ಪ್ರಯಾಣಿಕ(Travelers)ರಿಗೆ ಭಾರತಕ್ಕೆ ಆಗಮಿಸಿದಾಗ ಕಡ್ಡಾಯ ಸಂಪರ್ಕ ತಡೆಯಿಂದ(Mandatory Quarantine) ವಿನಾಯಿತಿ ನೀಡಲಾಗಿದೆ. ಯುನೈಟೆಡ್ ಸ್ಟೇಟ್ಸ್(United States), ಯುನೈಟೆಡ್ ಕಿಂಗ್‌ಡಮ್(United Kingdom), ಫ್ರಾನ್ಸ್(France), ಜರ್ಮನಿ(Germany) ಮತ್ತು ಇಸ್ರೇಲ್(Israel) ಅನ್ನು ಒಳಗೊಂಡಿರುವ ಈ ದೇಶಗಳನ್ನು ಸರ್ಕಾರದ ಅಧಿಸೂಚನೆಯಲ್ಲಿ 'ಎ' ವರ್ಗದ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಈ 99 ರಾಷ್ಟ್ರಗಳ ಪ್ರಯಾಣಿಕರಿಗೆ ಕಡ್ಡಾಯವಾದ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದ್ದರೂ, ಅವರು ಎಲ್ಲಾ ಪ್ರಯಾಣಿಕರಂತೆ ಕೆಲವು ಮಾನದಂಡ(Criteria)ಗಳನ್ನು ಅನುಸರಿಸಬೇಕಾಗುತ್ತದೆ.


'Category A' ಪಟ್ಟಿಯಲ್ಲಿರುವ ದೇಶಗಳು


ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ 99 ರಾಷ್ಟ್ರಗಳನ್ನು 'ಕೆಟಗರಿ ಎ' ಪಟ್ಟಿಯಲ್ಲಿ ಸೇರಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್, ಗ್ರೇಟ್ ಬ್ರಿಟನ್, ಇಸ್ರೇಲ್, ಫ್ರಾನ್ಸ್, ಜರ್ಮನಿ, ಸ್ಪೇನ್, ಆಸ್ಟ್ರೇಲಿಯ, ಬೆಲ್ಜಿಯಂ, ಬಾಂಗ್ಲಾದೇಶ, ಫಿನ್‌ಲ್ಯಾಂಡ್‌, ಕ್ರೊಯೇಷಿಯಾ, ಹಂಗೇರಿ, ರಷ್ಯಾ, ಫಿಲಿಪೈನ್ಸ್, ಕತಾರ್, ಸಿಂಗಾಪುರ, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಟರ್ಕಿ ಮತ್ತು ನೇಪಾಳ ಈ ಪಟ್ಟಿಯಲ್ಲಿರುವ ಕೆಲವು ದೇಶಗಳು.


'Category A' ದೇಶಗಳಿಗೆ ಕೋವಿಡ್-19 ಸಡಿಲಿಕೆ ನೀಡಿರುವುದಕ್ಕೆ ಕಾರಣ


ಕೇಂದ್ರದ ಅಧಿಸೂಚನೆಯ ಪ್ರಕಾರ, ಭಾರತವು ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO) ಮಾನ್ಯತೆ ಪಡೆದ ಲಸಿಕೆಗಳ "[Covid-19] ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆ" ಕುರಿತು 99 ರಾಷ್ಟ್ರಗಳೊಂದಿಗೆ ಒಪ್ಪಂದ ಹಂಚಿಕೊಂಡಿದೆ. ಮತ್ತೊಂದೆಡೆ, 'ವರ್ಗ A' ಪಟ್ಟಿಯಲ್ಲಿರುವ ಕೆಲವು ದೇಶಗಳು ಭಾರತದೊಂದಿಗೆ ಕೋವಿಡ್ -19 ಲಸಿಕೆ ಒಪ್ಪಂದದ ಪರಸ್ಪರ ಮನ್ನಣೆ ಹೊಂದಿಲ್ಲದಿದ್ದರೂ, ಅವರು ಸಂಪೂರ್ಣವಾಗಿ ಲಸಿಕೆ ಪಡೆದ ಭಾರತೀಯ ಪ್ರಜೆಗಳಿಗೆ ತಮ್ಮ ದೇಶದಲ್ಲಿ ಸಂಪರ್ಕತಡೆ-ಮುಕ್ತ ಪ್ರವೇಶವನ್ನು ಅನುಮತಿಸುತ್ತಾರೆ. 99 ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್-19 ಪ್ರೋಟೋಕಾಲ್‌ಗಳಿಗೆ ಕೆಲವು ಸಡಿಲಿಕೆಗಳನ್ನು ನೀಡುವ ನಿರ್ಧಾರವನ್ನು "ಪರಸ್ಪರ ಆಧಾರದ ಮೇಲೆ" ಮಾಡಲಾಗಿದೆ ಎಂದು ಅಧಿಸೂಚನೆ ವಿವರಿಸಿದೆ.


ಪ್ರಯಾಣಿಕರು ಅನುಸರಿಸಬೇಕಾದ Covid-19 ಪ್ರೋಟೋಕಾಲ್‌ಗಳು


99 ರಾಷ್ಟ್ರಗಳ ಪ್ರಯಾಣಿಕರು ಏರ್ ಸುವಿಧಾ (Air Suvidha) ಪೋರ್ಟಲ್‌ನಲ್ಲಿ ತಮ್ಮ ಸಂಪೂರ್ಣ ವ್ಯಾಕ್ಸಿನೇಟೆಡ್ ಸ್ಥಿತಿಯ ಸ್ವಯಂ ಘೋಷಣೆ ಸಲ್ಲಿಸಬೇಕು ಮತ್ತು 72 ಗಂಟೆಗಳ ಮೊದಲು ನಡೆಸಿದ ಋಣಾತ್ಮಕ RT-PCR ಪರೀಕ್ಷಾ ವರದಿಯನ್ನು ಸಹ ಸಲ್ಲಿಸಬೇಕು. ಪ್ರಯಾಣಿಕರು RTPCR ವರದಿಯ ಸತ್ಯಾಸತ್ಯತೆಗೆ ಸಂಬಂಧಿಸಿದ ಘೋಷಣೆಯನ್ನು ಸಹ ಸಲ್ಲಿಸಬೇಕು. ಫೇಕ್ ವರದಿ ಕೊಟ್ಟು "ಇದು ಸುಳ್ಳು ಎಂದು ಸಾಬೀತಾದಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಹೊಣೆಯಾಗುತ್ತಾರೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಇದನ್ನು ಓದಿ : ಅತಿ ವೇಗವಾಗಿ ಹರಡುತ್ತಿರುವ ನೊರೊ ವೈರಸ್‌ ಲಕ್ಷಣಗಳೇನು? ಇದು ಎಷ್ಟು ಅಪಾಯಕಾರಿ ? ಇಲ್ಲಿದೆ ಸಂಪೂರ್ಣ ಮಾಹಿತಿ

‘ಎ’ ವರ್ಗದ ದೇಶಗಳಿಂದ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೂ, ಅವರು ಭಾರತಕ್ಕೆ ಆಗಮಿಸಿದ ದಿನಾಂಕದಿಂದ ಪ್ರಾರಂಭವಾಗುವ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಬೇಕು. ಅವರು ಕೋವಿಡ್ -19ನ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದರೆ ಅಥವಾ ಮರು-ಪರೀಕ್ಷೆಯಲ್ಲಿ ಸೋಂಕಿಗೆ ಪಾಸಿಟಿವ್‌ ಬಂದರೆ, "ಅವರು ತಕ್ಷಣವೇ ಸ್ವಯಂ-ಪ್ರತ್ಯೇಕಿಸಿ ತಮ್ಮ ಹತ್ತಿರದ ಆರೋಗ್ಯ ಸೌಲಭ್ಯಕ್ಕೆ ವರದಿ ಮಾಡುತ್ತಾರೆ ಅಥವಾ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ (1075)/ರಾಜ್ಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುತ್ತಾರೆ" ಎಂದು ಅಧಿಸೂಚನೆ ಹೇಳುತ್ತದೆ.


ಲಸಕೆ ಪಡೆಯದಿದ್ದರೆ 7 ದಿನ ಹೋಮ್​ ಕ್ವಾರಂಟೈನ್​

ಕೋವಿಡ್-19 ವಿರುದ್ಧ ಭಾಗಶಃ ಲಸಿಕೆ ಪಡೆದ ಅಥವಾ ಲಸಿಕೆ ಹಾಕಿಸಿಕೊಳ್ಳದ ಪ್ರಯಾಣಿಕರು, ಭಾರತಕ್ಕೆ ಆಗಮಿಸಿದಾಗ ತಮ್ಮ ಮಾದರಿಯನ್ನು ಪರೀಕ್ಷೆಗೆ ಸಲ್ಲಿಸಬೇಕು. ಅವರು 7 ದಿನಗಳವರೆಗೆ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ, 8ನೇ ದಿನದಲ್ಲಿ ಮತ್ತೊಮ್ಮೆ ಕೋವಿಡ್-19 ಪರೀಕ್ಷೆ ತೆಗೆದುಕೊಳ್ಳಬೇಕು ಮತ್ತು ನೆಗೆಟಿವ್ ಕಂಡುಬಂದಲ್ಲಿ, ಮುಂದಿನ 7 ದಿನಗಳವರೆಗೆ ಅವರ ಆರೋಗ್ಯವನ್ನು "ಹೆಚ್ಚು ಸ್ವಯಂ-ಮೇಲ್ವಿಚಾರಣೆ" ಮಾಡಿಕೊಳ್ಳಬೇಕು.


'ಅಪಾಯದಲ್ಲಿರುವ ದೇಶಗಳು' ಎಂದು ವರ್ಗೀಕರಿಸಲಾದ ದೇಶಗಳು


ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನ, ಚೀನಾ, ಜಿಂಬಾಬ್ವೆ, ಸಿಂಗಾಪುರ, ನ್ಯೂಜಿಲೆಂಡ್, ಮಾರಿಷಸ್, ಬಾಂಗ್ಲಾದೇಶ ಮತ್ತು ಯುಕೆ ಸೇರಿದಂತೆ 10 ದೇಶಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.


ಇದನ್ನು ಓದಿ : ಲಸಿಕೆ ಒಂದು ವರ್ಷವಾದರೂ ನಮ್ಮ ದೇಹಕ್ಕೆ ಕೆಲಸ ಮಾಡುತ್ತೆ: WHO ಮುಖ್ಯ ವಿಜ್ಞಾನಿ

ಸಿಂಗಾಪುರ, ಜಿಂಬಾಬ್ವೆ ಮತ್ತು ಯುಕೆ ಈ ಮೂರು ರಾಷ್ಟ್ರಗಳನ್ನು ಭಾರತವು ಅಪಾಯದಲ್ಲಿದೆ ಎಂದು ಪರಿಗಣಿಸಲಾಗಿದೆ. ಆದರೂ 'ವರ್ಗ A' ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ, ಈ ದೇಶಗಳ ಪ್ರಯಾಣಿಕರಿಗೆ ಕಡ್ಡಾಯ ಸಂಪರ್ಕತಡೆಯಿಂದ ವಿನಾಯಿತಿ ನೀಡಲಾಗುತ್ತದೆ ಮತ್ತು ಮುಂದಿನ 14 ದಿನಗಳವರೆಗೆ ಅವರ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡುವ ಅವಶ್ಯಕತೆಯೊಂದಿಗೆ ಭಾರತಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅನುಮತಿಸಲಾಗುತ್ತದೆ.


Published by:Vasudeva M
First published: