• Home
 • »
 • News
 • »
 • national-international
 • »
 • Sonia Gandhi Reinstates Her Role| ಕಾಂಗ್ರೆಸ್​ ಪಕ್ಷಕ್ಕೆ ಮತ್ತೆ ಸೋನಿಯಾ ಗಾಂಧಿಯೇ ಫುಲ್ ಟೈಮ್ ಅಧ್ಯಕ್ಷೆ; CWC​ ಸಭೆಯಲ್ಲಿ ತೀರ್ಮಾನ!

Sonia Gandhi Reinstates Her Role| ಕಾಂಗ್ರೆಸ್​ ಪಕ್ಷಕ್ಕೆ ಮತ್ತೆ ಸೋನಿಯಾ ಗಾಂಧಿಯೇ ಫುಲ್ ಟೈಮ್ ಅಧ್ಯಕ್ಷೆ; CWC​ ಸಭೆಯಲ್ಲಿ ತೀರ್ಮಾನ!

ಸೋನಿಯಾ ಗಾಂಧಿ.

ಸೋನಿಯಾ ಗಾಂಧಿ.

CWC Meeting: ಸಭೆಯ ಆರಂಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು, ಕಾಂಗ್ರೆಸ್‌ನ ಪೂರ್ಣಾವಧಿ ಅಧ್ಯಕ್ಷರಾಗಿ ತಾವೇ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪಕ್ಷದ ಪುನರುಜ್ಜೀವನವು ಏಕತೆ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

 • Share this:

  ನವ ದೆಹಲಿ (ಅಕ್ಟೋಬರ್​ 16); ಲೋಕಸಭಾ ಚುನಾವಣೆ 2019ರ (Loksaba election 2019) ಚುನಾವಣೆ ನಂತರ ಕಾಂಗ್ರೆಸ್​ (Congress) ರಾಷ್ಟ್ರ ಮಟ್ಟದಲ್ಲಿ ನಾವಿಕನಿಲ್ಲದ ದೋಣಿಯಂತಾಗಿತ್ತು. ಸೋಲಿನ ಹೊಣೆ ಹೊತ್ತು ಅಂದಿನ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ (Rahul Gandhi) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ನಡುವೆ ಸೋನಿಯಾ ಗಾಂಧಿ (Sonia Gandhi) ಹಂಗಾಮಿ ರಾಷ್ಟ್ರಾಧ್ಯಕ್ಷೆಯಾಗಿ ಅಧಿಕಾರವನ್ನು ಮುಂದುವರೆಸಿದ್ದರೂ ಸಹ ಕಾಂಗ್ರೆಸ್‌ಗೆ ಪೂರ್ಣಾವಧಿ ಅಧ್ಯಕ್ಷ ನೇಮಕ ಚರ್ಚೆ ಮುನ್ನೆಲೆಗೆ ಬಂದಿತ್ತು. ಕಾಂಗ್ರೆಸ್​ ಹಿರಿಯ ನಾಯಕರು ಹೊಸ ರಾಷ್ಟ್ರಾಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದು ಜಿ.23 (G-23) ಕೂಟವನ್ನು ನಿರ್ಮಿಸುವ ಮೂಲಕ ಕಾಂಗ್ರೆಸ್​ ಹೈಕಮಾಂಡ್​ಗೆ ಸೆಡ್ಡು ಹೊಡೆದಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ (Delhi) ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC Meeting) ಸಭೆಯಲ್ಲಿ  "ನಾನೇ ಪೂರ್ಣಾವಧಿ ಅಧ್ಯಕ್ಷೆ" ಎಂದು ಸೋನಿಯಾ ಗಾಂಧಿ ಸ್ವತಃ ಘೋಷಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


  ಸೋನಿಯಾ ಗಾಂಧಿಯೇ ಪೂರ್ಣಾವಧಿ ಕಾಂಗ್ರೆಸ್ ಅಧ್ಯಕ್ಷೆ;


  ಸಭೆಯ ಆರಂಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು, ಕಾಂಗ್ರೆಸ್‌ನ ಪೂರ್ಣಾವಧಿ ಅಧ್ಯಕ್ಷರಾಗಿ ತಾವೇ ಮುಂದುವರಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಸೋನಿಯಾ ಗಾಂಧಿ, "ಪಕ್ಷದ ಪುನರುಜ್ಜೀವನವು ಏಕತೆ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಮೇಲೆ ಅವಲಂಬಿತವಾಗಿದೆ" ಎಂದು ಎಲ್ಲಾ ಹಿರಿಯ ನಾಯಕರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


  "ಇಡೀ ಸಂಘಟನೆಯು ಕಾಂಗ್ರೆಸ್ ಪಕ್ಷದ ಪುನರುಜ್ಜೀವನವನ್ನು ಬಯಸುತ್ತದೆ. ನಾನು ಯಾವಾಗಲೂ ಪ್ರಾಮಾಣಿಕತೆಯನ್ನು ಮೆಚ್ಚುತ್ತೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ, ನಾವೆಲ್ಲರೂ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಯನ್ನು ಮಾಡೋಣ. ಆದರೆ ಈ ಕೊಠಡಿಯ ನಾಲ್ಕು ಗೋಡೆಗಳ ಹೊರಗೆ ಸಂವಹನ ಮಾಡಬೇಕಾಗಿದದ್ದು, ಕಾರ್ಯಕಾರಿ ಸಮಿತಿಯ ಸಾಮೂಹಿಕ ನಿರ್ಧಾರವಾಗಿರಲಿದೆ" ಎಂದು ಕಾಂಗ್ರೆಸ್​ ಕಾರ್ಯಕಾರಿ ಸಭೆಯಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.


  ಇದನ್ನೂ ಓದಿ: CWC Meeting: ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ


  ಜಿ-23 ಬಗ್ಗೆ ಅಸಮಾಧಾನ:


  ಸಭೆಯಲ್ಲಿ ಜಿ-23 ಎಂದೇ ಖ್ಯಾತವಾಗಿರುವ 23 ನಾಯಕರನ್ನು ಸೋನಿಯಾ ಗಾಂಧಿ ಉಲ್ಲೇಖಿಸಿದರು. ಈ ನಾಯಕರು ಪಕ್ಷದ ಸಂಘಟನೆಯ ಸಂಪೂರ್ಣ ಪರಿಷ್ಕರಣೆಗೆ ಒತ್ತಾಯಿಸಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಪಕ್ಷಕ್ಕೆ ಸಕ್ರಿಯ ಅಧ್ಯಕ್ಷರ ಅಗತ್ಯವಿದೆ ಎಂದು ಜಿ -23 ನಾಯಕರು ಪದೇ ಪದೇ ಹೇಳಿದ್ದರು.


  ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಭಾಗೇಲ್‌, ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌‌ ಚನ್ನಿ, ಹಿರಿಯ ನಾಯಕರಾದ ಗುಲಾಮ್‌ ನಬಿ ಆಜಾದ್‌‌, ಆನಂದ್ ಶರ್ಮ ಹಾಜರಿದ್ದರು.


  ಮುಂದಿನ ಚುನಾವಣೆಗೆ ತಯಾರಿ:


  "ದೇಶದಲ್ಲಿ ದಿನೇ ದಿನೇ ದಿನೋಪಯೋಗಿ ವಸ್ತುಗಳ ಬೆಲೆ ಏರುತ್ತಿದೆ. ಜನರ ನಡುವೆ ಬಿಜೆಪಿ ಸರ್ಕಾರದ ವಿರುದ್ಧ ಅಲೆ ದೊಡ್ಡದಾಗುತ್ತಿದೆ. ಇಡೀ ದೇಶದ ರೈತ ಸಮೂಹ ಕೇಂದ್ರ ಸರ್ಕಾರದ ವಿರುದ್ಧ ನಿಂತಿದೆ. ಕಾಂಗ್ರೆಸ್​ ಪಕ್ಷವನ್ನು ಬುಡದಿಂದ ಗಟ್ಟಿಗೊಳಿಸಲು ಇದು ಸೂಕ್ತ ಸಮಯ. ಈಗ ಪಕ್ಷ ಮರು ಸಂಘಟನೆ ನಡೆಸಿದರೆ ಕಾಂಗ್ರೆಸ್​ ಖಚಿತವಾಗಿ ಮುಂದಿನ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲಿದೆ" ಎಂದು ಸೋನಿಯಾ ಗಾಂಧಿ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.


  ಇದನ್ನೂ ಓದಿ: Manmohan Singh| ಏಮ್ಸ್​ನಲ್ಲಿ ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ನಡವಳಿಕೆಗೆ ಮನಮೋಹನ್ ಸಿಂಗ್ ಮಗಳು ಬೇಸರ


  ಇದಲ್ಲದೆ, ಮುಂದಿನ ವರ್ಷಾರಂಭದಲ್ಲಿ ಬರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳಿಗೆ ಪಕ್ಷವನ್ನು ಹೇಗೆ ಸನ್ನದ್ಧಗೊಳ್ಳಬೇಕು? ಪಂಜಾಬ್ ಬಿಟ್ಟರೆ ಬೇರೆ ಎಲ್ಲಾ ಕಡೆ ಬಿಜೆಪಿ (BJP) ಅಧಿಕಾರದಲ್ಲಿ ಇರುವುದರಿಂದ ಯಾವ ರೀತಿಯ ತಂತ್ರಗಳನ್ನು ಅನುಸರಿಸಬೇಕು? ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ಚರ್ಚೆಗಳೂ ಇಂದಿನ ಕಾರ್ಯಕಾರಿ ಸಭೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

  Published by:MAshok Kumar
  First published: