ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಪೂರ್ಣ ವಿದ್ಯಾರ್ಥಿ ವೇತನ; ನಟ ಸೋನು ಸೂದ್ ಘೋಷಣೆ

ನಟ ಸೋನು ಸೂದ್.

ನಟ ಸೋನು ಸೂದ್.

ಹೌದು..! ಭಾರತದಲ್ಲಿ ಖಾಸಗೀಕರಣ ತಲೆ ಎತ್ತಿದ ನಂತರ ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗಿರುವುದು ಅಂಗೈ ಹುಣ್ಣಿನಷ್ಟೇ ಸತ್ಯ. ಭಾರತದ ಮಟ್ಟಿಗೆ ಎಷ್ಟೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ಬಡವರ ಮಕ್ಕಳು ಡಾಕ್ಟರ್, ಇಂಜಿನೀಯರಿಂಗ್ ನಂತಹ ದುಬಾರಿ ಶಿಕ್ಷಣ ಪಡೆಯುವ ಕನಸು ತಿರುಕನ ಕನಸೇ ಸರಿ. ಆದರೆ, ಇಂತಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಟ ಸೋನು ಸೂದ್ ಮುಂದಾಗಿದ್ದಾರೆ.

ಮುಂದೆ ಓದಿ ...
  • Share this:

ದೇಶದಲ್ಲಿ ಕೊರೋನಾ ಕರಿಛಾಯೆ ಮೂಡಿದ ದಿನದಿಂದ ಬಡವರಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಸುದ್ದಿಯ ಮೂಲಕ್ಕೆ ಬಂದವರು ಬಾಲಿವುಡ್‌ ನಟ ಸೋನು ಸೂದ್‌. ಚಿತ್ರಗಳಲ್ಲಿ ಖಳನಟನ ಪಾತ್ರ ನಿರ್ವಹಿಸಿದ್ದರೂ ಸಹ ಕೊರೋನಾ ಸಂದರ್ಭದಲ್ಲಿ ಹಲವರ ಪಾಲಿಗೆ ಇವರು ನಿಜದ ಹೀರೋ ಆಗಿದ್ದರು. ಹಸಿದವರಿಗೆ ಆಹಾರದ ಕಿಟ್‌, ಆರ್ಥಿಕ ಸಹಾಯ, ಪೊಲೀಸರಿಗೆ ಫೇಸ್‌ ಮಾಸ್ಕ್‌ ನೀಡುವ ಮೂಲಕ ಮನೆಮಾತಾಗಿದ್ದ ಸೋನು ಸೂದ್‌, ರಾಯಚೂರಿನಲ್ಲಿ ಮೂರು ಮಕ್ಕಳನ್ನು ಹೆತ್ತ ಬಡ ತಾಯಿಗೂ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ಸಿನಿಮಾದ ಆಚೆಗೂ ಇಂತಹ ಮಾನವೀಯ ಕೆಲಸಗಳಿಂದಲೇ ತನ್ನನ್ನ ಗುರುತಿಸಿಕೊಳ್ಳಲು ಇಚ್ಚಿಸುತ್ತಿದ್ದ ಸೋನು ಸೂದ್ ಇದೀಗ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರ ಸಂಪೂರ್ಣ ಶಿಕ್ಷಣಕ್ಕೆ ಹಣ ಸಹಾಯ ಮಾಡಲು ನಿರ್ಧರಿಸಿದ್ದಾರೆ.


ಹೌದು..! ಭಾರತದಲ್ಲಿ ಖಾಸಗೀಕರಣ ತಲೆ ಎತ್ತಿದ ನಂತರ ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗಿರುವುದು ಅಂಗೈ ಹುಣ್ಣಿನಷ್ಟೇ ಸತ್ಯ. ಭಾರತದ ಮಟ್ಟಿಗೆ ಎಷ್ಟೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ಬಡವರ ಮಕ್ಕಳು ಡಾಕ್ಟರ್, ಇಂಜಿನೀಯರಿಂಗ್ ನಂತಹ ದುಬಾರಿ ಶಿಕ್ಷಣ ಪಡೆಯುವ ಕನಸು ತಿರುಕನ ಕನಸೇ ಸರಿ. ಆದರೆ, ಇಂತಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಟ ಸೋನು ಸೂದ್ ಮುಂದಾಗಿದ್ದಾರೆ.



ಈ ಸಂಬಂಧ ಇಂದು ಸ್ವತಃ ಟ್ವೀಟ್‌ ಮಾಡುವ ಮೂಲಕ ಮಾಹಿತಿ ನೀಡಿರುವ ನಟ ಸೋನು ಸೂದ್‌, "ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಪೂರ್ಣ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲಾಗಿದೆ. ಆರ್ಥಿಕ ಮುಗ್ಗಟ್ಟು ಯಾರೊಬ್ಬರ ಗುರಿಗೂ ತಡೆಗೋಡೆಯಾಗ ಬಾರದು ಎಂದು ನಾನು ನಂಬುತ್ತೇನೆ. ಶಿಕ್ಷಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ದಾಖಲೆಗಳನ್ನು ನನಗೆ ಕಳುಹಿಸಿ. ಮುಂದಿನ 10 ದಿನದ ಒಳಗಾಗಿ ನಾವು ನಿಮ್ಮನ್ನು ತಲುಪುತ್ತೇವೆ" ಎಂದು ಭರವಸೆ ನೀಡಿದ್ದಾರೆ.


ಇನ್ನೂ ಈ ಸಂಬಂಧ ಪೋಸ್ಟರ್‌ ಸಹ ರಿಲೀಸ್‌ ಆಗಿದ್ದು ಅದರಲ್ಲಿ, ಎಂಬಿಬಿಎಂ, ಇಂಜಿನೀಯರಿಂಗ್, ಕಾನೂನು, ಪ್ರವಾಸೋದ್ಯಮ, ಬ್ಯುಸಿನೆಸ್‌ ಸ್ಟಡೀಸ್‌ ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣಕ್ಕೂ ಸಂಪೂರ್ಣ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಬರೆಯಲಾಗಿದೆ. ಹೀಗಾಗಿ ಅಸಂಖ್ಯಾತ ಬಡ ವಿದ್ಯಾರ್ಥಿಗಳು ಇದೀಗ ಶಿಕ್ಷಣಕ್ಕಾಗಿ ಸೋನು ಸೂದ್‌ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

top videos
    First published: