ಇಂಡಿಯನ್ ಟೀಂ ಭೇಟಿಗೆ ಮಲ್ಯ ಯತ್ನ: ವಿರಾಟ್ ಕೊಹ್ಲಿ ತಿರಸ್ಕಾರ

news18
Updated:August 3, 2018, 3:25 PM IST
ಇಂಡಿಯನ್ ಟೀಂ ಭೇಟಿಗೆ ಮಲ್ಯ ಯತ್ನ: ವಿರಾಟ್ ಕೊಹ್ಲಿ ತಿರಸ್ಕಾರ
news18
Updated: August 3, 2018, 3:25 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನ ಬರ್ಮಿಂಗ್​ಹಗಯಾಮ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಭಾರತದ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ಲಂಡನ್​​ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಅವರು ಟೀಂ ಇಂಡಿಯಾವನ್ನು ಭೇಟಿ ಮಾಡಲು ಯತ್ನ ನಡೆಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಟೀಂ ಇಂಡಿಯಾವನ್ನು ಭೇಟಿ ಮಾಡಬೇಕೆಂದು ಮಲ್ಯ ತಿಳಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಇದನ್ನು ತಿರಸ್ಕರಿಸಿದ್ದು, ಯಾವುದೇ ಕಾರಣಕ್ಕೂ ಮಲ್ಯ ಅವರು ತಂಡದ ಆಟಗಾರರು ಭೇಟಿ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.

ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಲಿಕಾರಿಗಿರುವ ಮಲ್ಯ ಅವರು ತಂಡದ ನಾಯಕನಾಗಿರುವ ಕೊಹ್ಲಿ ಜೊತೆಗೂ ಉತ್ತಮ ಸಂಬಂದ ಇಟ್ಟು ಕೊಂಡಿದ್ದಾರೆ. ಈ ಹಿಂದೆ ಮಲ್ಯ ಜೊತೆಗೆ ಆಫ್​​ಪೀಲ್ಡ್​​ನಲ್ಲೂ ಕೊಹ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆರ್​ಸಿಬಿ ತಂಡದ ಆಟಗಾರರಾದ ಯಜುವೇಂದ್ರ ಚಹಾಲ್ ಹಾಗೂ ಉಮೇಶ್ ಯಾದವ್ ಸದ್ಯ ಟೀಂ ಇಂಡಿಯಾ ಜೊತೆ ಇಂಗ್ಲೆಂಡ್​​ನಲ್ಲೇ ಇದ್ದು ಇವರನ್ನು ಬೇಟಿ ಆಗಬೇಕು ಎಂದಿದ್ದಾರೆ. ನನ್ನ ಆರ್​ಸಿಬಿ ತಂಡದ ಆಟಗಾರರು ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ತಂಡದಲ್ಲಿದ್ದಾರೆ ಅವನ್ನು ಭೇಟಿ ಆಗಬೇಕು ಎಂದು ಹೇಳಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...