Fuel Tanker Blast: ಸಿಯೆರಾ ಲಿಯೋನ್​ನಲ್ಲಿ ಇಂಧನ ಟ್ಯಾಂಕರ್ ಸ್ಫೋಟ: 92 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

Fuel Tanker Blast: ಆಯಿಲ್​ ಟ್ಯಾಂಕರ್(Oil Tanker)​​ ಪಲ್ಟಿಯಾದ ನಂತರ ಜನರು ಅಪಾರ ಸಂಖ್ಯೆಯಲ್ಲಿ ಆಯಿಲ್​  ಸಂಗ್ರಹಿಸಲು ಬಂದಿದ್ದರು(To collect oil). ಈ ವೇಳೆ ಟ್ಯಾಂಕರ್ ಸ್ಫೋಟಗೊಂಡಿದ್ದು, 92 ಮಂದಿ ಅಸುನಿಗಿದ್ದಾರೆ.

ಆಯಿಲ್​ ಟ್ಯಾಂಕರ್​​ ಸ್ಫೋಟಗೊಂಡ ಕ್ಷಣ

ಆಯಿಲ್​ ಟ್ಯಾಂಕರ್​​ ಸ್ಫೋಟಗೊಂಡ ಕ್ಷಣ

  • Share this:
ಸಿಯೆರಾ ಲಿಯೋನ್​(Sierra Leone)ನಲ್ಲಿ ಭೀಕರ ದುರಂತವೊಂದು ನಡೆದುಹೋಗಿದೆ. ಇಂಧನ ಟ್ಯಾಂಕರ್​ವೊಂದು ಡಿಕ್ಕಿ ಹೊಡೆದ ನಂತರದಲ್ಲಿ ಸ್ಫೋಟಗೊಂಡು(Oil Tanker Blast),  92 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ(92 Dead, 100 and More Injured) ಘಟನೆ ಸಿಯೆರಾ ಲಿಯೋನ್​ನ ರಾಜಧಾನಿಯಲ್ಲಿ ಸಂಭವಿಸಿದೆ. ಆಯಿಲ್​ ಟ್ಯಾಂಕರ್(Oil Tanker)​​ ಪಲ್ಟಿಯಾದ ನಂತರ ಜನರು ಅಪಾರ ಸಂಖ್ಯೆಯಲ್ಲಿ ಆಯಿಲ್​  ಸಂಗ್ರಹಿಸಲು ಬಂದಿದ್ದರು(To collect oil). ಈ ವೇಳೆ ಟ್ಯಾಂಕರ್ ಸ್ಫೋಟಗೊಂಡಿದ್ದು, 92 ಮಂದಿ ಅಸುನಿಗಿದ್ದಾರೆ. ಈ ಸ್ಫೋಟದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಗಂಭೀರ ಸ್ವರೂಪದ ಸುಟ್ಟ ಗಾಯಗಳೊಂದಿಗೆ 88ಕ್ಕೂ ಹೆಚ್ಚು ಮಂದಿಯ ಚಿಕಿತ್ಸೆ ನಡೆಯುತ್ತಿದೆ. ತೀವ್ರವಾಗಿ ಸುಟ್ಟ ಗಾಯಗಳಾಗಿ ಐಸಿಯು(ICU)ನಲ್ಲಿ ಇರುವ ಮೂವತ್ತು ಮಂದಿ ಬದುಕುಳಿವ ಸಾಧ್ಯತೆ ಇಲ್ಲ(No Chance of Survival) ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಈ ಭೀಕರ ಸ್ಫೋಟದ ದೃಶ್ಯ  ಕ್ಯಾಮರಾದಲ್ಲಿ ಸೆರೆಯಾಗಿದೆ. ಟ್ಯಾಂಕರ್​ ಸ್ಫೋಟಗೊಂಡ ನಂತರ  ಆಕಾಶದಲ್ಲಿ ದೈತ್ಯಾಕಾರದ ಬೆಂಕಿಯ ಚೆಂಡು ಉರಿಯುತ್ತಿರುವುದನ್ನು ತೋರಿಸಿದೆ. ತೀವ್ರವಾದ ಸುಟ್ಟಗಾಯಗಳೊಂದಿಗೆ ಬದುಕುಳಿದವರು ನೋವಿನಿಂದ ಕೂಗುತ್ತಿದ್ದರು. ಸಂತ್ರಸ್ತರ ಸುಟ್ಟ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರವುಉ ಸೆರೆಯಾಗಿದೆ. ಆಯಿಲ್​ ಸಂಗ್ರಹಕ್ಕೆ ಮುಂದಾಗಿದ್ದೇ ತಪ್ಪು!

ಫ್ರೀಟೌನ್​ನ ಪೂರ್ವಕ್ಕೆ ಇರುವ ಉಪನಗರವಾದ ವೆಲ್ಲಿಂಗ್​ಟನ್​ನಲ್ಲಿ ಟ್ರಕ್​ವೊಂದು ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಮೇಲೆ ಈ ಸ್ಫೋಟ ಸಂಭವಿಸಿದೆ. ಅಪಘಾತವಾದ ಟ್ಯಾಂಕರ್​ನಿಂದ ತೈಲ ಸಂಗ್ರಹಕ್ಕೆ ಮುಂದಾದ ಜನರ ದೇಹ ಸ್ಫೋಟದಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದೆ. ಬಹಳ ಗಂಭೀರವಾಗಿ ಸುಟ್ಟುಹೋಗಿರುವ ಸಂತ್ರಸ್ತರನ್ನು ಹತ್ತಿರದ ಮಳಿಗೆಗಳು ಮತ್ತು ಮನೆಗಳಲ್ಲಿ ಮಲಗಿಸಲಾಗಿದೆ ಎಂದು ಹೇಳಿದ್ದು, ಈ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ಖಚಿತಪಡಿಸಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಕಿ ಗಿರಕಿ ಹೊಡೆಯುತ್ತಿರುವ ಫೋಟೋಗಳು, ವಿಡಿಯೋಗಳು ಗಾಬರಿಪಡಿಸುವಂತಿವೆ. ಇನ್ನೂ ಪ್ರಾಣ ಕಳೆದುಕೊಂಡವರು ಮತ್ತು ಸುಟ್ಟು ಹೋದವರಲ್ಲಿ ವಾಹನದೊಳಗೆ ಇದ್ದವರೇ ಹೆಚ್ಚು ಎನ್ನಲಾಗಿದೆ.

ಇದನ್ನು ಓದಿ : ಮಹಾರಾಷ್ಟ್ರದ ಅಹ್ಮದ್​​ನಗರ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ; 10 ಕೋವಿಡ್​ ರೋಗಿಗಳು ಸಾವು


ಅಧ್ಯಕ್ಷ ಜೂಲಿಯಸ್​ ಮಾದಾ ಬಯೋ ಸಂತಾಪ 


ಶನಿವಾರ ವಿಶ್ವಸಂಸ್ಥೆಯ ಹವಾಮಾನ ಮಾತುಕತೆಯಲ್ಲಿ ಭಾಗವಹಿಸಲು ಸ್ಕಾಟ್ಲೆಂಡ್‌ನಲ್ಲಿದ್ದ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ, “ಭಯಾನಕ ಜೀವಹಾನಿಗೆ ವಿಷಾದಿಸಿದರು. ಸ್ಫೋಟದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ನನ್ನ ಆಳವಾದ ಸಹಾನುಭೂತಿ ಎಂದು ಅವರು ಟ್ವೀಟ್ ಮಾಡಿದ್ದಾರೆ.ಉಪಾಧ್ಯಕ್ಷ ಮೊಹಮದ್ ಜುಲ್ಡೆಹ್ ಜಲ್ಲೋ ಅವರು ರಾತ್ರಿಯಿಡೀ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿದರು ಎಂದು ಹೇಳಿದರು. ಈ ರಾಷ್ಟ್ರೀಯ ದುರಂತದಿಂದ ನಾವೆಲ್ಲರೂ ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಇದು ನಮ್ಮ ದೇಶಕ್ಕೆ ನಿಜಕ್ಕೂ ಕಷ್ಟದ ಸಮಯ” ಎಂದು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ


ಇದನ್ನು ಓದಿ: ಬೈಕ್​ನಲ್ಲಿ ತೆರಳುತ್ತಿದ್ದಾಗಲೇ ಸ್ಫೋಟಗೊಂಡ ಪಟಾಕಿ: ಅಪ್ಪ-ಮಗನ ದೇಹ ಛಿದ್ರ ಛಿದ್ರ!

ಸುಟ್ಟುಕರಕಲಾದ ವಾಹನಗಳು

ಜಗತ್ತಿನ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಸಿಯೆರಾ ಲಿಯೋನ್​ನಲ್ಲಿ ಟ್ಯಾಂಕರ್​ ಸ್ಫೋಟಗೊಳ್ಳುವಾಗ ಅದೇ ರಸ್ತೆಯಲ್ಲಿ ಟ್ರಾಫಿಕ್​ ಜಾಮ್ ಆಗಿತ್ತು. ಎಲ್ಲರೂ ತೈಲ ಸಂಗ್ರಹಕ್ಕೆ ಸೇರಿದ್ದರಿಂದ ವಾಹನಗಳ ಸಂಚಾರ ನಡೆಸಲು ಕಷ್ಟವಾಗಿತ್ತು. ಹೀಗಾಗಿ ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಕುಳಿತುಕೊಂಡಿದ್ದರು. ಇದ್ದಕ್ಕಿದ್ದ ಹಾಗೇ ಟ್ಯಾಂಕರ್ ಬ್ಲ್ಯಾಸ್​​ ಆಗಿದೆ. ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳೆಲ್ಲೆ ಸುಟ್ಟುಕರಕಲಾಗಿದೆ. ವಾಹನದೊಳಗೆ ಕುಳಿತಿದ್ದವರು ಕೂಡ ಸಜೀವ ದಹನವಾಗಿದ್ದಾರೆ.

ಈ ಹಿಂದೆಯೂ ಇಲ್ಲಿ ಆಯಿಲ್ ಟ್ಯಾಂಕರ್​ ಸ್ಫೋಟ

ಇತ್ತೀಚೆಗೆ ಇಲ್ಲಿ ಇಂಥದ್ದೇ ದುರಂತವೊಂದು ನಡೆದಿತ್ತು. ಆಯಿಲ್ ಟ್ಯಾಂಕರ್​ ಪಲ್ಟಿಯಾಗಿ , ಬಳಿಕ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಹಲವು ಮಂದಿ ಸಜೀವ ದಹನವಾಗಿದ್ದರು. ಸೌತ್​ ಆಫ್ರಿಕಾದಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಸಿಯೆರಾ ಲಿಯೋನ್​ನಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಮೊದಲೇ ಅಗತ್ಯ ಸೇವೆಗಳು ನೀಡಲಾಗದ ಪರಿಸ್ಥಿತಿಯಲ್ಲಿ ಅಲ್ಲಿನ ಸರ್ಕಾರ ಇದೆ.
Published by:Vasudeva M
First published: