HOME » NEWS » National-international » FUEL PRICE HIKE ZOMATO INCREASES DELIVERY PARTNER FEE STG SESR

Zomoto: ಪೆಟ್ರೋಲ್​ ಬಲೆ ಏರಿಕೆ: ಡೆಲಿವರಿ ಪಾರ್ಟನರ್​ ಶುಲ್ಕ ಹೆಚ್ಚಿಸಲು ಮುಂದಾದ ಝೊಮ್ಯಾಟೊ ಸ್ವಿಗ್ಗಿ

ಇಂಧನ ಬೆಲೆ ಏರಿಕೆಗೆ ಅನುಗುಣವಾಗಿ ತನ್ನ ವಿತರಣಾ ಪಾಲುದಾರರ ಸಂಭಾವನೆಯನ್ನು ಪರಿಷ್ಕರಿಸಿದೆ

news18-kannada
Updated:February 26, 2021, 2:56 PM IST
Zomoto: ಪೆಟ್ರೋಲ್​ ಬಲೆ ಏರಿಕೆ: ಡೆಲಿವರಿ ಪಾರ್ಟನರ್​ ಶುಲ್ಕ ಹೆಚ್ಚಿಸಲು ಮುಂದಾದ ಝೊಮ್ಯಾಟೊ ಸ್ವಿಗ್ಗಿ
ಸಾಂದರ್ಭಿಕ ಚಿತ್ರ
  • Share this:
ದೇಶಾದ್ಯಂತ ಹಲವು ದಿನಗಳಿಂದ ಸತತವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚುತ್ತಲೇ ಇದೆ. ಈಗಾಗಲೇ ಹಲವೆಡೆ ಪೆಟ್ರೋಲ್‌ ದರ ಶತಕ ಬಾರಿಸಿದೆ. ಇದರಿಂದ ಎಲ್ಲದರ ಬೆಲೆಯೂ ಹೆಚ್ಚುತ್ತಿದೆ. ಈ ಮಧ್ಯೆ  ಸಿಲಿಂಡರ್‌ ದರ ಸಹ ಜಾಸ್ತಿ ಆಗಿದೆ. ಹೀಗಂತ ಆನ್‌ಲೈನ್‌ ಡೆಲಿವರಿಯಲ್ಲಿ ತಿಂಡಿ, ಊಟ ತರಿಸಿದರೆ ಆಯಿತು ಎಂದು ನೀವು ಅಂದುಕೊಂಡ್ರೆ ಅಲ್ಲೂ ಕೂಡ ನಿಮಗೆ ಬೆಲೆ ಏರಿಕೆ ಬಿಸಿ ತಟ್ಟದೇ ಇರಲಾರದು. ಮನೆ ಬಾಗಿಲಿಗೆ ನೀವು ಆರ್ಡರ್​ ಮಾಡಿದ ಆಹಾರ ತಂದುಕೊಂಡುವ ಸಂಸ್ಥೆ ಝೊಮ್ಯಾಟೊ ಕೂಡ ತಮ್ಮ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಲು ಸಿದ್ಧವಾಗಿದೆ. ಈ ಕುರಿತು ಮಾತನಾಡಿರುವ ಝೊಮ್ಯಾಟೊ  ಸಂಸ್ಥೆ, ಇಂಧನ ಬೆಲೆ ಏರಿಕೆಗೆ ಅನುಗುಣವಾಗಿ ತನ್ನ ವಿತರಣಾ ಪಾಲುದಾರರ ಸಂಭಾವನೆಯನ್ನು ಪರಿಷ್ಕರಿಸಿದೆ ಎಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಝೊಮ್ಯಾಟೊ  ಪ್ರತಿಸ್ಪರ್ಧಿ ಸ್ವಿಗ್ಗಿ ಸಹ ಇದನ್ನು ಅನುಸರಿಸಲಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಡೆಲಿವರಿ ಪಾರ್ಟ್‌ನರ್‌ ಶುಲ್ಕ ಹೆಚ್ಚಿಸಿರುವ ಝೊಮ್ಯಾಟೋ ಇದಕ್ಕೆ ಕಾರಣಗಳನ್ನು ಕೊಟ್ಟಿರುವುದು ಹೀಗೆ ನೋಡಿ.. ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ವಿತರಣಾ ಪಾಲುದಾರರು ದಿನದಲ್ಲಿ 100 ಕಿ.ಮೀ -120 ಕಿ.ಮೀ ನಡುವೆ ಪ್ರಯಾಣಿಸುತ್ತಾರೆ. ಈ ಹಿನ್ನೆಲೆ ಸಾಮಾನ್ಯವಾಗಿ ತಿಂಗಳೊಂದರಲ್ಲಿ 60-80 ಲೀಟರ್ ಇಂಧನ ಬಳಸುತ್ತಾರೆ. ಇತ್ತೀಚಿನ ಬೆಲೆಗಳ ಹೆಚ್ಚಳವು ಅವರ ಟೇಕ್-ಹೋಮ್ ಆದಾಯದಿಂದ ಹೆಚ್ಚುವರಿ ಮಾಸಿಕ 600-800 ರೂ. ಅಂದರೆ, ಮಾಸಿಕ ಆದಾಯದ ಸುಮಾರು 3% ಖರ್ಚಾಗುತ್ತದೆ ಎಂದು ಹೇಳಿಕೊಂಡಿದೆ.

ಇದನ್ನು ಗಣನೆಗೆ ತೆಗೆದುಕೊಂಡು, ಝೊಮ್ಯಾಟೊ ತನ್ನ ವಿತರಣಾ ಪಾಲುದಾರರಿಗಾಗಿ ಪರಿಷ್ಕೃತ ವೇತನ ರಚನೆಯನ್ನು ಪರಿಚಯಿಸಿದೆ. 'ಡಿಸ್ಟೆನ್ಸ್ ಪೇ' ಎಂಬ ಹೆಚ್ಚುವರಿ ಘಟಕವನ್ನು ಈಗ ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ. ಈ ಘಟಕವು ಅಸ್ತಿತ್ವದಲ್ಲಿರುವ ಸಂಭಾವನೆಯ ಮೇಲೆ ಅನ್ವಯಿಸುತ್ತದೆ ಮತ್ತು ಅದಕ್ಕಿಂತ ಹೆಚ್ಚಾಗಿ ಭವಿಷ್ಯದಲ್ಲಿ ಇಂಧನ ಬೆಲೆಯಲ್ಲಿನ ಯಾವುದೇ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸ್ವಯಂಚಾಲಿತವಾಗಿ ಜೋಡಿಸಲ್ಪಡುತ್ತದೆ ಎಂದು ಹೇಳಿಕೊಂಡಿದೆ.

ವಿತರಣಾ ಪಾಲುದಾರರು ದೂರದ ಸ್ಥಳಗಳಿಗೆ ಆರ್ಡರ್‌ ಡೆಲಿವರಿ ಮಾಡಲು ಹೋಗುತ್ತಾರೆ. ಅಲ್ಲದೆ, ಮತ್ತೊಂದು ಆರ್ಡರ್ ಪಡೆಯಲು ತಮ್ಮ ಮೂಲ-ಕೆಲಸ ಮಾಡುವ ಸ್ಥಳಗಳಿಗೆ ಅವರು ಮರಳಬೇಕಾಗಿದೆ. ಈ ಹಿನ್ನೆಲೆ ಇಂಧನ ಬೆಲೆ ಹೆಚ್ಚಳದ ಪರಿಣಾಮವನ್ನು ಝೊಮ್ಯಾಟೊ ಗುರುತಿಸಿದೆ.

ಇದನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ದೂರದ ಪ್ರಯಾಣಗಳಿಗೆ 'ಲಾಂಗ್‌ ಡಿಸ್ಟೆನ್ಸ್ ರಿಟರ್ನ್ ಪೇ' ಎಂಬುದನ್ನು ಪರಿಚಯಿಸಿದ್ದು, ಇದರಲ್ಲಿ ವಿತರಣಾ ಪಾಲುದಾರರು ಪ್ರತಿ ಬಾರಿ ದೂರದ ಆರ್ಡರ್‌ಗಳನ್ನು ಪೂರ್ಣಗೊಳಿಸಿದಲ್ಲಿ 15 ನಿಮಿಷಗಳಲ್ಲಿ ಮತ್ತೊಂದು ಆರ್ಡರ್‌ ಅನ್ನು ಸ್ವೀಕರಿಸುತ್ತಾರೆ. ಅದು ಅವರನ್ನು ಕೆಲಸ ಮಾಡುವ ಮೂಲ ಪ್ರದೇಶಗಳಿಗೆ ಹತ್ತಿರ ತರುತ್ತದೆ ಅಥವಾ ಅವರು ಹೆಚ್ಚುವರಿ ದೂರ ಪ್ರಯಾಣಿಸಲು ಹೆಚ್ಚುವರಿ ವೇತನ ಪಡೆಯಲಿದ್ದಾರೆ.

ಇದನ್ನು ಓದಿ: ಮಕ್ಕಳ, ಗರ್ಭಿಣಿಯರಿಗೆ ಅಗತ್ಯ ಕ್ಯಾಲ್ಸಿಯಂ; ಯಾವ ಆಹಾರದಲ್ಲಿವೆ ಇವು ಗೊತ್ತೆ?

ಇಂಧನ ಬೆಲೆ ಏರಿಕೆಯು ವಿತರಣಾ ಪಾಲುದಾರರ ಗಳಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವರ ವೇತನ ರಚನೆಯಲ್ಲಿ ಅಂತಹ ಬೆಳವಣಿಗೆಗಳಿಗೆ ಕಾರಣವಾಗಲು ನಿರ್ಧರಿಸಿದ್ದೇವೆ. ಈ ಎರಡೂ ಸೇರ್ಪಡೆಗಳು ಸೇರಿ ಅವರ ಗಳಿಕೆಯನ್ನು ಶೇ. 7-8% ಹೆಚ್ಚಿಸುತ್ತದೆ. ನಾವು ಈಗಾಗಲೇ ಸುಮಾರು 40 ನಗರಗಳಲ್ಲಿ ಹೊಸ ರಚನೆಯನ್ನು ಜಾರಿಗೆ ತಂದಿದ್ದೇವೆ ಮತ್ತು ಮುಂಬರುವ ವಾರದಲ್ಲಿ ಇದನ್ನು ಇತರ ನಗರಗಳಲ್ಲಿ ಹೊರತರುತ್ತೇವೆ" ಎಂದು ಝೊಮ್ಯಾಟೊ ಸಿಒಒ ಆಹಾರ ವಿತರಣೆಯ ಮೋಹಿತ್ ಸರ್ದಾನಾ ಮನಿ ಕಂಟ್ರೋಲ್‌ ವೆಬ್‌ಸೈಟ್‌ಗೆ ಹೇಳಿದ್ದಾರೆ.ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ..!

ತನ್ನ ಫ್ಲೀಟ್‌ನಲ್ಲಿ 1.5 ಲಕ್ಷ ವಿತರಣಾ ಪಾಲುದಾರರನ್ನು ಹೊಂದಿರುವ ಝೊಮ್ಯಾಟೊ ಕಂಪನಿಯು ತಮ್ಮ ವಿತರಣಾ ಫ್ಲೀಟ್‌ಗಳಲ್ಲಿ 2021 ರಲ್ಲಿ ಕನಿಷ್ಠ ಶೇ. 10 ರಷ್ಟು ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳನ್ನಾಗಿ ಬದಲಾಯಿಸಲು ಯೋಜಿಸುತ್ತಿದೆ. ಝೊಮ್ಯಾಟೊ ಜೊತೆಗೆ ಪ್ರತಿಸ್ಪರ್ಧಿ ಸ್ವಿಗ್ಗಿ ಸಹ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ ಅಗ್ರಿಗೇಟರ್‌ಗಳಾದ Zypp, ಸ್ಪಿನ್ನಿ ಹಾಗೂ ಇಬೈಕ್‌ಗೋ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ.

ದೇಶಾದ್ಯಂತ ಇಂಧನ ಬೆಲೆ ಹೆಚ್ಚುತ್ತಿದ್ದು, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ಕೆಲವು ಸ್ಥಳಗಳಲ್ಲಿ ಈಗಾಗಲೇ ಪೆಟ್ರೋಲ್‌ ಬೆಲೆ ಲೀಟರ್‌ಗೆ 100 ರೂ. ಗಡಿ ದಾಟಿದೆ.
Published by: Seema R
First published: February 26, 2021, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories