ಲೋಕಸಭೆ ಸ್ಪೀಕರ್ ಆಗಿ ಬಿಜೆಪಿಯಿಂದ ಎರಡನೇ ಬಾರಿ ಸಂಸದರಾಗಿರುವ ಓಂ ಬಿರ್ಲಾ ಆಯ್ಕೆ ಬಹುತೇಕ ಖಚಿತ

ಸ್ಪೀಕರ್ ಆಯ್ಕೆ ಚುನಾವಣೆ ಬುಧವಾರ ನಿಗದಿಯಾಗಿದೆ. ವಿರೋಧ ಪಕ್ಷಗಳು ಈವರೆಗೂ ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ನಾಳೆ ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದೆ.

HR Ramesh | news18
Updated:June 18, 2019, 2:43 PM IST
ಲೋಕಸಭೆ ಸ್ಪೀಕರ್ ಆಗಿ ಬಿಜೆಪಿಯಿಂದ ಎರಡನೇ ಬಾರಿ ಸಂಸದರಾಗಿರುವ ಓಂ ಬಿರ್ಲಾ ಆಯ್ಕೆ ಬಹುತೇಕ ಖಚಿತ
ಸಂಸದ ಓಂ ಬಿರ್ಲಾ
  • News18
  • Last Updated: June 18, 2019, 2:43 PM IST
  • Share this:
ನವದೆಹಲಿ: ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಪಕ್ಷ ಲೋಕಸಭಾ ಸ್ಪೀಕರ್ ಆಗಿ ನಾಮನಿರ್ದೇಶನ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದ ಕೋಟಾ-ಬುಂದಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿರ್ಲಾ ಅವರು ಎನ್​ಡಿಎ ಮೈತ್ರಿಕೂಟದ ಎರಡನೇ ಅವಧಿ ಸರ್ಕಾರದಲ್ಲಿ ಸ್ಪೀಕರ್​ ಆಗುವುದು ಬಹುತೇಕ ಖಚಿತವಾಗಿದೆ.

ಸ್ಪೀಕರ್ ಆಯ್ಕೆ ಚುನಾವಣೆ ಬುಧವಾರ ನಿಗದಿಯಾಗಿದೆ. ವಿರೋಧ ಪಕ್ಷಗಳು ಈವರೆಗೂ ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ನಾಳೆ ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದೆ.

ಕಳೆದ ಮೋದಿ ಸರ್ಕಾರದಲ್ಲಿ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸುಮಿತ್ರಾ ಮಹಾಜನ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

ಸಾಮಾನ್ಯವಾಗಿ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಹಿರಿಯ ಅನುಭವಿ ರಾಜಕಾರಣಿಗಳನ್ನು ಪರಿಗಣಿಸಲಾಗುತ್ತದೆ. ಆದರೆ, ಇಲ್ಲಿ ಎರಡನೇ ಬಾರಿಗೆ ಸಂಸದರಾಗಿರುವ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ.

ಈ ಹಿಂದೆ 2002ರಲ್ಲಿ ಸ್ಪೀಕರ್​ ಆಗಿದ್ದ ಜಿಎಂಸಿ ಬಾಲಯೋಗಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದಾಗ ಆಗಷ್ಟೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಮನೋಹರ ಜೋಶಿ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

ಇದನ್ನು ಓದಿ: ಜೆ.ಪಿ. ನಡ್ಡಾ ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ 17 ನೇ ಲೋಕಸಭೆ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಲೋಕಸಭೆಯ ತಾತ್ಕಾಲಿಕ ಸ್ಪೀಕರ್ ಆಗಿ ವೀರೇಂದ್ರ ಕುಮಾರ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದ್ದರು. ನೂತನ ಸಂಸದರಿಗೆ ನೆನ್ನೆಯಿಂದ ವೀರೇಂದ್ರ ಕುಮಾರ್ ಅವರು ಪ್ರಮಾಣವಚನ ಬೋಧಿಸಿದ್ದರು. ಈ ಅಧಿವೇಶನದಲ್ಲಿ ಹಲವು ಮಸೂದೆಗಳು ಅಂಗೀಕಾರಗೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ಪ್ರಮುಖವಾಗಿ ತ್ರಿಪಲ್ ತಲಾಖ್​ ಮಸೂದೆಯೂ ಒಂದಾಗಿದೆ.

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ