ರೈಸಿಂಗ್​ ಇಂಡಿಯಾ: ಒಂದೇ ಸೂರಿನಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು, ಉದ್ಯಮಿಗಳು ಹಾಗೂ ಸಿನಿತಾರೆಗಳು

news18
Updated:March 16, 2018, 6:02 PM IST
ರೈಸಿಂಗ್​ ಇಂಡಿಯಾ: ಒಂದೇ ಸೂರಿನಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು, ಉದ್ಯಮಿಗಳು ಹಾಗೂ ಸಿನಿತಾರೆಗಳು
news18
Updated: March 16, 2018, 6:02 PM IST
- ನ್ಯೂಸ್​ 18 ಕನ್ನಡ

‘ನ್ಯೂಸ್​ 18 ರೈಸಿಂಗ್​ ಇಂಡಿಯಾ ಸಮಿಟ್​ 2018’ ಮಾರ್ಚ್​ 16-17ರಂದು ನವ ದೆಹಲಿಯಲ್ಲಿ ನಡೆಯಲಿದೆ. ಇದರಲ್ಲಿ ದೇಶದ ಪ್ರಧಾನಿ, ಕೇಂದ್ರ ಸಚಿವರು ಹಾಗೂ ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳು, ಅಂತರರಾಷ್ಟ್ರೀಯ ವ್ಯವಹಾರ, ಉದ್ಯಮ ಮತ್ತು ಮನರಂಜನೆ ಕ್ಷೇತ್ರಗಳ ವಿಚಾರವಾದಿಗಳು ಹಾಗೂ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮೊದಲ ದಿನವಾದ ಶುಕ್ರವಾರ ಚರ್ಚೆಯೊಂದಿಗೆ ಆರಂಭವಾಗಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಹಾಗೂ ರೈಲ್ವೆ ಸಚಿವ ಪಿಯೂಶ್​ ಗೋಯಲ್​ ಅವರ ನಡುವೆ ಈ ಚರ್ಚೆ ನಡಯಲಿದೆ. ಸಂಜೆ 5.45ಕ್ಕೆ ನಡೆಯಲಿರುವ ಈ ಚರ್ಚೆಯಲ್ಲಿ ‘ದ ಬಿಲ್ಡಿಂಗ್​ ಬ್ಲಾಕ್ಸ್​ ಆಫ್​ ಎ ರೈಸಿಂಗ್ ಇಂಡಿಯಾ’ ಕುರಿತ ವಿಷಯದ ಬಗ್ಗೆ ಚರ್ಚಿಸಲಾಗುವುದು. ನಂತರದ ಕಾರ್ಯಕ್ರಮದಲ್ಲಿ ‘ಮೇಕಿಂಗ್​ ಆಫ್​ ಎ ನ್ಯೂ ವರ್ಲ್ಡ್​ ಪವರ್​’ ವಿಷಯ ಕುರಿತಂತೆ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ, ವೇದಾಂತದ ಸಂಸ್ಥಾಪಕ ಅನಿಲ್​ ಅಗರವಾಲ್​, ಎನ್​ಐಟಿಐ ಆಯೋಗ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್​ ಕಾಂತ್​ ಹಾಗೂ ಮೇಕ್​ ಮೈ ಟ್ರಿಪ್​ನ ಸ್ಥಾಪಕ ದೀಪ್​ ಕಲ್ರಾ ಅವರು ಮಾತನಾಡಲಿದ್ದಾರೆ.

ಈ ಎರಡೂ ಚರ್ಚೆಗಳ ನಂತರ ಗಾಬಾನ್​ ಗಣರಾಜ್ಯದ ಅಧ್ಯಕ್ಷ ಅಲಿ ಬಾಂಗೊ ಒಂಡಿಂಬಾ ಮಾತನಾಡಲಿದ್ದಾರೆ. ದಿನದ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎರಡನೇ ದಿನ ಕೇಂದ್ರ ಗೃಹ ಸಚಿವ ರಾಜನಾಥ್​​ ಸಿಂಗ್​ ಅವರ ಭಾಷಣದಿಂದ ಆರಂಭವಾಗಲಿದೆ. ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೊಂದಿಗೆ ಸಂವಾದ, ಇದಾದ ಮೇಲೆ ರಾಜವರ್ಧನ್​ ಸಿಂಗ್​ ರಾಥೋಡ್​​ ಅವರು ‘ಇಂಡಿಯಾಸ್​ ರೈಸಿಂಗ್​ ಪವರ್ಸ್​ ಇನ್​ ದ ಫೀಲ್ಡ್​ ಆಫ್​ ಸ್ಫೋಟ್ಸ್’ ವಿಷಯ ಕುರಿತಂತೆ ಮಾತನಾಡಲಿದ್ದಾರೆ​. ನಂತರ ರುಚಿರ್​ ಶರ್ಮಾ ಅವರೊಂದಿಗೆ ಸಂವಾದ ಕಾರ್ಯಕ್ರಮ.

ಶನಿವಾರ ಮಧ್ಯಾಹ್ನ ನಟ ರಣವೀರ್​ ಸಿಂಗ್​ ಜತೆ ‘ಇಂಡಿಯಾ ಅನ್​ಕಟ್​’ ಕಾರ್ಯಕ್ರಮ, ನಂತರ ನೊಬೆಲ್​ ಎಕನಾಮಿಕ್ಸ್​ ಪ್ರಶಸ್ತಿ ವಿಜೇತ ಪೌಲ್​ ಕ್ರುಗ್​ಮನ್​ ಅವರೊಂದಿಗೆ ಸಂವಾದ. ‘ಇಂಡಿಯಾ ಆ್ಯಂಡ್​ ದ ವರ್ಲ್ಡ್​’ ಕಾರ್ಯಕ್ರಮದಲ್ಲಿ ಶ್ಯಾಮ್​ ಸರನ್​, ನಿರುಪಮಾ ರಾವ್​, ವಿಜಯ್​ ಚೌತೈವಾಲೆ, ಶರೂಯಾ ದೊವಲ್​ ಭಾಗವಹಿಸಲಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್​ ರಕ್ಷಣಾ ವಲಯದಲ್ಲಿ ‘ಮೇಕಿಂಗ್​ ಇಂಡಿಯಾ’ದ ಪಾತ್ರದ ಕುರಿತು ಮಾತನಾಡಲಿದ್ದಾರೆ.
Loading...

‘ಸ್ಟೇಟ್ಸ್​ ಆಫ್​ ಯೂನಿಯನ್​’ ಕಾರ್ಯಕ್ರಮದಲ್ಲಿ ರೈಸಿಂಗ್​ ಇಂಡಿಯಾಗೆ ಸಂಬಂಧಿಸಿದಂತೆ ರಾಜ್ಯಗಳ ಕೊಡುಗೆ ಬಗ್ಗೆ ಪಂಜಾಬ್​​ನ ಮುಖ್ಯ ಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾನ್​ ಮಾತನಾಡಲಿದ್ದಾರೆ. ಮಾಧ್ಯಮಗಳ ಸ್ವಾತಂತ್ರ್ಯ ಕುರಿತಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಲಿದ್ದಾರೆ. ಕೊನೆಯ ಕಾರ್ಯಕ್ರಮವಾದ ‘ಮೇಕಿಂಗ್​ ಆಫ್​ ಎ ಸ್ಟಾರ್​’ನಲ್ಲಿನಟಿ ಕಂಗನಾ ರಾಣಾವತ್​ ಮಾತನಾಡುತ್ತಾರೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ