ರಸ್ತೆಯಲ್ಲಿ (Road) ಪ್ರಯಾಣಿಸುವುದು (Travel) ಎಂದರೆ ಒಂದು ರೀತಿಯ ಜವಾಬ್ದಾರಿಯುತ (Responsibility) ಕೆಲಸವಾಗಿರುತ್ತದೆ. ಅದರಲ್ಲೂ ನೀವು ಚಾಲಕರ ಸೀಟಿನಲ್ಲಿ (Driver Seat) ಕುಳಿತುಕೊಂಡು ಡ್ರೈವ್ ಮಾಡುತ್ತಿದ್ದರಂತೂ ತುಂಬಾನೇ ಒಂದು ಜವಾಬ್ದಾರಿಯುತ ಕೆಲಸವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ಈಗೆಲ್ಲಾ ಸಂಚಾರ ನಿಯಮಗಳು (Traffic Rules) ತುಂಬಾನೇ ಕಠಿಣವಾಗಿವೆ (Strong) ಅಂತ ಹೇಳಬಹುದು. ನಿಯಮಗಳು ಸ್ವಲ್ಪ ಮಟ್ಟಿಗೆ ಕಠಿಣವಾಗಿಯೇ ಇರಬೇಕು ಬಿಡಿ. ಇಲ್ಲದಿದ್ದರೆ ಕುಡಿದು ಬೇಕಾಬಿಟ್ಟಿಯಾಗಿ ಗಾಡಿ ಮತ್ತು ಕಾರು (Car) ಓಡಿಸುವವರ ಸಂಖ್ಯೆ ನಮ್ಮಲ್ಲಿ ಏನು ಕಡಿಮೆ ಇಲ್ಲ ಅಂತ ಹೇಳಬಹುದು.
ಅಷ್ಟೇ ಅಲ್ಲದೆ ಲೈಸೆನ್ಸ್ ಇಲ್ಲದೆ ಇದ್ದರೂ ಸಹ ಹದಿಹರೆಯದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬೈಕ್ ಮೇಲೆ ಮೂರು ನಾಲ್ಕು ಜನರು ಒಟ್ಟೊಟ್ಟಿಗೆ ಕುಳಿತುಕೊಂಡು ಹೋಗುವುದು ರಸ್ತೆಯ ಮಧ್ಯೆ ಮುಂದಿನ ಚಕ್ರವನ್ನು ಹಾಗೆಯೇ ಎತ್ತಿಕೊಂಡು ವ್ಹೀಲಿಂಗ್ ಮಾಡುವುದೆಲ್ಲವನ್ನು ನಾವು ನೋಡಿರುತ್ತೇವೆ.
ದಿನ ಬೆಳಗಾದರೆ ಸಾಕು ಬೈಕ್ ಮತ್ತು ಕಾರುಗಳ ಅಪಘಾತಗಳ ಸುದ್ದಿಗಳನ್ನು ಟಿವಿ ಮತ್ತು ಪೇಪರ್ ನಲ್ಲಿ ನೋಡುತ್ತಲೇ ಇರುತ್ತೇವೆ ಅಂತ ಹೇಳಬಹುದು.
ಚಾಲಕರ ಮೇಲೆ ಸ್ವಲ್ಪ ಕಠಿಣವಾದ ನಿಯಮಗಳನ್ನು ಹಾಕಬೇಕಾದ ಸಮಯ
ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಮತ್ತು ರಸ್ತೆಯ ಮೇಲೆ ಓಡಾಡುವ ಜನರ ಪ್ರಾಣ ರಕ್ಷಣೆಯ ಸಲುವಾಗಿ ವಾಹನಗಳ ಚಾಲಕರ ಮೇಲೆ ಸ್ವಲ್ಪ ಕಠಿಣವಾದ ನಿಯಮಗಳನ್ನು ಹೆಳಲೇಬೇಕಾದ ಸಮಯ ಇದು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ವಾಹನವನ್ನು ರಸ್ತೆಗಿಳಿಸುವ ಮುನ್ನ ಇರಲಿ ಎಚ್ಚರಿಕೆ..
ಆದರೆ ಇನ್ಮುಂದೆ ನೀವು ಯಾವುದೇ ಬೈಕ್ ಅಥವಾ ಕಾರಿನಲ್ಲಿ ಕೂತು ಪ್ರಯಾಣಿಸುತ್ತಿದ್ದರೂ ನಿಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ ಅಂತ ಹೇಳಬಹುದು.
ಎಲ್ಲಾ ವಾಹನ ಚಾಲಕರು ಹೊಸದಾಗಿ ಜಾರಿಗೆ ಬಂದಿರುವ ಹೊಸ ಸಂಚಾರ ನಿಯಮಗಳನ್ನು ಅರ್ಥ ಮಾಡಿಕೊಂಡು ಅದನ್ನು ತಪ್ಪದೆ ಪಾಲಿಸಬೇಕು.
ಇದು ಸುರಕ್ಷಿತ ಸಂಚಾರ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ರಸ್ತೆಯಲ್ಲಿ ಆಗುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ.
ಸಂಚಾರಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳು ಮತ್ತು ನಿಬಂಧನೆಗಳಿವೆ. ಸುರಕ್ಷಿತ ಸಂಚಾರ ವಾತಾವರಣವನ್ನು ಸೃಷ್ಟಿಸಲು ಕೇಂದ್ರ ಸರ್ಕಾರದಿಂದ ಹಿಡಿದು ಎಲ್ಲಾ ರಾಜ್ಯಗಳ ಸರ್ಕಾರಗಳವರೆಗೆ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಈ ನಿಯಮಗಳನ್ನು ಅನುಸರಿಸುವುದು ಅವಶ್ಯಕ
ಆದರೆ ಇದರ ಹೊರತಾಗಿಯೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಅಂತಹ ಅನೇಕ ಜನರಿದ್ದಾರೆ. ಅಂತಹ ಜನರು ಜಾಗರೂಕರಾಗಿರಬೇಕು ಏಕೆಂದರೆ ನೀವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ನಿಮಗೆ ಬೀಳುತ್ತೇ ಭಾರೀ ದಂಡ.
ಇದಷ್ಟೆ ಅಲ್ಲದೆ ಈ ಉಲ್ಲಂಘನೆ ನಿಮ್ಮನ್ನು ಜೈಲಿಗೆ ಕಳುಹಿಸಬಹುದು. ದಂಡದ ಮೊತ್ತವು ಈಗ ತುಂಬಾ ಹೆಚ್ಚಾಗಿದೆ. ನೀವು ಒಂದೇ ಸಮಯದಲ್ಲಿ ಹಲವಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಎಲ್ಲಾ ನಿಯಮಗಳನ್ನು ಏಕಕಾಲದಲ್ಲಿ ಉಲ್ಲಂಘಿಸಿದ್ದಕ್ಕಾಗಿ ನಿಮಗೆ ಭಾರೀ ದಂಡ ವಿಧಿಸಬಹುದು.
ಇದನ್ನೂ ಓದಿ:Bengaluru Traffic: ಬೆಂಗಳೂರಿನ ಪ್ರಮುಖ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧ
ಉದಾಹರಣೆಗೆ, ನಿಮ್ಮ ಕಾರು ಮಾಲಿನ್ಯ ಪ್ರಮಾಣಪತ್ರವನ್ನು ಹೊಂದಿಲ್ಲ ಮತ್ತು ನಿಮ್ಮ ಚಾಲನಾ ಪರವಾನಗಿಯನ್ನು ಈಗಾಗಲೇ ಅನರ್ಹಗೊಳಿಸಲಾಗಿದೆ ಎಂದು ಭಾವಿಸೋಣ ಅದರೊಂದಿಗೆ ನೀವು ಕುಡಿದಿದ್ದೀರಿ ಮತ್ತು ಕಾರ್ ಇನ್ಶೂರೆನ್ಸ್ ಹೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪೊಲೀಸರು ನಿಮ್ಮನ್ನು ತಡೆದರೆ ಆಗ ನಿಮ್ಮ ಮೇಲೆ ಬೀಳುತ್ತೇ ಭಾರೀ ದಂಡ.
ಯಾವ ಉಲ್ಲಂಘನೆಗೆ ಎಷ್ಟು ದಂಡ ಬೀಳುತ್ತೆ ನೋಡಿ.
ಎರಡನೇ ಬಾರಿಗೆ ಕುಡಿದು ವಾಹನ ಚಲಾಯಿಸಿದರೆ 15 ಸಾವಿರ ರೂಪಾಯಿ, ಅನರ್ಹ ಚಾಲನಾ ಪರವಾನಗಿಯೊಂದಿಗೆ ವಾಹನ ಚಲಾಯಿಸಿದರೆ 10,000 ರೂಪಾಯಿ, ಮಾಲಿನ್ಯ ಪ್ರಮಾಣಪತ್ರ ಹೊಂದಿರದ ವಾಹನಕ್ಕೆ 10 ಸಾವಿರ ರೂಪಾಯಿ, ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 4 ಸಾವಿರ ರೂಪಾಯಿ.
ಇವೆಲ್ಲವನ್ನೂ ಒಟ್ಟಿಗೆ ಉಲ್ಲಂಘಿಸಿದರೆ ಅದು 39 ಸಾವಿರ ರೂಪಾಯಿಗಳಾಗುತ್ತದೆ. ಇಂತಹ ಭಾರೀ ದಂಡ ಕಟ್ಟುವುದು ಬೇಡ ಎಂದರೆ ರಸ್ತೆ ಮೇಲೆ ಓಡಾಡುವಾಗ ಜವಾಬ್ದಾರಿಯಿಂದ ವರ್ತಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ