• Home
 • »
 • News
 • »
 • national-international
 • »
 • Air India: ಏರ್‌ಇಂಡಿಯಾ ಈಗ ಸಖತ್ ಪಾಶ್ ಆಗ್ತಿದೆ, ಏನೆಲ್ಲಾ ಹೊಸ ಫೆಸಿಲಿಟಿ ಇರುತ್ತೆ ನೋಡಿ

Air India: ಏರ್‌ಇಂಡಿಯಾ ಈಗ ಸಖತ್ ಪಾಶ್ ಆಗ್ತಿದೆ, ಏನೆಲ್ಲಾ ಹೊಸ ಫೆಸಿಲಿಟಿ ಇರುತ್ತೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏರ್‌ಇಂಡಿಯಾದ ಮೇಲೆ ಪ್ರಯಾಣಿಕರು ಇರಿಸಿರುವ ನಂಬಿಕೆ ಹಾಗೂ ಅದರ ಪುನರ್‌ರಚನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ಟಾಟಾ ಸಮೂಹ ಏರ್‌ಇಂಡಿಯಾವನ್ನು ಮತ್ತೊಮ್ಮೆ ಲಾಭದಾಯಕವನ್ನಾಗಿಸುತ್ತದೆ ಎಂದು ಆಶಿಸಿದ್ದಾರೆ. ಆದ್ದರಿಂದ ಏರ್‌ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎಂದು ಇಲ್ಲಿದೆ ಮಾಹಿತಿ.

ಮುಂದೆ ಓದಿ ...
 • Share this:

  ಏರ್‌ಇಂಡಿಯಾ (Airindia) ವಿಮಾನವು (Airplane) ತನ್ನ ಹಳೆಯ ಮೆರುಗನ್ನು ಪಡೆದುಕೊಳ್ಳುವ ಕಾರಣದಿಂದ ಪರಿಶ್ರಮಿಸುತ್ತಿದೆ ಹಾಗೂ ಟಾಟಾ (Tata) ಗ್ರೂಪ್ ಸಮಕಾಲೀನ ಯುಗದ ಅತ್ಯಂತ ಸವಾಲಿನ ವಾಯುಯಾನವನ್ನು ಪುನಃ ಆರಂಭಿಸುವ ಸವಾಲನ್ನು ಕೈಗೆತ್ತಿಕೊಂಡಿದೆ. ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ (Airindia Express) ಅನ್ನು ಟಾಟಾ ಸಮೂಹ ತನ್ನ ಅಸ್ಥಿತ್ವಕ್ಕೆ ತಂದುಕೊಂಡಿದೆ. ವಿಮಾನಗಳ ದುರಸ್ತಿ ಪುನಃ ಹಾರಾಟಕ್ಕೆ ಸಿದ್ಧಗೊಳ್ಳುವಂತೆ ಮಾಡುವುದು, 250 ಕೋಟಿ ರೂಪಾಯಿಗಳ ಕೋವಿಡ್ ಸಮಯದ ಮರುಪಾವತಿಯನ್ನು ನೀಡುವುದು, ಊಟ ಉಪಚಾರಗಳಲ್ಲಿ ಸುಧಾರಣೆ ತರುವುದು ಹಾಗೂ ವೆಬ್‌ಸೈಟ್‌ನ ಸುಧಾರಣೆ ಮಾಡುವುದು ಮೊದಲಾದ ಸಮಸ್ಯೆಗಳನ್ನು ಇದೀಗ ಪರಿಹರಿಸಬೇಕಾಗಿದೆ.


  ಮೂರು ಪ್ರಕ್ರಿಯೆಗಳಲ್ಲಿ ವಿಮಾನ ಯಾನದ ಕಾರ್ಯಾಚರಣೆ


  ಏರ್‌ಇಂಡಿಯಾ ಎಮ್‌ಡಿ ಹಾಗೂ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಹೇಳುವಂತೆ ಮಹಾರಾಜಾಸ್ ಕಿಂಗ್‌ಡಮ್‌ನ ಹಂತ ಹಂತದ ನಿರ್ಮಾಣವನ್ನು ಮೂರು ಹಂತದ ಪ್ರಕ್ರಿಯೆಯನ್ನೊಳಗೊಂಡಂತೆ ಹೇಗೆ ಮರುನಿರ್ಮಾಣ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ - ಟ್ಯಾಕ್ಸಿ, ಟೇಕ್ ಆಫ್ ಮತ್ತು ಕ್ಲೈಂಬಿಂಗ್ ಇವೇ ಆ ಮೂರು ಪ್ರಕ್ರಿಯೆಗಳಾಗಿವೆ - ಮುಂದಿನ ಐದು ವರ್ಷಗಳಲ್ಲಿ ಏರ್‌ಲೈನ್ ಪ್ರಮಾಣ ಪ್ರಸ್ತುತ 120 ರಿಂದ ಮೂರು ಪಟ್ಟು ಹೆಚ್ಚಾಗುತ್ತದೆ ಮತ್ತು ಅಂತಿಮವಾಗಿ ಎಲ್ಲಾ ಹೊಸ ವಿಮಾನಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.


  From now on Air India will be a part of the Tata organization Here s what will change
  ಸಾಂದರ್ಭಿಕ ಚಿತ್ರ


  30% ಮಾರುಕಟ್ಟೆ ಪಾಲಿನ ಗುರಿ


  ಏರ್‌ಇಂಡಿಯಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಹಾರಾಟಗಳಲ್ಲಿ 30% ಮಾರುಕಟ್ಟೆ ಪಾಲನ್ನು ಗುರಿಯಾಗಿಸಿಕೊಂಡಿದೆ. ಪ್ರಕ್ರಿಯೆಯ ಮೊದಲ ಹಂತವೆಂದರೆ ಬ್ರ್ಯಾಂಡ್ ಅನ್ನು ಹಾಳು ಮಾಡುವ ವಿಷಯಗಳನ್ನು ಪರಿಹರಿಸುವುದಾಗಿದೆ. ಎರಡನೇ ಹಂತ ಟೇಕ್ ಆಫ್‌ ಫೇಸ್‌ನಲ್ಲಿ ವ್ಯವಸ್ಥೆ, ಪ್ರಕ್ರಿಯೆ, ಪ್ರಯಾಣಿಕರು ಹಾಗೂ ವಿಮಾನ ಸೇರಿದಂತೆ ಸಂಬಂಧಿತ ಉಪಕರಣಗಳಲ್ಲಿ ವೇಗವಾಗಿ ಹೂಡಿಕೆಯನ್ನು ಮಾಡುವುದಾಗಿದೆ.


  ಇದನ್ನೂ ಓದಿ: ಈ ಆ್ಯಪ್ಸ್ ನಿಮ್ ಮೊಬೈಲ್​ನಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ! ಫೇಸ್ಬುಕ್ ಸೆಕ್ಯುರಿಟಿ ಅಲರ್ಟ್


  ಏರ್ ಇಂಡಿಯಾವನ್ನು ನಾವು ಬಯಸಿರುವ ಮಟ್ಟಕ್ಕೆ ತರಲು ಈ ಪ್ರಕ್ರಿಯೆ ಅಗತ್ಯವಾಗಿದೆ ಎಂದು ಹೇಳಿರುವ ವಿಲ್ಸನ್, ಐದನೇ ವರ್ಷದ ಅಂತ್ಯದ ಸಮಯದಲ್ಲಿ ನಾವು ವಿಶ್ವದರ್ಜೆಗೆ ಏರಲಿದ್ದೇವೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸುವ ಕೆಲಸವನ್ನು ಏರ್ ಇಂಡಿಯಾ ಮಾಡಲಿದೆ ಎಂದು ವಿಲ್ಸನ್ ತಿಳಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ವಿಮಾನದಲ್ಲಿರುವ ಆಸನಗಳನ್ನು ಸರಿಪಡಿಸುವ ಉದ್ದೇಶವನ್ನಿಟ್ಟುಕೊಂಡಿದ್ದು ವೈಡ್ ಬಾಡಿ ಫ್ಲೀಟ್‌ಗೆ ಅನುಗುಣವಾಗಿರುವಂತೆ ಆಸನಗಳ ವ್ಯವಸ್ಥೆಯನ್ನು ವಿಮಾನದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


  ಆನ್‌ಬೋರ್ಡ್ ಅನುಭವದ ಸುಧಾರಣೆ


  ಪ್ರಯಾಣಿಕರ ಆನ್‌ಬೋರ್ಡ್ ಅನುಭವವನ್ನು ಸುಧಾರಿಸಲು ನಾವು ಕಳೆದ ಒಂಬತ್ತು ತಿಂಗಳುಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ತಿಳಿಸಿರುವ ವಿಲ್ಸನ್, ಹಾರಾಟಕ್ಕೆ ಸುಗಮವಾಗುವಂತೆ ವಿಮಾನಗಳನ್ನು ವ್ಯವಸ್ಥಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.


  From now on Air India will be a part of the Tata organization Here s what will change
  ಸಾಂದರ್ಭಿಕ ಚಿತ್ರ


  ಏರ್‌ಲೈನ್ ಪ್ರಸ್ತುತ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದು ಆಸನಗಳನ್ನು ದುರಸ್ತಿಪಡಿಸುವುದು ಮಾತ್ರವಲ್ಲದೆ ವಿಮಾನ ಹಾರಾಟಕ್ಕೂ ಆರ್ಥಿಕ ಅಡಚಣೆ ಕಾಡುತ್ತಿದೆ ಎಂಬುದು 52 ರ ಹರೆಯದ ವಿಲ್ಸನ್ ಮಾತಾಗಿದೆ.


  ಏರ್‌ಇಂಡಿಯಾದ ಕಿರಿದಾದ ರಚನೆಯನ್ನು ಹೊಂದಿರುವ 70 ವಿಮಾನಗಳಲ್ಲಿ 54 ಪ್ರಸ್ತುತ ಸೇವೆಗೆ ಸಮರ್ಥವಾಗಿವೆ ಎಂದು ತಿಳಿಸಿದ್ದಾರೆ. ಉಳಿದ 16 ವಿಮಾನಗಳು 2023 ರ ಆರಂಭ ಸಮಯದಲ್ಲಿ ಸೇವೆಗೆ ಮರಳಲಿವೆ ಎಂದು ತಿಳಿಸಿದ್ದಾರೆ. ಇನ್ನು ಸಂಸ್ಥೆಯ ದೊಡ್ಡದಾದ 43 ವಿಮಾನಗಳಲ್ಲಿ 33 ಕಾರ್ಯನಿರ್ವಹಿಸುತ್ತಿದ್ದು, ಉಳಿದ ವಿಮಾನಗಳನ್ನು 2023 ರ ಆರಂಭದಲ್ಲಿ ಸೇವೆಗೆ ನಿಯೋಜಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: ಇಂಟರ್ನೆಟ್​ ಇಲ್ಲದೇ UPI ಪೇಮೆಂಟ್​ ಮಾಡ್ಬಹುದು! ಹೇಗೆ ಅಂತೀರಾ? ಇಲ್ಲಿದೆ ನೋಡಿ


  ವೈಡ್ ಬಾಡಿ ವಿಮಾನಗಳ ಆಸನ ವ್ಯವಸ್ಥೆ ಸರಿಪಡಿಸುವಿಕೆ


  ಪ್ರಸ್ತುತ ಬಳಕೆಯಲ್ಲಿರುವ ವೈಡ್ ಬಾಡಿ ವಿಮಾನಗಳ ಕಾರ್ಪೆಟ್‌ಗಳು, ಆಸನಗಳು, ಕುಶನ್‌ಗಳನ್ನು ಮುಂದಿನ ವರ್ಷದ ಆರಂಭದಲ್ಲಿ ದುರಸ್ತಿ ಮಾಡಲಾಗುತ್ತದೆ ಎಂದು ವಿಲ್ಸನ್ ಹೇಳಿದ್ದಾರೆ. ವಿಮಾನದ ಒಳಾಂಗಣ ವಿನ್ಯಾಸವನ್ನು ನವೀಕರಿಸಲು ಸಂಬಂಧಪಡಟ್ಟವರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ವಿಲ್ಸನ್ ಹೇಳಿದ್ದು, ಎಂಜಿನಿಯರಿಂಗ್ ಕೆಲಸಗಳು ಬಾಕಿ ಇವೆ.


  ಇದೊಂದು ಸಣ್ಣ ಪ್ರಕ್ರಿಯೆಯಲ್ಲ, ಹಾಗಾಗಿ ಅದನ್ನು ಮಾಡಲು ಸಮಯ ಬೇಕಾಗುತ್ತದೆ ಎಂದು ವಿಲ್ಸನ್ ಹೇಳಿದ್ದಾರೆ. ನಾಲ್ಕು ಟಾಟಾ ಏರ್‌ಲೈನ್ಸ್‌ಗಳಾದ ವಿಸ್ತಾರಾ, ಏರ್‌ಏಷಿಯಾ ಇಂಡಿಯಾ, AI ಮತ್ತು AI ಎಕ್ಸ್‌ಪ್ರೆಸ್ ಅನ್ನು ಸಂಯೋಜಿಸುವ ಕುರಿತು ವಿಲ್ಸನ್ ತಿಳಿಸಿದ್ದು, ಏರ್‌ಇಂಡಿಯಾ ಮಾತ್ರವೇ ಪೂರ್ಣ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.


  ದೇಶೀಯ ಸಮಯಪಾಲನೆಯಲ್ಲಿ ನಂಬರ್-1 ಸ್ಥಾನ


  ಏರ್‌ಇಂಡಿಯಾದ ಮೇಲೆ ಪ್ರಯಾಣಿಕರು ಇರಿಸಿರುವ ನಂಬಿಕೆ ಹಾಗೂ ಅದರ ಪುನರ್‌ರಚನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ಟಾಟಾ ಸಮೂಹ ಏರ್‌ಇಂಡಿಯಾವನ್ನು ಮತ್ತೊಮ್ಮೆ ಲಾಭದಾಯಕವನ್ನಾಗಿಸುತ್ತದೆ ಎಂದು ಆಶಿಸಿದ್ದಾರೆ. 2014 ರಿಂದ ಸೆಪ್ಟೆಂಬರ್ 2022 ರವರೆಗೆ, ಏರ್ ಇಂಡಿಯಾ ಸಮಯಪ್ರಜ್ಞೆಯಲ್ಲಿ ಎಂದಿಗೂ ನಂಬರ್ ಒನ್ ಆಗಿರಲಿಲ್ಲ. ಇದೀಗ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಮತ್ತು ದೇಶೀಯ ಸಮಯಪಾಲನೆಯಲ್ಲಿ ನಾವು ಮತ್ತೆ ಮೊದಲ ಸ್ಥಾನದಲ್ಲಿದ್ದೇವೆ ಎಂದು ವಿಲ್ಸನ್ ತಿಳಿಸಿದ್ದಾರೆ.


  ಇದನ್ನೂ ಓದಿ: ಅಕ್ಷರಶಃ ಕಸಕ್ಕೆ ಸಮ ಆಗಲಿವೆ 5.3 ಶತಕೋಟಿ ಸ್ಮಾರ್ಟ್‌ಫೋನ್‌ಗಳು!


  ಕೆಲವು ಘಟಕಗಳಲ್ಲಿ ಲಾಭ ಗಳಿಸುವುದು ಸವಾಲಿನ ಸಂಗತಿಯಾಗಿದೆ ಏಕೆ?


  ವಿಮಾನಗಳಲ್ಲಿ ಸೀಟುಗಳ ಉತ್ಪನ್ನವು ಸಾಕಷ್ಟು ಹಳೆಯದಾಗಿರುವುದರಿಂದ ಕೆಲವು ಘಟಕಗಳಲ್ಲಿ ಲಾಭ ಗಳಿಸುವುದು ಸವಾಲಿನ ಸಂಗತಿಯಾಗಿದೆ. ಆದರೆ ನಿಧಾನವಾಗಿ ಪ್ರಗತಿಯತ್ತ ಮುನ್ನುಡಿ ಇಡುತ್ತಿರುವುದಾಗಿ ತಿಳಿಸಿರುವ ವಿಲ್ಸನ್, ವೈಡ್ ಬಾಡಿ ಏರ್‌ಕ್ರಾಫ್ಟ್‌ನ IFE ಸಿಸ್ಟಮ್‌ಗಳನ್ನು ಸರಿಪಡಿಸಲು ತಯಾರಕರ ಜೊತೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಎಲ್ಲಾ ವೈಡ್ ಬಾಡಿ ವಿಮಾನಗಳಲ್ಲಿ ಬಿಸ್‌ನೆಸ್ ಕ್ಲಾಸ್ IFE ಗಳನ್ನು ಅಳವಡಿಸಲು ಇನ್ನೇನು ಕೆಲವೇ ವಾರಗಳ ಅಂತರದಲ್ಲಿದ್ದೇವೆ ಎಂದು ವಿಲ್ಸನ್ ಹೇಳಿದ್ದಾರೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು