ನೀರವ್​​​ ಮೋದಿ ಒಡೆತನದ ಪೇಂಟಿಂಗ್​​ ಮಾರಾಟವಾಗಿದ್ದು ಎಷ್ಟು ಕೋಟಿಗೆ ಗೊತ್ತಾ?

ವಿಚಾರಣೆ ವೇಳೆ ನೀರವ್ ಮೋದಿ ಅವರ ಕೆಲ ಆಸ್ತಿಗಳನ್ನು ಮಾರಾಟ ಮಾಡಲು ವಿಶೇಷ ನ್ಯಾಯಾಲಯವೊಂದು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ಕೊಟ್ಟಿತ್ತು. ಇದರ ಬೆನ್ನಲ್ಲೇ ನೀರವ್ ಮೋದಿ ಒಡೆತನದ ಸುಮಾರು 173 ಪೇಂಟಿಂಗ್​ಗಳು ಹಾಗೂ 11 ವಾಹನಗಳನ್ನು ಇಡಿ ಮಾರಾಟ ಮಾಡಲು ಮುಂದಾಗಿತ್ತು.

Ganesh Nachikethu | news18
Updated:March 27, 2019, 7:34 AM IST
ನೀರವ್​​​ ಮೋದಿ ಒಡೆತನದ ಪೇಂಟಿಂಗ್​​ ಮಾರಾಟವಾಗಿದ್ದು ಎಷ್ಟು ಕೋಟಿಗೆ ಗೊತ್ತಾ?
ನೀರವ್​​ ಮೋದಿ ಪೇಟಿಂಗ್​​
Ganesh Nachikethu | news18
Updated: March 27, 2019, 7:34 AM IST
ನವದೆಹಲಿ(ಮಾ.27): ಪಿಎನ್​​ಬಿ ​​ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ  ಪ್ರಮುಖ ಆರೋಪಿ ಮತ್ತು ಉದ್ಯಮಿ ನೀರವ್​​ ಮೋದಿ ಒಡೆತನದ ಎರಡು ಪೇಂಟಿಂಗ್​​ಗಳು 36 ಕೋಟಿಗೆ ಮಾರಾಟವಾಗಿವೆ. ನೀರವ್​​​ ಮೋದಿ ಒಡೆತನದ ಮತ್ತು ಭಾರತೀಯ ಖ್ಯಾತ ವರ್ಣಚಿತ್ರಕಾರ ರಾಜಾ ರವಿವರ್ಮಾ ಅವರ ಎರಡು ಪೇಟಿಂಗ್​​ಗಳನ್ನು ಖುದ್ದು ಜಾರೀ ನಿರ್ದೇಶನಾಲಯ ಅಧಿಕಾರಿಗಳೇ ಮಾರಟ ಮಾಡಿದ್ಧಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಜ್ರ ಉದ್ಯಮಿ ನೀರವ್ ಮೋದಿಯನ್ನು ಇತ್ತೀಚೆಗೆ ಬಂಧಿಸಲಾಯಿತು. ಲಂಡನ್​​ನಲ್ಲಿ ನೀರವ್​​ ನೆಲೆಸಿದ್ದ ಬಗ್ಗೆ ಮಾಧ್ಯಮ ವರದಿ ಪ್ರಕಟವಾದ ಬಳಿಕ ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಕೂಡಲೇ ಭಾರತ ಸರ್ಕಾರ ನೀರವ್ ಮೋದಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಇದನ್ನೂ ಓದಿ: ಪಿಎನ್​ಬಿ ಬಹುಕೋಟಿ ಹಗರಣ: ಕಿಂಗ್​​ಪಿನ್ ನೀರವ್ ಮೋದಿ ಸ್ವಿಜರ್ಲೆಂಡಿಗೆ ಪರಾರಿ?

ವಿಚಾರಣೆ ವೇಳೆ ನೀರವ್ ಮೋದಿ ಅವರ ಕೆಲ ಆಸ್ತಿಗಳನ್ನು ಮಾರಾಟ ಮಾಡಲು ವಿಶೇಷ ನ್ಯಾಯಾಲಯವೊಂದು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ಕೊಟ್ಟಿತ್ತು. ಇದರ ಬೆನ್ನಲ್ಲೇ ನೀರವ್ ಮೋದಿ ಒಡೆತನದ ಸುಮಾರು 173 ಪೇಂಟಿಂಗ್​ಗಳು ಹಾಗೂ 11 ವಾಹನಗಳನ್ನು ಇಡಿ ಮಾರಾಟ ಮಾಡಲು ಮುಂದಾಗಿತ್ತು. ಈ ದುಬಾರಿ ಪೇಂಟಿಂಗ್​ಗಳ ಒಟ್ಟು ಮೌಲ್ಯ 57.72 ಕೋಟಿ ರೂ ಎಂದು ಅಂದಾಜಿಸಲಾಗಿತ್ತು. ಈ ಪೇಟಿಂಗ್​​ಗಳಲ್ಲಿ ಎರಡು ಕಲಾಕೃತಿಗಳು ಈಗಾಗಲೇ 36 ಕೋಟಿಗೆ ಮಾರಾಟವಾಗಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ಧಾರೆ.

ಲಂಡನ್​​ನಲ್ಲಿ ಓಡಾಡುತ್ತಿರವ ನೀರವ್ ಮೋದಿ ಬಗ್ಗೆ ಟೆಲಿಗ್ರಾಫ್ ಮಾರ್ಚ್ 9 ರಂದು ವರದಿ ಮಾಡಿತ್ತು. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ “ನೋ ಕಮೆಂಟ್ಸ್” ಎಂದು ಉತ್ತರಿಸಿದ್ದರು. 13 ಸಾವಿರ ಕೋಟಿ ರೂ. ವಂಚನೆಗೈದ ಆರೋಪಿ ನೀರವ್ ಮೋದಿಗೆ ಇನ್ನು ಎಷ್ಟು ದಿನ ಲಂಡನ್ ನಲ್ಲಿ ಇರಲಿದ್ದೀರಿ ಎನ್ನುವ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಈ ಆಧಾರದ ಮೇರೆಗೆ ನೀರವ್​​ ಮೋದಿಯನ್ನು ಭಾರತ ಸರ್ಕಾರ ಬಂಧಿಸಿತ್ತು.

ಇದನ್ನೂ ಓದಿ: ಪಿಎನ್​ಬಿ ಬ್ಯಾಂಕ್ ವಂಚಕ ನೀರವ್ ಮೋದಿ ಸಹೋದರಿಯ ವಿರುದ್ಧ ರೆಡ್​ ಕಾರ್ನರ್​​ ನೋಟಿಸ್​​
Loading...

ಏನಿದು ಪ್ರಕರಣ?: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

First published:March 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626