ಎಲ್ಲೆಡೆ ರಣಕೇಕೆ ಹಾಕುತ್ತಿರುವ ಕೊರೋನಾದಿಂದ ಜನರು ನಲುಗಿದ್ದಾರೆ. ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ವ್ಯಾಪಾರಗಳು ಸ್ಥಗಿತಗೊಂಡಿವೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಇದೇ ರೀತಿಯಾಗಿ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಮಕ್ಕಳ ಬೆಳವಣಿಗೆಯ ಮೇಲೆ ಭಯ ಹುಟ್ಟುತ್ತಿದೆ. ಕೊರೋನಾ ಎರಡನೇ ಅಲೆಯ ಕಾರಣ ನೀಟ್, ಜೆಇಇ ಸೇರಿದಂತೆ ಇತರೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ ಯಾವಾಗ ಪರೀಕ್ಷೆ ಎಂಬ ಮಾಹಿತಿ ಇಲ್ಲ. ಆದ ಕಾರಣ ಪರೀಕ್ಷೆಯ ಹೊಸ ದಿನಾಂಕವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ನೀಟ್ (ಸ್ನಾತಕೋತ್ತರ ಪದವಿ) 2021:
ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆಸುವ ನೀಟ್ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಈ ಪರೀಕ್ಷೆಯನ್ನು ಏಪ್ರಿಲ್ 18ರಂದು ಆಯೋಜಿಸಲಾಗಿತ್ತು. ಆದರೆ ಕೋವಿಡ್ ಕಾರಣ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ. ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ಏಪ್ರಿಲ್ 15ರಂದೇ https://natboard.edu.in/ ವೆಬ್ಸೈಟ್ನಲ್ಲಿ ಸೂಚಿಸಲಾಗಿದೆ.
ಬಳ್ಳಾರಿಯಲ್ಲಿ ಕಾಟಾಚಾರಕ್ಕೆ ಗಡಿ ಚೆಕ್ಪೋಸ್ಟ್ ನಿರ್ಮಾಣ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಜೆಇಇ ಮುಖ್ಯ ಪರೀಕ್ಷೆ (ಏಪ್ರಿಲ್)
ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 2021ರ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಿದೆ. ಹೊಸ ದಿನಾಂಕವನ್ನು ಪರೀಕ್ಷೆ ಪ್ರಾರಂಭವಾಗುವ 15 ದಿನದ ಮೊದಲು ಘೋಷಿಸಲಾಗುವುದು. ಈ ಪರೀಕ್ಷೆ ಏಪ್ರಿಲ್ 27ರಿಂದ 30ರವರೆಗೆ ನಡೆಯಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆ ಮುಂದೂಡಲಾಗಿದೆ. ಅಭ್ಯರ್ಥಿಗಳು ಎನ್ಟಿಎ ಅಭ್ಯಾಸ ಆ್ಯಪ್ ಮೂಲಕ ಮೊದಲೇ ತಿಳಿಸಿದ ಪಠ್ಯಕ್ರಮವನ್ನು ಅಧ್ಯಯನ ಮಾಡುವಂತೆ ಹೇಳಿದೆ.
ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ:
ಕೋವಿಡ್ ಮಹಾಮಾರಿ ಹಿನ್ನೆಲೆ ಉತ್ತರಪ್ರದೇಶದ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯವು ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಲಾಗುವುದು ಎಂದು ವಿವಿ ತಿಳಿಸಿದೆ. ಪರೀಕ್ಷೆಯನ್ನು ಜೂನ್ 20ರಿಂದ ಜುಲೈ 11ರವರೆಗೆ ಆಯೋಜಿಸಲಾಗಿತ್ತು. 2021-22ರ ಪರೀಕ್ಷಾ ಹೊಸ ವೇಳಾಪಟ್ಟಿಯನ್ನು ಸರಿಯಾದ ಸಮಯದಲ್ಲಿ ಘೋಷಿಸಲಾಗುವುದು ಎಂದು ವಿಶ್ವವಿದ್ಯಾಲಯ ಹೇಳಿದೆ.
ಯುಪಿಸಿಇಟಿ 2021
ರಾಜ್ಯದಾದ್ಯಂತ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ಜಂಟಿಯಾಗಿ ನಡೆಯುವ ಪರೀಕ್ಷೆಯನ್ನು ಸಹ ನಿಲ್ಲಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಉತ್ತರ ಪ್ರದೇಶ ಸಂಯೋಜಿತ ಪ್ರವೇಶ ಪರೀಕ್ಷೆ ಅಥವಾ ಯುಪಿಸಿಇಟಿ 2021 ಮೇ 16 ರಿಂದ ಜೂನ್ 15 ರವರೆಗೆ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿದೆ. ಆನ್ಲೈನ್ ಅರ್ಜಿ ಮೇ 10 ರವರೆಗೆ ತೆರೆದಿರುತ್ತದೆ.
ಬಿಎಚ್ಯು ಪ್ರವೇಶ ಪರೀಕ್ಷೆ 2021:
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪರೀಕ್ಷೆಯನ್ನು ಸಹ ಮುಂದೂಡಲಾಗಿದೆ. ಕಾನೂನು ಮತ್ತು ಮಾನವ ಹಕ್ಕುಗಳ ಪ್ರವೇಶ ಪರೀಕ್ಷೆ (ಹೆಚ್ಆರ್ಡಿಇ) ಏಪ್ರಿಲ್ 18ರಂದು ಪರೀಕ್ಷೆಯನ್ನು ನಡೆಸಬೇಕಾಗಿತ್ತು. ಈ ಪರೀಕ್ಷಾ ದಿನಾಂಕವನ್ನು ಆರ್ಇಟಿ ಮತ್ತು ಆರ್ಇಟಿ ಹೆಚ್ಆರ್ಡಿಇ ತಡವಾಗಿ ಘೋಷಿಸಲಾಗುವುದು.
ದೆಹಲಿಯ ಮೇಲೆ ಕೊರೋನಾ ಕರಿನೆರಳು ಇರುವುದರಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪಿಚ್ಡಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಏಪ್ರಿಲ್ 20, 22, 24, 26 ರಂದು ಪರೀಕ್ಷೆ ನಡೆಯಬೇಕಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ