ಮದುವೆಯಿಂದ ಸಾವಿನವರೆಗೆ; ಶಿವಸೇನೆ ಜೊತೆಗೆ ಕಾಂಗ್ರೆಸ್ ಮೈತ್ರಿ ಬಗ್ಗೆ ಓವೈಸಿ ಅಣಕ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಹಳೆಯ ಪಕ್ಷ ಭಾರತ ರಾಜಕೀಯ ವಿವಾಹ ಕಾಯ್ದೆಯನ್ನು ತಂದಿತು ಮತ್ತು ಶಿವಸೇನೆಯೊಂದಿಗೆ ಮದುವೆಯಾಯಿತು ಎಂದು ಓವೈಸಿ ಹೇಳಿರುವುದಾಗಿ ಎಎನ್​ಐ ವರದಿ ಮಾಡಿದೆ.

ಅಸಾದುದ್ದೀನ್ ಒವೈಸಿ

ಅಸಾದುದ್ದೀನ್ ಒವೈಸಿ

  • Share this:
ಹೈದರಾಬಾದ್: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಅಣಕ ಮಾಡಿದ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ, ಈ ಮೈತ್ರಿಯನ್ನು ಮದುವೆಗೆ ಹೊಲಿಕೆ ಮಾಡಿ ಮತ್ತು ಅದೇ ವೇಗದಲ್ಲಿ ಮೈತ್ರಿ ಅಸುನೀಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಹಳೆಯ ಪಕ್ಷ ಭಾರತ ರಾಜಕೀಯ ವಿವಾಹ ಕಾಯ್ದೆಯನ್ನು ತಂದಿತು ಮತ್ತು ಶಿವಸೇನೆಯೊಂದಿಗೆ ಮದುವೆಯಾಯಿತು ಎಂದು ಓವೈಸಿ ಹೇಳಿರುವುದಾಗಿ ಎಎನ್​ಐ ವರದಿ ಮಾಡಿದೆ.

ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಹೊಸ ಕಾನೂನನ್ನು ತಂದಿತು. ಅದು ಭಾರತ ರಾಜಕೀಯ ವಿವಾಹ ಕಾಯ್ದೆ. ಈ ಕಾಯ್ದೆಯ ಮೂಲಕ ಕಾಂಗ್ರೆಸ್​ ಶಿವಸೇನೆಯನ್ನು ಮದುವೆಯಾಯಿತು. ಈ ಮದುವೆಯ ಬಳಿಕ ಎನ್​ಸಿಪಿ ಶಿವಸೇನೆಯೊಂದಿಗೆ ಸಾಂಪ್ರದಾಯಿಕವಾಗಿ ಮದುವೆಯಾಯಿತು. ಅಲ್ಲಿ ಉದ್ಧವ್ ಠಾಕ್ರೆಯನ್ನು ಮದುಮಗನನ್ನಾಗಿ ಮಾಡಲಾಯಿತು ಎಂದು ವ್ಯಂಗ್ಯವಾಗಿ ಹೇಳಿದರು.

ಇದನ್ನು ಓದಿ: 50 ಲಕ್ಷ ಮುಸ್ಲಿಂ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ; ಬಿಜೆಪಿ ನಾಯಕನಿಂದ ಮತ್ತೆ ವಿವಾದಾತ್ಮಕ ಹೇಳಿಕೆ

ಈ ಎಲ್ಲವುಗಳ ಬಳಿಕ ನನ್ನನ್ನು ನಿಂದಿಸುತ್ತಿರುವ ಬಿಜೆಪಿ ಶಿವಸೇನೆಯಿಂದ ವಿಚ್ಛೇಧನ ಪಡೆಯಿತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಪಕ್ಷವನ್ನು ಎರಡು ಕಡೆಯಿಂದ ಗುರಿಯಾಗಿಸಲಾಗುತ್ತಿತ್ತು. ಕಾಂಗ್ರೆಸ್ ಮತ್ತು ಎನ್‌ಸಿಪಿ ಒಂದು ಕಡೆ ಹಾಗೂ ಶಿವಸೇನೆ ಮತ್ತು ಬಿಜೆಪಿ ಮತ್ತೊಂದು ಕಡೆ ಎಂದು ಓವೈಸಿ ಮಾರ್ಮಿಕವಾಗಿ ಹೇಳಿದರು.
First published: