HOME » NEWS » National-international » FROM LPG CYLINDERS TO INSURANCE POLICIES MAJOR CHANGES FROM DECEMBER 1 DETAILS HERE LG

ಎಲ್​ಪಿಜಿ ಸಿಲಿಂಡರ್​ನಿಂದ ಇನ್ಶೂರೆನ್ಸ್​​ ಪಾಲಿಸಿವರೆಗೆ; ಡಿಸೆಂಬರ್ 1ರಿಂದ ಏನೆಲ್ಲಾ ಬದಲಾವಣೆ?; ಇಲ್ಲಿದೆ ಮಾಹಿತಿ

ಮೂಲಗಳ ಪ್ರಕಾರ, ಎಲ್​ಪಿಜಿ ಸಿಲಿಂಡರ್​ ಬೆಲೆಯು ಡಿಸೆಂಬರ್​ ತಿಂಗಳಿನಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕೋವಿಡ್-19 ಆರೋಗ್ಯ ಬಿಕ್ಕಟ್ಟಿನ ನಡುವೆ ಅಡುಗೆ ಅನಿಲ ದರದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸರ್ಕಾರ ಕೆಲವೊಂದು ಮಹತ್ತರ ಹೆಜ್ಜೆ ಇಟ್ಟಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

news18-kannada
Updated:December 1, 2020, 10:55 AM IST
ಎಲ್​ಪಿಜಿ ಸಿಲಿಂಡರ್​ನಿಂದ ಇನ್ಶೂರೆನ್ಸ್​​ ಪಾಲಿಸಿವರೆಗೆ; ಡಿಸೆಂಬರ್ 1ರಿಂದ ಏನೆಲ್ಲಾ ಬದಲಾವಣೆ?; ಇಲ್ಲಿದೆ ಮಾಹಿತಿ
ಎಲ್​ಪಿಜಿ ಗ್ಯಾಸ್
  • Share this:
ನವದೆಹಲಿ(ಡಿ.01): ಜನಸಾಮಾನ್ಯರ ದಿನನಿತ್ಯ ಜೀವನದಲ್ಲಿ ಬದಲಾವಣೆಗಳಾಗುವುದು ಸಹಜ. ಅಂತೆಯೇ ಡಿಸೆಂಬರ್ 1ರಿಂದ ಅಂದರೆ ಇಂದಿನಿಂದ ಜನಸಾಮಾನ್ಯರ ಜೀವನದ ಮೇಲೆ ಕೆಲವೊಂದು ಪರಿಣಾಮಗಳು ಬೀರಬಹುದು. ಅಂತಹ ಪರಿಣಾಮಗಳೇನು ಎಂಬುದನ್ನು ಇಲ್ಲಿ ನೋಡಬಹುದಾಗಿದೆ. ಡಿ.1ರಿಂದ ಆಗಬಹುದಾದ ಬದಲಾವಣೆಗಳು ಇಲ್ಲಿವೆ.

ಜನಸಾಮಾನ್ಯರು ದಿನ ಬೆಳಗಾದರೆ ಅತೀ ಮುಖ್ಯವಾಗಿ ಬಳಸುವುದು ಅಡುಗೆ ಅನಿಲ. ಹೌದು, ಪ್ರತಿನಿತ್ಯ ಬಳಸುವ ಈ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಇಂದಿನಿಂದ ಬದಲಾವಣೆ ಆಗುವ ಸಾಧ್ಯತೆ ಇದೆ. ತೈಲ ಕಂಪನಿಗಳು ಆಗಾಗ್ಗೆ ಬೆಲೆ ಪರಿಷ್ಕರಣೆ ಮಾಡುತ್ತವೆ. ಮೂಲಗಳ ಪ್ರಕಾರ, ಎಲ್​ಪಿಜಿ ಸಿಲಿಂಡರ್​ ಬೆಲೆಯು ಡಿಸೆಂಬರ್​ ತಿಂಗಳಿನಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕೋವಿಡ್-19 ಆರೋಗ್ಯ ಬಿಕ್ಕಟ್ಟಿನ ನಡುವೆ ಅಡುಗೆ ಅನಿಲ ದರದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸರ್ಕಾರ ಕೆಲವೊಂದು ಮಹತ್ತರ ಹೆಜ್ಜೆ ಇಟ್ಟಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

LPG Cylinder Cashback Offer: ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿದರೆ 500 ರೂವರೆಗೆ ಕ್ಯಾಷ್ ಬ್ಯಾಕ್

ಮತ್ತೊಂದು ಬಹುಮುಖ್ಯ ಬದಲಾವಣೆ ಎಂದರೆ, ವಿಮಾದಾರರ(ಇನ್ಶೂರೆನ್ಸ್​) ಪ್ರೀಮಿಯಂ ಖಾತೆಯ ಹಣದಲ್ಲಿ ಬದಲಾವಣೆ ಆಗಬಹುದು. ಅಂದರೆ ಡಿಸೆಂಬರ್ ತಿಂಗಳಿನಿಂದ ವಿಮಾದಾರರು ತಮ್ಮ ಪ್ರೀಮಿಯಂ ಮೊತ್ತವನ್ನು ಶೇ.50ರಷ್ಟಕ್ಕೆ ಕಡಿಮೆ ಮಾಡಲು ಅವಕಾಶ ಪಡೆಯುತ್ತಾರೆ. ಅಂದರೆ ಇನ್ಶೂರೆನ್ಸ್​ ಹೊಂದಿರುವವರು ಕೇವಲ ಅರ್ಧದಷ್ಟು ಕಂತುಗಳನ್ನು ಕಟ್ಟುವುದರೊಂದಿಗೆ ತಮ್ಮ ಪಾಲಿಸಿಯನ್ನು ಉಳಿಸಿಕೊಳ್ಳಲು
ಸಾಧ್ಯವಾಗುತ್ತದೆ.
Youtube Video

ಜನಸಾಮಾನ್ಯರು ಪ್ರತಿನಿತ್ಯ ಪ್ರಯಾಣಿಸುವ ರೈಲಿನ ಪ್ರಯಾಣದಲ್ಲಿ ಬದಲಾವಣೆ ಆಗಬಹುದು. ಅಂದರೆ ಕೋವಿಡ್ ಕಾರಣದಿಂದಾಗಿ ರೈಲುಗಳ ಸಂಚಾರ ಸ್ಥಗಿತ ಆಗಿತ್ತು. ಆದರೆ ಕೆಲವು ದಿನಗಳಿಂದ ಹಂತ-ಹಂತವಾಗಿ ರೈಲುಗಳನ್ನು ಬಿಡಲಾಗುತ್ತಿದೆ. ಈ ಡಿಸೆಂಬರ್ ತಿಂಗಳಿನಲ್ಲಿ ಹೊಸ ರೈಲುಗಳು ಕಾರ್ಯಾಚರಣೆ ಶುರುಮಾಡುವ ಸಾಧ್ಯತೆ ಇದೆ. ಝೇಲಂ ಎಕ್ಸ್​​ಪ್ರೆಸ್​ ಮತ್ತು ಪಂಜಾಬ್ ಮ್ಯೇಲ್ ಎಕ್ಸ್​ಪ್ರೆಸ್​​ ರೈಲುಗಳು ಇಂದಿನಿಂದ ಅಂದರೆ ಡಿ.1ರಿಂದ ಪ್ರತಿದಿನ ಸಂಚರಿಸಲಿವೆ.
Published by: Latha CG
First published: December 1, 2020, 10:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories