ನಾವು ಎಷ್ಟೇ ಆಧುನಿಕ ಯುಗದಲ್ಲಿ ಬದುಕುತ್ತಿದ್ದರೂ ಮಹಿಳೆಯ ಸುರಕ್ಷತೆ (Women Security) ವಿಚಾರದಲ್ಲಿ ಮಾತ್ರ ಭಯ ಎಂಬುದು ಹೋಗಿಲ್ಲ. ಅದರಲ್ಲೂ ಒಂಟಿ ಮಹಿಳೆಯರು ಸಮಾಜವನ್ನು ಎದುರಿಸಿ ಬದುಕುವುದು ಸಮಾನ್ಯವಲ್ಲ. ಗಂಡು ದಿಕ್ಕಿಲ್ಲ ಎಂದು ತಿಳಿದಾಕ್ಷಣ ಆಕೆಯ ಮೇಲೆ ದೌರ್ಜನ್ಯ(Harassment) ಎಸಗುವ ಜನರು ಹೆಚ್ಚಾಗುತ್ತಾರೆ. ಇದೇ ಕಾರಣಕ್ಕೆ ಇಲ್ಲೊಬ್ಬ ಮಹಿಳೆ ಕಳೆದ ಮೂವತ್ತು ವರ್ಷದಿಂದ ಗಂಡಿನ ವೇಷದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತನ್ನ ಮಗಳ ಬೆಳೆಸಲು ಈ ವೇಷ ನನಗೆ ಅನಿವಾರ್ಯ, ಅವಶ್ಯ ಆಯಿತು. ಈ ಹಿನ್ನಲೆ ಈ ನಿರ್ಧಾರ ಮಾಡಿರುವುದಾಗಿ ಆಕೆ ತಿಳಿಸಿದ್ದಾರೆ.
ಏನಿದು ಘಟನೆ
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮಗಳನ್ನು ಒಂಟಿಯಾಗಿ ಬೆಳೆಸಲು 30 ವರ್ಷಗಳಿಂದ ಗಂಡಿನ ವೇಷ ತೊಟ್ಟಿದ್ದಾರೆ. ಇದುವರೆಗೂ ಈಕೆ ಹೆಣ್ಣು ಎಂಬ ಅನುಮಾನ ಯಾರಿಗೂ ಬಂದಿಲ್ಲ.
ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೆಚ್ಚಿಯಮ್ಮಳ್ ಅವರು ಮದುವೆಯಾದ 15 ದಿನಕ್ಕೆ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡರು. ತಮ್ಮ 15 ದಿನದ ಸಂಸಾರದ ಪ್ರತಿಫಲವಾಗಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದಾದ ಬಳಿಕ ಜೀವನದಲ್ಲಿ ತನಗಿರುವ ಒಬ್ಬಳೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲು ಪೆಚ್ಚಿಯಮ್ಮಳ್ ನಿರ್ಧರಿಸಿದರು. ಮರು ಮದುವೆ ಆಗದೇ, ಪುಟ್ಟ ಮಗುವನ್ನು ಕಂಕುಳಲ್ಲಿ ಹೊತ್ತು ಜೀವನ ಸಾಗಿಸಲು ಮುಂದಾದರು. ಆದರೆ, ಈ ವೇಳೆ ಕೆಲಸಕ್ಕೆ ಹೋದ ಪೆಚ್ಚಿಯಮ್ಮಳ್ ಕಿರುಕುಳವನ್ನು ಎದುರಿಸಿದರು
ಸುರಕ್ಷತೆ ಹಿನ್ನಲೆ ಗಂಡಿನ ವೇಷ
ಎಲ್ಲೇ ಹೋದರು ಕಿರುಕುಳ ಅನುಭವಿಸುತ್ತಿದ್ದ ಹಿನ್ನಲೆ ಆಕೆ ಗಂಡಾಗಿ ವೇಷ ತೊಡುವ ನಿರ್ಧಾರ ಮಾಡಿದರು. ಮಗಳು ಮತ್ತು ತನ್ನ ದೃಷ್ಟಿಯಿಂದ ಇದು ಸುರಕ್ಷಿತ ಎಂದು ನಿರ್ಧರಿಸಿ, ಕೂದಲಿಗೆ ಕತ್ತರಿ ಹಾಕಿದರು. ಸೀರೆ ಬಿಟ್ಟು ಸಾಮಾನ್ಯ ಗಂಡಸರಂತೆ ಲುಂಗಿ ಮತ್ತು ಶರ್ಟ್ ಧರಿಸಿದರು. ಜೊತೆಗೆ ಮುತ್ತು ಎಂದು ಹೆಸರನ್ನು ಕೂಡ ಬದಲಾಯಿಸಿಕೊಂಡರು.
ಮಾಡದ ಕೆಲಸಗಳಿಲ್ಲ
ಗಂಡಿನ ವೇಷದಲ್ಲಿ ಆಕೆ ಚೆನ್ನೈ ಮತ್ತು ತೂತುಕುಡಿಯ ಹೋಟೆಲ್ಗಳು, ಟೀ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲೆಲ್ಲ ಅಣ್ಣಾಚಿ ಎಂದು ಆಕೆಯನ್ನು ಕರೆಯಲಾಗುತ್ತಿತ್ತು. ಪರೋಟ ಮತ್ತು ಟೀ ಶಾಪ್ ನಲ್ಲಿ ಕಾರ್ಯ ನಿರ್ವಹಿಸುವಾಗ ಮುತ್ತು ಹೋಗಿ ಮುತ್ತು ಮಾಸ್ಟರ್ ಆಗಿ ಬದಲಾದರು.
ಇದನ್ನು ಓದಿ: ಕೈಗೆ ಶಾಕ್; ಕಾಂಗ್ರೆಸ್ ತೊರೆದ ಪಂಜಾಬ್ ಮಾಜಿ ಅಧ್ಯಕ್ಷ ಸುನೀಲ್ ಜಾಖರ್
ಆಧಾರ್, ವೋಟರ್ನಲ್ಲೂ ಮುತ್ತು ಆದ ಪೆಚ್ಚಿಯಮ್ಮಾಳ್
ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ 100 ದಿನದ ಕೆಲಸದವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಇವರು ಮಾಡಿದರು. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ನೀಡಲು ನಾನು ಪ್ರತಿ ಪೈಸೆಯನ್ನೂ ಉಳಿಸಿದೆ. ದಿನ ಕಳೆಯುತ್ತಿದ್ದಂತೆ ನಾನು ಮುತ್ತು ಆಗಿ ಎಲ್ಲರು ಗುರುತಿಸಲಾರಂಭಿಸಿದರು. ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಮುತ್ತು ಆಗಿಯೇ ನಮೂದಿಸಲ್ಪಟ್ಟಿದೆ.
ಇದನ್ನು ಓದಿ: ದೇಶದಲ್ಲಿ ಗೋಧಿ ಬೆಲೆ ಹೆಚ್ಚಳ ತಪ್ಪಿಸೋಕೆ ಮಾಸ್ಟರ್ ಪ್ಲಾನ್! ವಿದೇಶಗಳಿಗೆ ರಫ್ತು ಬಂದ್
ಮಗಳ ಸುರಕ್ಷತೆ ಹಿನ್ನಲೆ ಈ ಕಠಿಣ ನಿರ್ಧಾರ
ಇನ್ನು ಈ ಸಂಬಂಧ ಮಾತನಾಡಿರು ಮುತ್ತು ಆಗಿರುವ ಪೆಚ್ಚಿಯಮ್ಮಳ್, ಗಂಡಿನ ವೇಷ ತೊಟ್ಟ ಆರಂಭದಲ್ಲಿ ಇದು ನನಗೆ ಕಠಿಣವಾಗಿತ್ತು. ನನ್ನ ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸವಾಲು ಎದುರಿಸಲು ನಿರ್ಧರಿಸಿದೆ. ನನ್ನ ಜೀವನೋಪಾಯಕ್ಕಾಗಿ ನಾನು ಪ್ರಯಾಣಿಸುತ್ತಿದ್ದೆ ಈ ಸಮಯದಲ್ಲಿ ಪುರುಷನ ವೇಷವು ನನ್ನನ್ನು ಸುರಕ್ಷಿತವಾಗಿ ಕಾಪಾಡುತ್ತಿತ್ತು. ಪುರಷರ ಶೌಚಾಲುವನ್ನೇ ನಾನು ಬಳಸುತ್ತಿದ್ದೆ. ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸರ್ಕಾರ ಘೋಷಿಸಿದ್ದರೂ ನಾನು ದುಡ್ಡು ಕೊಟ್ಟು ಪುರಷರ ಸೀಟಿನಲ್ಲಿಯೇ ಕೂರುತ್ತಿದ್ದೆ.
ಉಳಿದ ಜೀವನವೂ ಗಂಡಾಗಿಯೇ ಕಳೆಯುತ್ತೇನೆ
ಸದ್ಯ ಮಗಳ ಮದುವೆ ಮಾಡಿ ಇಳಿ ಸಂಜೆಯಲ್ಲಿರುವ ಪೆಚ್ಚಿಯಮ್ಮಾಳ್, ನನ್ನ ಎಲ್ಲಾ ಆಸೆಗಳು ಇದೀಗ ಪೂರೈಸಿವೆ. ಸರ್ಕಾರದಿಂದ ಪಿಂಚಣಿ ಸಿಕ್ಕರೆ ನನ್ನ ಉಳಿದ ಜೀವನವನ್ನು ಗಂಡಾಗಿಯೇ ಕಳೆಯುತ್ತೇನೆ. ನಾನು ಅನೇಕ ಯೋಜನೆಗಳಿಗೆ ಅನರ್ಹಳಾಗಿದ್ದೇನೆ ಎಂದ ಅವರು ಹೇಳಿದರು.
ಇನ್ನು ತಾಯಿ ಕುರಿತು ಮಾತನಾಡಿರುವ ಮಗಳು ಷಣ್ಮುಗಸುಂದರಿ, ಅವಳು ತನ್ನ ಜೀವನವನ್ನು ನನಗೆ ಮುಡಿಪಾಗಿಟ್ಟಳು. ಅವಳು ಸರ್ಕಾರದ ಭತ್ಯೆಯನ್ನು ಪಡೆಯುತ್ತಾಳೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ