ನವ ದೆಹಲಿ (ಮೇ 19); ಲಾಕ್ಡೌನ್ ಹಂತ ಹಂತವಾಗಿ ತೆರವಾಗಿರುವ ಹಿನ್ನೆಲೆಯಲ್ಲಿ ಜೂನ್ 1 ರಿಂದ ದೇಶದಾದ್ಯಂತ ಸುಮಾರು 200 ಎಸಿ ಅಲ್ಲದ ದ್ವಿತೀಯ ದರ್ಜೆಯ ರೈಲುಗಳ ಸಂಚಾರ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಕೊರೋನಾದಿಂದಾಗಿ ರಾಷ್ಟ್ರದಾದ್ಯಂತ ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ಘೋಷಿಸಲಾಗಿತ್ತು. ಹೀಗಾಗಿ ರೈಲು ಸಂಚಾರವನ್ನೂ ಸ್ಥಗಿತ ಮಾಡಲಾಗಿತ್ತು. ಆದರೆ, ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಶ್ರಮಿಕ್ ರೈಲುಗಳನ್ನು ಆರಂಭಿಸಿತ್ತು. ಅಲ್ಲದೆ, 15 ಜೋಡಿ ವಿಶೇಷ ರೈಲಿನ ಸೇವೆಯನ್ನೂ ಆರಂಭಿಸಿತ್ತು. ಆದರೆ, ರೈಲ್ವೆ ಇಲಾಖೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡುವುದು ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿತ್ತು.
ಈ ಪ್ರಶ್ನೆಗೆ ಇಂದು ಟ್ವೀಟ್ ಮೂಲಕ ಉತ್ತರ ನೀಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್, "ಜೂನ್ 01 ರಿಂದ ಎಸಿ ಅಲ್ಲದ ದ್ವಿತೀಯ ದರ್ಜೆಯ 200 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಎಲ್ಲಾ ರೈಲುಗಳ ಟಿಕೆಟ್ ಆನ್ಲೈನ್ನಲ್ಲಿ ಲಭ್ಯವಿರುತ್ತದೆ" ಎಂದು ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಕಾರ್ಮಿಕ ರೈಲುಗಳ ಕಾರ್ಯಾಚರಣೆಯನ್ನು ಮುಂದುವರೆಸಿದೆ ಇಲ್ಲಿಯವರೆಗೆ ಒಟ್ಟು 1600 ರೈಲುಗಳ ಮೂಲಕ ಸುಮಾರು 21.5 ಲಕ್ಷ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಿದೆ.
ಇದನ್ನೂ ಓದಿ : ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರಲಿದೆಯೇ ಅಮೆರಿಕ; WHO ಗೆ ಪತ್ರ ಬರೆದು ಬೆದರಿಸಿರುವ ಟ್ರಂಪ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ