Jio Platforms: ಫೇಸ್​ಬುಕ್​ನಿಂದ ಇಂಟೆಲ್​ವರೆಗೆ; ಜಿಯೋ ಮೇಲಿನ 12 ಹೂಡಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಸಿಲ್ವರ ಲೇಕ್​ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬದಲ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್ಟನ್​, ಪಿಐಎಫ್​ ಮತ್ತು ಇಂಟೆಲ್​ ಹೂಡಿಕೆ ಮಾಡಿದೆ.

ಜಿಯೋ

ಜಿಯೋ

  • Share this:
    ಮುಂಬೈ (ಜು.3): ರಿಲಾಯನ್ಸ್​ ಇಂಡಸ್ಟ್ರೀಸ್​ ಅಡಿಯಲ್ಲಿ ಬರುವ ಜಿಯೋ ಮೇಲೆ ಕೇವಲ 11 ವಾರಗಳಲ್ಲಿ 12ನೇ ಹೂಡಿಕೆ ಆಗಿದೆ. ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿ ಇಂಟೆಲ್​ ಜಿಯೋದ 0.39 ಪಾಲನ್ನು 1894 ಕೋಟಿ ರೂಪಾಯಿಗೆ ಖರೀದಿಸಿದೆ.  

    ಇಂಟೆಲ್​ನ ಇಂದಿನ ಹೂಡಿಕೆ ಸೇರಿದರೆ ಜಿಯೋ ಈವರೆಗೆ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು. ಇದಾದ ನಂತರ ಸಿಲ್ವರ ಲೇಕ್​ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬದಲ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್ಟನ್​, ಪಿಐಎಫ್​ ಮತ್ತು ಇಂಟೆಲ್​ ಹೂಡಿಕೆ ಮಾಡಿದೆ.

    12 ಹೂಡಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ:

    • ಫೇಸ್​ಬುಕ್​- ಷೇರು ಶೇ.9.99- ಮೌಲ್ಯ43,574 ಕೋಟಿ ರೂಪಾಯಿ

    • ಸಿಲ್ವರ್​ ಲೇಕ್​- ಷೇರು ಶೇ.1.15- ಮೌಲ್ಯ 5,656 ಕೋಟಿ ರೂಪಾಯಿ

    • ವಿಸ್ತಾ- ಷೇರು ಶೇ.2.32-ಮೌಲ್ಯ 11,367 ಕೋಟಿ ರೂಪಾಯಿ

    • ಜನರಲ್​ ಅಟ್ಲಾಂಟಿಕ್​- ಷೇರು ಶೇ.1.34- ಮೌಲ್ಯ 6,588 ಕೋಟಿ ರೂಪಾಯಿ

    • ಕೆಕೆಆರ್​- ಷೇರು ಶೇ.2.32-ಮೌಲ್ಯ11,367 ಕೋಟಿ ರೂಪಾಯಿ

    • ಮುಬದಲ- ಷೇರು ಶೇ.1.85- ಮೌಲ್ಯ 9.93 ಕೋಟಿ ರೂಪಾಯಿ

    • ಸಿಲ್ವರ್​ ಲೇಕ್​-ಷೇರು ಶೇ.0.93-ಮೌಲ್ಯ4,547 ಕೋಟಿ ರೂಪಾಯಿ

    • ಎಡಿಐಎ- ಷೇರು ಶೇ.1.16-ಮೌಲ್ಯ5,683.5 ಕೋಟಿ ರೂಪಾಯಿ

    • ಟಿಪಿಜಿ: ಷೇರು ಶೇ.0.93-ಮೌಲ್ಯ4,546.8 ಕೋಟಿ ರೂಪಾಯಿ

    • ಎಲ್​ ಕ್ಯಾಟರ್ಟನ್​- ಷೇರು ಶೇ.0.39-ಮೌಲ್ಯ 1,894.5 ಕೋಟಿ ರೂಪಾಯಿ

    • ಪಿಐಎಫ್​- ಷೇರು ಶೇ. 2.32 –ಮೌಲ್ಯ 11,367 ಕೋಟಿ ರೂಪಾಯಿ

    • ಇಂಟೆಲ್​- ಷೇರು ಶೇ. 0.39 –ಮೌಲ್ಯ 1,894.5 ಕೋಟಿ ರೂಪಾಯಿ


    First published: