Navjot Singh Sidhu: ಕ್ರಿಕೆಟ್​ನಿಂದ ರಾಜಕೀಯದವರೆಗೆ, ಸಿಕ್ಸರ್​ ಸಿದ್ದು ಯೂಟರ್ನ್​ ಹೊಡೆಯುವುದರಲ್ಲಿ ಮಾಸ್ಟರ್​

Navjot Singh Sidhu Controversy in cricket and politics: ರಾಜಕೀಯ ತಜ್ಞರ ಪ್ರಕಾರ, ಸಿಧು ಕ್ರಿಕೆಟ್​ ಆಡುತ್ತಿದ್ದ ದಿನಗಳಿಂದಲೂ ಹೀಗೆ. ಯಾವಾಗ ಹೇಗೆ ದಾಳ ಹೂಡುತ್ತಾರೆ ಎಂಬುದನ್ನೇ ಅರಿಯಲು ಸಾಧ್ಯವಿಲ್ಲ. ಅವರ ಆಟದಿಂದ ಎಷ್ಟೋ ಬಾರಿ ಅವರ ಬೆಂಬಲಿಗರಿಗೂ ಸಮಸ್ಯೆಯಾಗಿದೆ. ಆದರೆ ಅವರ ನಡೆಯನ್ನು ಅರಿಯುವುದು ಅಸಾಧ್ಯ ಎನ್ನಲಾಗಿದೆ

ನವಜೋತ್​ ಸಿಧು ಸಾಂದರ್ಭಿಕ ಚಿತ್ರ

ನವಜೋತ್​ ಸಿಧು ಸಾಂದರ್ಭಿಕ ಚಿತ್ರ

  • Share this:
    ಬುದ್ಧಿವಂತ ವ್ಯಕ್ತಿಗಳನ್ನು ಗೌರವಿಸಲ್ಪಡುತ್ತಾರೆ, ದುಡ್ಡಿರುವ ವ್ಯಕ್ತಿಗಳ ಅಂತಸ್ತಿಗೆ ಬೇರೆಯವರು ಆಸೆ ಪಡುತ್ತಾರೆ, ಅಧಿಕಾರ ಇರುವವರಿಂದ ಭಯವಾಗುತ್ತದೆ, ಆದರೆ ಉತ್ತಮ ಗುಣ ಉಳ್ಳವರನ್ನು ಜನ ನಂಬುತ್ತಾರೆ. #Rahul Dravid - ಹೀಗೆಂದು 2013ರಲ್ಲಿ ನವಜೋತ್​ ಸಿಂಗ್​ ಸಿಧು (Navjot Singh Sidhu) ಟ್ವೀಟ್​ ಮಾಡಿದ್ದರು. ಹಲವು ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಸಿಧು ಈ ಸಾಲನ್ನು ಉಲ್ಲೇಖಿಸಿದ್ದಿದೆ. ಕೆಲವರ ಪ್ರಕಾರ ಈ ಸಾಲು ಸಿಧು ಅವರದ್ದಲ್ಲ, ಅವರು ಈ ಸಾಲನ್ನು ಆಸ್ಟ್ರೇಲಿಯಾ ಮೂಲದ ಆಲ್ಫ್ರೆಡ್​ ಅಡ್ಲೆರ್​ ಎಂಬ ಮನೋವಿಜ್ಞಾನಿ ಅವರಿಂದ ಎರವಲು ಪಡೆದಿದ್ದು ಎನ್ನುತ್ತಾರೆ. ಆಲ್ಫ್ರೆಡ್​ 20ನೇ ಶತಮಾನದ ಖ್ಯಾತ ಮನೋವಿಜ್ಞಾನಿಗಳಲ್ಲಿ ಒಬ್ಬರು ಮತ್ತು ವೈಯಕ್ತಿಕ ಮನೋಶಾಸ್ತ್ರದ ಕುರಿತಾದ ಅಧ್ಯಯನಕ್ಕೆ ವಿದ್ಯಾಸಂಸ್ಥೆಯೊಂದನ್ನು ಕೂಡ ಕೊಟ್ಟಿದ್ದಾರೆ.

    ಆದರೆ ಅಧಿಕರು, ಇದು ಯಾರು ನೀಡಿದ ಹೇಳಿಕೆ ಎಂಬ ಬಗ್ಗೆ ತಲೆಯನ್ನೂ ಕೆಡಿಸಿಕೊಳ್ಳುವುದಿಲ್ಲ. ಸಿಧು ಹೇಳಿದ್ದಾರೆ ಅಂದರೆ ಅದು ಅವರದ್ದೇ ಎಂದು ನಂಬುವಷ್ಟು ಅವರ ಬೆಂಬಲಿಗರು ಅವರನ್ನು ಪ್ರೀತಿಸುತ್ತಾರೆ. ನವಜೋತ್​ ಸಿಂಗ್​ ಸಿಧು, ಕ್ರಿಕೆಟ್​ ಆಡುತ್ತಿದ್ದ ದಿನಗಳಲ್ಲಿ ಸ್ವಿಚ್​ ಹಿಟ್​, ರಿವರ್ಸ್​ ಸ್ವೀಪ್​ಗೆ ಹೆಸರುವಾಸಿಯಾಗಿದ್ದರು. ಅದೇ ರೀತಿ ರಾಜಕೀಯದಲ್ಲೂ ಆಗಾಗ ರಿವರ್ಸ್​ ಹಿಟ್​ ಹೊಡೆಯುತ್ತಲೇ ಇರುತ್ತಾರೆ. ಆದರೆ ಬಿಜೆಪಿ, ಆಮ್​ ಆದ್ಮಿ ಪಕ್ಷ ಸೇರಿದಂತೆ ಕಾಂಗ್ರೆಸ್​ ಪಕ್ಷ ಕೂಡ ರಾಜಕೀಯದ ಮ್ಯಾಚ್​ನಲ್ಲಿ ಸಿಧು ಯಾವ ಬಾಲ್​ಗೆ ಯಾವ ರೀತಿ ಆಡುತ್ತಾರೆ ಎಂದು ಅರಿಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಸಿಧು, ಕೇವಲ ಕೆಲವೇ ಶಬ್ಧಗಳನ್ನು ಆಡುತ್ತಾರೆ, ಆದರೆ ಅದರಲ್ಲಿ ಅಗಾಧ ಅರ್ಥವಿರುತ್ತದೆ ಎನ್ನುತ್ತಾರೆ ರಾಜಕೀಯ ನಿಪುಣರು. ರಾಜಕೀಯ ತಜ್ಞರ ಪ್ರಕಾರ, ಸಿಧು ಕ್ರಿಕೆಟ್​ ಆಡುತ್ತಿದ್ದ ದಿನಗಳಿಂದಲೂ ಹೀಗೆ. ಯಾವಾಗ ಹೇಗೆ ದಾಳ ಹೂಡುತ್ತಾರೆ ಎಂಬುದನ್ನೇ ಅರಿಯಲು ಸಾಧ್ಯವಿಲ್ಲ. ಅವರ ಆಟದಿಂದ ಎಷ್ಟೋ ಬಾರಿ ಅವರ ಬೆಂಬಲಿಗರಿಗೂ ಸಮಸ್ಯೆಯಾಗಿದೆ. ಆದರೆ ಅವರ ನಡೆಯನ್ನು ಅರಿಯುವುದು ಅಸಾಧ್ಯ ಎನ್ನಲಾಗಿದೆ.

    ಸಿಕ್ಸರ್​ ಕಿಂಗ್​, ಯೂಟರ್ನ್​ನಲ್ಲೂ ಸಿಂಗ್​:
    ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ನಂತರ ಸಿಧು ಕಮೆಂಟೇಟರ್​ ಆಗಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದರು. 2004ರಲ್ಲಿ ಪ್ರಸಿದ್ಧ ಕಮೆಂಟೇಟರ್​ ಎಂದು ಹೆಸರು ಮಾಡಿದ್ದ ಸಿಧು, ಕಮೆಂಟ್ರಿ ದಿನಗಳನ್ನು ಹಿರಿಯ ಪತ್ರಕರ್ತರೊಬ್ಬರು ಸ್ಮರಿಸುತ್ತಾರೆ. ನಮ್ಮ ವಾಹಿನಿಗೆ ಅವರು ಸಭೆಗೆ ಬಂದಾಗ ನಾನು, ನಮ್ಮ ಸ್ಪೋರ್ಟ್ಸ್​ ಸಂಪಾದಕರು ಮತ್ತು ಚಾನಲ್​ನ ಮುಖ್ಯಸ್ಥರಿದ್ದರು. ಅವರ ಮಾತಿನ ವೈಖರಿ, ಕಮೆಂಟ್ರಿ ಮೂಲಕ ಕ್ರಿಕೆಟ್​ ಇನ್ನಷ್ಟು ಮೆರುಗು ನೀಡುವ ಚಾತುರ್ಯದ ಬಗ್ಗೆ ಎಲ್ಲರೂ ತಿಳಿದಿದ್ದೆವು. ನಮ್ಮ ಜೊತೆ ಪೈಪೋಟಿಯಲ್ಲಿದ್ದ ವಾಹಿನಿಯಿಂದ ಅವರನ್ನು ಕರೆದುಕೊಂಡು ಬರುವುದು ಕಷ್ಟ ಎಂದುಕೊಂಡಿದ್ದೆವು. ಆದರೆ ಅವರ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ ಬಳಿಕ ಅವರು ಒಪ್ಪಿಕೊಂಡರು. ಅವರು ನನ್ನನ್ನು ಮಗ ಎಂದು ಕರೆಯುತ್ತಿದ್ದರು. ನಾನೇನು ಅವರ ಮಗನ ವಯಸ್ಸಿನವನಲ್ಲ, ಆದರೂ ಅವರು ಹಾಗೆ ಕರೆಯುತ್ತಿದ್ದರು. ಇದಾದ ನಂತರ, ಸಿಧು ನಮ್ಮ ವಾಹಿನಿಗೆ ಬರುತ್ತಾರೆ ಎಂದುಕೊಂಡು ನಾವು ಖುಷಿ ಪಟ್ಟರೆ, ಅವರು ನಮ್ಮ ಸಂಸ್ಥೆ ಮತ್ತು ಅವರ ನಡುವೆ ನಡೆದಿದ್ದ ಖಾಸಗಿ ಒಪ್ಪಂದದ ದಾಖಲೆಗಳನ್ನು ಪೈಪೋಟಿ ವಾಹಿನಿಗೆ ನೀಡಿ, ನಾವು ಕೊಟ್ಟ ಆಫರ್​ ನೀಡಿದರೆ ಅಲ್ಲೇ ಮುಂದುವರೆಯುವುದಾಗಿ ಹೇಳಿದ್ದರು. ನಂತರ ತಮಗೇನು ಬೇಕು ಎಂಬುದನ್ನು ಅದೇ ವಾಹಿನಿಯಲ್ಲಿ ದಕ್ಕಿಸಿಕೊಂಡು, ಒಪ್ಪಂದ ಮುರಿದರು. ಇದರಿಂದ ಎರಡೂ ವಾಹಿನಿಗಳಲ್ಲಿ ಅವರ ವರ್ಚಸ್ಸು ಕುಂದಿತ್ತು ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಹಿರಿಯ ಕ್ರೀಡಾ ಪತ್ರಕರ್ತ.

    ಇದನ್ನೂ ಓದಿ: ಪಂಜಾಬ್ ಬಿಕ್ಕಟ್ಟು; ನವಜೋತ್ ಸಿಂಗ್ ಸಿಧು ಮನವರಿಕೆಗೆ ಮುಂದಾಗದ ಸಿಎಂ ಚರಣಜೀತ್ ಸಿಂಗ್ ಚನ್ನಿ!

    ಕಮೆಂಟರಿ ಬಾಕ್ಸ್​ನಿಂದ ರನ್​ಔಟ್​:
    ಕ್ರಿಕೆಟ್​ ಕಮೆಂಟರಿಗೆ ಬೇರೆಯದೇ ಮೆರುಗನ್ನು ಸಿಧು ತಂದುಕೊಟ್ಟಿದ್ದರು. ದೊಡ್ಡ ದೊಡ್ಡ ಬ್ರಾಡ್​ಕಾಸ್ಟಿಂಗ್​ ಸಂಸ್ಥೆಗಳಿಗೆ ಕ್ರಿಕೆಟ್​ ಪಂದ್ಯಾವಳಿ ಆರಂಭವಾಯಿತೆಂದರೆ ಸಿಧು ಬೇಕೇಬೇಕು ಎನ್ನುವಷ್ಟು ಅಗತ್ಯತೆ ಸೃಷ್ಟಿಯಾಗಿತ್ತು. ಸಿಧು ಒಂದರ್ಥದಲ್ಲಿ ಟಿಆರ್​ಪಿ ಸೆಳೆಯುವ ಮ್ಯಾಗ್ನೆಟ್​ ಆಗಿದ್ದರು. ಹಿಂದಿ ಮತ್ತು ಇಂಗ್ಲಿಷ್​ ಎರಡೂ ಭಾಷೆಯಲ್ಲಿ ಕಮೆಂಟರಿ ಮಾಡುತ್ತಿದ್ದರು ಮತ್ತು ತಮ್ಮದೇ ಆದ ವಿಶೇಷ ಶೈಲಿ ಹೊಂದಿದ್ದರು. ಆ ಹೊತ್ತಿಗಾಗಲೇ ಸುನೀಲ್​ ಗವಾಸ್ಕರ್​ ಮತ್ತು ರವಿ ಶಾಸ್ತ್ರಿ ಕೂಡ ಕಮೆಂಟೇಟರ್​ಗಳಾಗಿ ಉತ್ತಮ ಹೆಸರು ಗಳಿಸಿದ್ದರು. ಎಲ್ಲವೂ ಸರಿಯಾಗಿ ಹೋಗುತ್ತಿದೆ ಎನ್ನುವಾಗಲೇ ಸಿಧು, 2003ರ ವಲ್ಡ್​ಕಪ್​ನಲ್ಲಿ ಸ್ವಲ್ಪ ಅಚಾತುರ್ಯ ಮಾಡಿದರು. ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಪಂದ್ಯದಲ್ಲೇ ಮುಗ್ಗರಿಸಿತ್ತು. ಈ ಪಂದ್ಯದಲ್ಲಿ ಸಹ ಕಮೆಂಟೇಟರ್​ ಆಗಿದ್ದ ಅಲನ್​ ವಿಲ್ಕಿನ್ಸ್​ ಜೊತೆ ಸಿಧು ಲೈವ್​ನಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಇದರಿಂದ ವಿಲ್ಕಿನ್ಸ್​ ಅವಮಾನ ಅನುಭವಿಸುವಂತಾಯಿತು. ಇದಾದ ನಂತರ ಸಿಧು ಕಮೆಂಟರಿ ಜಗತ್ತಿನಿಂದ ದೂರ ಉಳಿದರು. ಆದರೂ, ಟಿವಿಯಲ್ಲಿ ಮಾತ್ರ ಅವರಿಗೆ ಸ್ಥಾನ ಯಾವಾಗಲೂ ಇತ್ತು.

    ಇದನ್ನೂ ಓದಿ: ಭಾರತ ಟಿ20 ತಂಡಕ್ಕೆ ಕ್ಯಾಪ್ಟನ್, ಇಬ್ಬರು ವೈಸ್ ಕ್ಯಾಪ್ಟನ್ಸ್ ಹೆಸರು ಮುಂದಿಟ್ಟ ಗವಾಸ್ಕರ್

    ತಂಡಕ್ಕೆಂದೂ ನಂಬಿಕಸ್ಥನಲ್ಲ:
    ನವಜೋತ್​ ಸಿಂಗ್​ ಸಿಧು ಆರಂಭಿಕ ದಾಂಡಿಗನಾಗಿ ಉತ್ತಮ ಪ್ರದರ್ಶನ ನೀಡಿದ್ದರೂ, ತಂಡಕ್ಕೆ ಅತ್ಯಗತ್ಯ ಸ್ಥಿತಿ ಎಂದಾಗ ಕೈ ಹಿಡಿಯುವುದಿಲ್ಲ ಎಂಬ ಆರೋಪವಿದೆ. ಸಿಧು ಸಮಕಾಲೀನ ಹಲವು ಆಟಗಾರರು ಇದನ್ನು ಪದೇ ಪದೇ ಹೇಳಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ, 1996ರಲ್ಲಿ ಇಂಗ್ಲೆಂಡ್​ ಪ್ರವಾಸದಿಂದ (India tour of England 1996) ನಾಯಕ ಅಜರುದ್ದೀನ್​ (Former Indian Captain Mohammed Azaruddin) ಜೊತೆ ವೈಮನಸ್ಸಿನಿಂದ ಪಂದ್ಯಾವಳಿಯ ಅರ್ಧದಲ್ಲೇ ವಾಪಸಾಗಿದ್ದು. ಇದೇ ರೀತಿ ಹಲವು ಸಂದರ್ಭಗಳಲ್ಲಿ ತಂಡಕ್ಕೆ ಸಿಧು ಅಗತ್ಯವಿದ್ದಾಗ, ಸಿಧು ಕೈಕೊಟ್ಟ ನಿದರ್ಶನಗಳಿವೆ. ಅದೇ ರೀತಿ, ಈಗ ಕಾಂಗ್ರೆಸ್​ಗೂ ಶಾಕ್​ ಮೇಲೆ ಶಾಕ್​ ಕೊಡುವ ಮೂಲಕ ಸಿಧು ತಲೆನೋವಾಗಿದ್ದಾರೆ.
    Published by:Sharath Sharma Kalagaru
    First published: