ವಿಶ್ವ ಪ್ರಸಿದ್ಧ ಬಾಬಾ ವಂಗಾ (World Famous Baba Vanga) ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಬಾಬಾ ವಂಗಾ ಅವರು ಎರಡನೇ ಮಹಾಯುದ್ಧದಿಂದ 1996ರವರೆಗೆ, ಅಂದರೆ ಸಾಯುವವರೆಗೂ ಬಹಳ ಪ್ರಸಿದ್ಧರಾಗಿದ್ದರು. ಬಲ್ಗೇರಿಯನ್ ದೃಷ್ಟಿಹೀನ ಬಾಬಾ ವಂಗಾ ಒಟ್ಟಾರೆಯಾಗಿ ತಮ್ಮ ಭವಿಷ್ಯವಾಣಿಗಳಿಂದ ಹೆಸರುವಾಸಿಯಾಗಿದ್ದಾರೆ. ಬಾಬಾ ವಂಗಾ ತನ್ನ ಅನುಯಾಯಿಗಳ ಬಳಿ 5079 ರವರೆಗೆ ಏನೆಲ್ಲಾ ನಡೆಯಬಹುದು ಎಂಬ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. 9/11 ರಿಂದ ಡೊನಾಲ್ಡ್ ಟ್ರಂಪ್ ಪ್ರಧಾನಿಯಾಗುವವರೆಗೆ ಬಾಬಾ ವಂಗಾ ಸೇರಿದಂತೆ ಅವರು ನುಡಿದ ಅನೇಕ ಭವಿಷ್ಯ ನಿಜವಾಗಿದೆ ಎನ್ನಲಾಗುತ್ತದೆ.
ಬಾಬಾ ವಂಗಾ ಕೂಡ 2022ರ ಬಗ್ಗೆಯೂ ಕೆಲ ಭವಿಷ್ಯ ನುಡಿದಿದ್ದರು. ಹೀಗಿರುವಾಗ ಅವರು 2023ರ ಬಗ್ಗೆಯೂ ಕೆಲ ಭವಿಷ್ಯ ನುಡಿದಿದ್ದಾರೆ. ಆದರೆ ಅವುಗಳಲ್ಲಿ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುದು ಮುಂಬರುವ ವರ್ಷದಲ್ಲಿ ತಿಳಿಯಲಿದೆ. ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಗಳನ್ನು ಅಧಿಕೃತವಾಗಿ ದಾಖಲಿಸಲಿಲ್ಲ, ಆದ್ದರಿಂದ ಅವರು ನಿಜವಾಗಿ ಏನು ಹೇಳಿದ್ದಾರೆ? ಏನು ಹೇಳಿಲ್ಲ ಎಂಬುವುದು ಇನ್ನೂ ಚರ್ಚೆಯಲ್ಲಿದೆ. ಮುಂಬರುವ ವರ್ಷಕ್ಕೆ ಸಂಬಂಧಿಸಿರುವ ಅವರು ನುಡಿದಿದ್ದಾರೆಂಬ ಕೆಲ ಭವಿಷ್ಯ ಇಲ್ಲಿದೆ ನೋಡಿ.
ವಿನಾಶಕಾರಿ ಸೌರ ಚಂಡಮಾರುತ?
2023 ರ ಬಗ್ಗೆ ಬಾಬಾ ವಂಗಾ ನುಡಿದ ಅತ್ಯಂತ ಆತಂಕಕಾರಿ ಭವಿಷ್ಯವಾಣಿಯೆಂದರೆ ಸೌರ ಚಂಡಮಾರುತ ವಿನಾಶವನ್ನು ಉಂಟುಮಾಡಬಹುದೆಂಬುವುದು. ಸೌರ ಚಂಡಮಾರುತ ಎಂದರೆ ಸೂರ್ಯನಿಂದ ಹೊರಹೊಮ್ಮುವ ಶಕ್ತಿಯ ಸ್ಫೋಟಗಳು, ಇದರಿಂದಾಗಿ ಅನೇಕ ರೀತಿಯ ಅಪಾಯಕಾರಿ ವಿಕಿರಣಗಳು ಭೂಮಿಯ ಮೇಲೆ ಬೀಳುತ್ತವೆ. ಅವುಗಳ ಪರಿಣಾಮವು ಶತಕೋಟಿ ಅಣುಬಾಂಬ್ಗಳಂತೆ ಶಕ್ತಿಯುತವಾಗಿರುತ್ತದೆ.
ಅನ್ಯಗ್ರಹ ಜೀವಿಗಳ ಆಗಮನ
ಇದರ ಹೊರತಾಗಿ ಏಲಿಯನ್ ಗಳು ಭೂಮಿಗೆ ಬರಬಹುದು ಎಂಬುದು ಅತ್ಯಂತ ಭಯಾನಕ ಭವಿಷ್ಯ. ವಂಗಾ ಅನ್ವಯ, ಜಗತ್ತಿನಲ್ಲಿ ಕತ್ತಲೆ ಆವರಿಸುತ್ತದೆ, ಪರಿಣಾಮವಾಗಿ ಮುಂದಿನ ವರ್ಷ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಲಕ್ಷಾಂತರ ಜನರು ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Shocking Report: ಹೊಸ ಬ್ಯಾಕ್ಟೀರಿಯಾದಿಂದ ಕರುಗುತ್ತಿವೆಯಾ ಹಿಮರಾಶಿ? ವರದಿಯಲ್ಲಿ ಆತಂಕಕಾರಿ ಮಾಹಿತಿ
ಪ್ರಯೋಗಾಲಯದಲ್ಲಿ ಶಿಶುಗಳು ಜನಿಸುತ್ತವೆ
ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2023 ರಲ್ಲಿ ಪ್ರಯೋಗಾಲಯಗಳಲ್ಲಿ ಮಾನವ ಶಿಶುಗಳನ್ನು ಬೆಳೆಸಬಹುದು. ವಿಜ್ಞಾನದ ನಿರಂತರ ಪ್ರಗತಿಯಿಂದಾಗಿ, ಪ್ರಯೋಗಾಲಯದಲ್ಲಿ ಶಿಶುಗಳು ಹುಟ್ಟುವ ಪರಿಕಲ್ಪನೆಯು ಬಾಬಾ ವಂಗಾ ಅವರ ಭವಿಷ್ಯವಾಣಿಯಲ್ಲಿ ಸೇರಿದೆ.
ಭೂಮಿಯ ಕಕ್ಷೆಯಲ್ಲಿ ಬದಲಾವಣೆ?
2023 ರ ಬಾಬಾ ವಂಗಾ ಅವರ ಭವಿಷ್ಯವಾಣಿಯೆಂದರೆ ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿಯು 2023 ರಲ್ಲಿ ತನ್ನ ಮಾರ್ಗವನ್ನು ಬದಲಾಯಿಸಬಹುದು. ನಮ್ಮ ಗ್ರಹವು ಸೂರ್ಯನ ಸುತ್ತ ಸುತ್ತುತ್ತಿರುವಾಗ ಪ್ರತಿ ವರ್ಷ 584 ಮಿಲಿಯನ್ ಮೈಲುಗಳಷ್ಟು ದೂರವನ್ನು ಪ್ರಯಾಣಿಸುತ್ತದೆ. ಇದು ಸಂಪೂರ್ಣ ವೃತ್ತಾಕಾರದ ಬದಲಿಗೆ ಅಂಡಾಕಾರದ ಪ್ರಯಾಣವಾಗಿದೆ. ಇದರಿಂದಾಗಿ ಇತರ ಗ್ರಹಗಳ ಗುರುತ್ವಾಕರ್ಷಣೆಯ ಬಲದಿಂದ ಪ್ರಭಾವಿತವಾಗಿರುತ್ತದೆ. ಅಂದರೆ ಭೂಮಿಯ ಕಕ್ಷೆಯಲ್ಲಿ ಬದಲಾವಣೆ ಆಗಬಹುದು. ಇಂತಹ ಬದಲಾವಣೆಗಳು ಹಲವು ಸಾವಿರ ವರ್ಷಗಳಿಗೊಮ್ಮೆ ಸಂಭವಿಸುತ್ತವೆ. ಭೂಮಿಯ ಕಕ್ಷೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಅದರ ಪರಿಣಾಮಗಳು ಗಂಭೀರವಾಗಬಹುದು.
ಜೈವಿಕ ಶಸ್ತ್ರಾಸ್ತ್ರಗಳ ಪರೀಕ್ಷೆ
ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ 2023 ರಲ್ಲಿ, ದೊಡ್ಡ ರಾಷ್ಟ್ರ ಮಾನವರ ಮೇಲೆ ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಯನ್ನು ಮಾಡಬಹುದು. ಇದು ಸಾವಿರಾರು ಸಾವುಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಜಗತ್ಪ್ರಸಿದ್ಧ ಬಾಬಾ ವಂಗಾ ಯಾರು?
ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಗುಶ್ಟೆರೋವಾ. ಅವರು ಬಲ್ಗೇರಿಯಾ ನಿವಾಸಿ. 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅದರ ನಂತರ ಭವಿಷ್ಯವನ್ನು ನೋಡಲು ದೇವರು ತನಗೆ ದಿವ್ಯ ಶಕ್ತಿ ನೀಡಿದ್ದಾನೆ ಎಂದು ಹೇಳಿಕೊಳ್ಳತೊಡಗಿದ್ದರು. ಅವರು 1996 ರಲ್ಲಿ ನಿಧನರಾದರು. ಅವರು ಬರವಣಿಗೆಯಲ್ಲಿ ಯಾವುದೇ ಭವಿಷ್ಯ ಬರೆದಿರಲಿಲ್ಲ, ಆದರೆ ಸಾಯುವವರೆಗೆ ವಿಶ್ವಕ್ಕೆ ಸಂಬಂಧಿಸಿದಂತೆ ಒಟ್ಟು 5079 ಭವಿಷ್ಯವಾಣಿಗಳನ್ನು ನುಡಿದಿದ್ದರು ಎನ್ನಲಾಗಿದೆ. ಇದರಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾ ಸಾವು, ಅಮೆರಿಕದ ಮೇಲೆ 9/11 ದಾಳಿ, ಬರಾಕ್ ಒಬಾಮಾ ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಮುಂತಾದ ಹಲವು ಭವಿಷ್ಯವಾಣಿಗಳು ನಿಜವೆಂದು ಸಾಬೀತಾಯಿತು.
ಇದನ್ನೂ ಓದಿ: Ice Age: ಹಿಮಯುಗ ಎಂದರೇನು? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿವೆ
ಆದಾಗ್ಯೂ, ಬಾಬಾ ವಂಗಾ ಏನು ಹೇಳಿದರೂ ಅದು ನಿಜವಾಗುತ್ತದೆ ಎಂದಲ್ಲ, 2016 ರಲ್ಲಿ ಯುರೋಪ್ನಲ್ಲಿ ಒಂದು ದೊಡ್ಡ ಯುದ್ಧ ನಡೆಯಲಿದೆ, ಅದು ಇಡೀ ಖಂಡವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. 2010ರಿಂದ 2014ರ ವರೆಗೆ ಜಗತ್ತಿನಲ್ಲಿ ಭೀಕರ ಪರಮಾಣು ಯುದ್ಧ ನಡೆಯಲಿದ್ದು, ಇದರಿಂದ ಜಗತ್ತಿನ ಬಹುಭಾಗ ನಾಶವಾಗಲಿದೆ ಎಂಬ ಮುನ್ಸೂಚನೆಯನ್ನೂ ಅವರು ನೀಡಿದ್ದಾರೆ. ಆದರೆ ಅವರು ನುಡಿದ ಈ ಭವಿಷ್ಯವಾಣಿ ನಿಜವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ