ಇಲ್ಲಿ Hijab ಗಲಾಟೆ, ಅಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ! ಮಾದರಿಯಾಯ್ತು ಕೇರಳದ ಈ ಗ್ರಾಮ

ಕೇರಳದ ಪುಟ್ಟ ಗ್ರಾಮ ಈಗ ಸುದ್ದಿಯಲ್ಲಿದೆ. ಅದು ಕೋಮು ಸಾಮರಸ್ಯದ ಪಾಸಿಟಿವ್ ಕಾರಣಗಳಿಂದಾಗಿ ಸುದ್ದಿ ಮಾಡಿದೆ. ಹಾಗಿದ್ರೆ ಆ ಗ್ರಾಮದಲ್ಲಿ ಏನಾಯ್ತು? ಹಿಂದೂ-ಮುಸ್ಲಿಂ ಸಾಮರಸ್ಯ ಯಾಕೆ ಸುದ್ದಿಯಾಯ್ತು ಅನ್ನೋದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ…

ಉತ್ಸವ ನಡೆಯಬೇಕಿದ್ದ ಶ್ರೀ ಭಗವತಿ ದೇಗುಲ

ಉತ್ಸವ ನಡೆಯಬೇಕಿದ್ದ ಶ್ರೀ ಭಗವತಿ ದೇಗುಲ

  • Share this:
ಕೇರಳ: “ಹಿಂದೂ-ಮುಸ್ಲಿಂ ಭಾಯಿ ಭಾಯಿ” ಅಂತ ಇತಿಹಾಸದ (History) ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಹೇಳಿದ್ದರು. ಆದರೆ ಹಲವು ಘಟನೆಗಳನ್ನು (Incident) ನೋಡಿದರೆ ಇದಕ್ಕೆ ಅಪವಾದ ಎನ್ನವಂತಿದೆ. ಕರ್ನಾಟಕದಲ್ಲಂತೂ (Karnataka) ಹಿಜಾಬ್ (Hijab) ಗಲಾಟೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಪುಟ್ಟ ಮಕ್ಕಳ ನಡುವೆಯೇ ದ್ವೇಷ ಬೆಳೆಯುವ ಆತಂಕ ಎದುರಾಗಿದೆ. ಅತ್ತ ಕೇರಳದಲ್ಲಂತೂ (Kerala) ಸದಾಕಾಲ ಹಿಂದೂ (Hindu), ಮುಸ್ಲಿಂ (Muslim) ಗಲಾಟೆಗಳು (Clash) ನಡೆಯುತ್ತಲೇ ಇರುತ್ತವೆ. ಆದರೆ ಅಲ್ಲೂ ಕೆಲವೊಮ್ಮೆ ಕೋಮು ಸೌಹಾರ್ದದ ಘಟನೆಗಳು ನಡೆಯುತ್ತವೆ. ಹೌದು, ಇಲ್ಲಿ ಕೇರಳದ ಪುಟ್ಟ ಗ್ರಾಮ ಈಗ ಸುದ್ದಿಯಲ್ಲಿದೆ. ಅದು ಕೋಮು ಸಾಮರಸ್ಯದ ಪಾಸಿಟಿವ್ (Positive) ಕಾರಣಗಳಿಂದಾಗಿ ಸುದ್ದಿ ಮಾಡಿದೆ. ಹಾಗಿದ್ರೆ ಆ ಗ್ರಾಮದಲ್ಲಿ ಏನಾಯ್ತು? ಹಿಂದೂ-ಮುಸ್ಲಿಂ ಸಾಮರಸ್ಯ ಯಾಕೆ ಸುದ್ದಿಯಾಯ್ತು ಅನ್ನೋದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ…

 ಕೋಮ ಸಾಮರಸ್ಯ ತೋರಿದ ಆ ಪುಟ್ಟ ಗ್ರಾಮ ಯಾವುದು?

ಕೇರಳ ರಾಜ್ಯದ ತಿರೂರು ಜಿಲ್ಲೆಯ ತ್ರಿಪ್ರಂಗೋಡ್ ಬೀರಂಚಿರ ಎಂಬ ಗ್ರಾಮ ಈಗ ಗಮನ ಸೆಳೆದಿದ್ದೆ. ಕೋಮು ಸಾಮರಸ್ಯದಿಂದಾಗಿ ಸುದ್ದಿ ಮಾಡಿದೆ. ಅಕ್ಕ ಪಕ್ಕದ ಸುಮಾರು ಗ್ರಾಮಗಳಲ್ಲಿ ಬೇರೆ ಬೇರೆ ಜನಾಂಗ, ಧರ್ಮ, ಕೋಮು, ಸಮುದಾಯಗಳ ನಡುವೆ ಸಣ್ಣ-ಪುಟ್ಟ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಗ್ರಾಮದಲ್ಲಿ ಮಾತ್ರ ಹಿಂದೂ, ಮುಸ್ಲಿಂಮರು ಭಾಯಿ ಭಾಯಿ ಎನ್ನುವಂತೆ ಇದ್ದಾರೆ.

ಉತ್ಸವದ ದಿನವೇ ನಡೆಯಿತು ಸಾವು

ತ್ರಿಪ್ರಂಗೋಡ್ ಬೀರಂಚಿರ ಗ್ರಾಮದಲ್ಲಿ ಶ್ರೀ ಭಗವತಿಯ ದೇಗುಲವಿದೆ. ಪುಟ್ಟ ದೇಗುಲವಾದರೂ ಸಾಕಷ್ಟು ಜನ ಭಕ್ತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಪ್ರತಿವರ್ಷ ದೇವಿಯ ಉತ್ಸವ ನಡೆಯುತ್ತದೆ. ಗ್ರಾಮದ ಹಿಂದೂಗಳು ಈ ಉತ್ಸವ ಮಾಡಿದ್ರೆ, ಮುಸ್ಲಿಂಮರು ಸಹಕಾರ ನೀಡುತ್ತಾರೆ. ಆದರೆ ಈ ಬಾರಿ ಉತ್ಸವದ ದಿನವೇ ಗ್ರಾಮದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೂ ಭುಗಿಲೆದ್ದ Hijab Controversy.. ಶಾಲಾ-ಕಾಲೇಜಿಗೆ ರಜೆ ಘೋಷಣೆ..!

ಮುಸ್ಲಿಂ ವ್ಯಕ್ತಿ ತೀರಿಕೊಂಡಿದ್ದಕ್ಕೆ ನಿಂತಿತು ಭಗವತಿ ಉತ್ಸವ

ಉತ್ಸವ ಇನ್ನೇನು ನಡೆಯಬೇಕು ಎಂಬ ಸಮಯದಲ್ಲಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಚೆರೋಟ್ಟಿಲ್‌ ಹೈದರ್‌ ಎಂಬವರು ನಿಧನರಾದರು. ಸಾಮಾನ್ಯವಾಗಿ ಹಿಂದೂಗಳ ಸಂಪ್ರದಾಯದಲ್ಲಿ ಯಾರಾದರೂ ಸತ್ತರೆ ಶೋಕಾಚರಣೆ ಆಚರಿಸಿ, ಆ ದಿನ ಯಾವುದೇ ಸಂಭ್ರಮಾಚರಣೆ ನಡೆಸುವುದಿಲ್ಲ. ಹೀಗಾಗಿ ಈ ಗ್ರಾಮದಲ್ಲೂ ಹೈದರ್ ತೀರಿಕೊಂಡ ಹಿನ್ನೆಲೆ ಶೋಕಾಚರಣೆಗೆ ನಿರ್ಧರಿಸಲಾಯ್ತು.

ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾದ ಉತ್ಸವ

ಹೈದರ್ ಸತ್ತಿದ್ದರಿಂದ ಉತ್ಸವವನ್ನು ಬರೀ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಲಾಯ್ತು. ಅಂದರೆ ದೇವಿಯ ಪೂಜೆ, ಹೋಮ ಇತ್ಯಾದಿಗಳನ್ನು ನಡೆಸಲಾಯ್ತು. ಆದರೆ ಎಲ್ಲಾ ಬಗೆಯ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಯ್ತು. ಅಂದರೆ ಬ್ಯಾಂಡ್‌ ಮೇಳ, ಸಿಂಗಾರಿ ಮೇಳ,  ಮೆರವಣಿಗೆ, ಶೋಭಾಯಾತ್ರೆ ಇತ್ಯಾದಿ ಕಲಾ ಪ್ರಕಾರಗಳನ್ನು ರದ್ದುಗೊಳಿಸಲಾಯಿತು.

 ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಗ್ರಾಮದ ಮುಖಂಡರು

ಮತ್ತೊಂದೆಡೆ ಮೃತಪಟ್ಟಿದ್ದ ಹೈದರ್ ಅಂತ್ಯಕ್ರಿಯೆಯಲ್ಲಿ ಗ್ರಾಮದ ಎಲ್ಲಾ ಧರ್ಮ, ಜಾತಿಯ ಮುಖಂಡರು ಭಾಗಿಯಾಗಿ, ಸಂತಾಪ ಸೂಚಿಸಿದರು. ಅಲ್ಲಿ ದೇವಸ್ಥಾನದ ನಿರ್ಧಾರವನ್ನು ಮುಸ್ಲಿಂ ಮುಖಂಡರು ಶ್ಲಾಘಿಸಿದರು. ಬಳಿಕ ಗ್ರಾಮದ ಹಿರಿಯರೆಲ್ಲ ಹೈದರ್ ಅವರ ಮನೆಗೆ ತೆರಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: Temple bells: ದೇವಸ್ಥಾನಕ್ಕೆ ಘಂಟೆ, ಜಾಗಟೆ ಸದ್ದಿಗೆ ನೀಡಿದ್ದ ನೋಟಿಸ್ ವಾಪಸ್: ಗೃಹಸಚಿವ ಆರಗ ಜ್ಞಾನೇಂದ್ರ ಮಾಹಿತಿ

ಒಟ್ಟಾರೆ ಈ ಗ್ರಾಮದ ಈ ಒಂದು ಘಟನೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಚಿಕ್ಕ ಚಿಕ್ಕ ವಿಚಾರಕ್ಕೆ ನಾನು, ತಾನು ಅಂತ ಕಿತ್ತಾಡುತ್ತಿರುವ ಈ ದಿನಗಳಲ್ಲಿ ತ್ರಿಪ್ರಂಗೋಡ್ ಬೀರಂಚಿರ ಗ್ರಾಮದ ಜನ ನಿಜಕ್ಕೂ ಮಾದರಿಯಾಗಿದ್ದಾರೆ. ತಮ್ಮ ಸ್ನೇಹ ಸಾಮರಸ್ಯದ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಅಂತ ಸಾರುತ್ತಿದ್ದಾರೆ.
Published by:Annappa Achari
First published: