1 ಕೆ.ಜಿ ಪ್ಲಾಸ್ಟಿಕ್​ನಿಂದ 1 ಲೀಟರ್​ ಪೆಟ್ರೋಲ್​: ಫ್ರಾನ್ಸ್​​ ವಿಜ್ಞಾನಿಗಳಿಂದ ನೂತನ ಆವಿಷ್ಕಾರ

​ಫ್ರಾನ್ಸ್​​ ವಿಜ್ಞಾನಿಗಳು ತಯಾರಿಸಿದ ಈ ಮೆಷೀನ್​ 370 ಲಕ್ಷ ಬೆಲೆ ಬಾಳುತ್ತದೆ. ತಿಂಗಳಿಗೆ 10 ಟನ್​ ಪ್ಲಾಸ್ಟಿಕ್​ ತೈಲವನ್ನು ಮಾರ್ಪಾಡು ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

news18
Updated:August 21, 2019, 9:43 AM IST
1 ಕೆ.ಜಿ ಪ್ಲಾಸ್ಟಿಕ್​ನಿಂದ 1 ಲೀಟರ್​ ಪೆಟ್ರೋಲ್​: ಫ್ರಾನ್ಸ್​​ ವಿಜ್ಞಾನಿಗಳಿಂದ ನೂತನ ಆವಿಷ್ಕಾರ
ಪ್ಲಾಸ್ಟಿಕ್​ನಿಂದ ತೈಲ ತಯಾರಿಸುತ್ತಿರುವು
  • News18
  • Last Updated: August 21, 2019, 9:43 AM IST
  • Share this:
ಪ್ಲಾಸ್ಟಿಕ್​ ಕರಗದ ವಸ್ತುಗಳಲ್ಲಿ ಒಂದು. ದೇಶ- ವಿದೇಶದಲ್ಲಿ ಪ್ಲಾಸ್ಟಿಕ್​ ಬಳಕೆಯ ಹೆಚ್ಚಾಗಿದ್ದು ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಭೂಮಿಯಲ್ಲಿ ಮಾತ್ರವಲ್ಲದೆ ಚಂದಿರನ ಅಂಗಳದವರೆಗೆ ಪ್ಲಾಸ್ಟಿಕ್​ ವಸ್ತುಗಳ ಬಳಕೆಯನ್ನು ಕಾಣಬಹುದಾಗಿ. ಆದರೆ ಕರಗದ ವಸ್ತುವಾಗಿರುವ ಪ್ಲಾಸ್ಟಿಕ್​ನಿಂದ ಸಮಾಜಕ್ಕೆ ತೀರಾ ಅಡ್ಡಪರಿಣಾಮ ಬೀರುತ್ತದೆ. ಹೀಗಿರುವಾಗ ವಿಜ್ಞಾನಿಗಳು ನಾಶಪಡಿಸಲಾಗದ ಪ್ಲಾಸ್ಟಿಕ್​ನಿಂದ ಬೇರೆನಾದರು ಉಪಯೋಗವಾಗುತ್ತದೆಯೇ ಎಂಬ ಪ್ರಯೋಗ ನಡೆಯುತ್ತಿದೆ.

ಪ್ಲಾಸ್ಟಿಕ್​ ಹಾವಳಿಯನ್ನು ತಪ್ಪಿಸಿಕೊಳ್ಳಲು ಫ್ರಾನ್ಸ್​ ವಿಜ್ಞಾನಿಗಳು ಹೊಸದಾದ ಆವಿಷ್ಕಾರವೊಂದನ್ನು ಕಂಡು ಹಿಡಿದಿದ್ದಾರೆ. ದೇಶದೆಲ್ಲೆಡೆ ವ್ಯಾಪಿಸಿರುವ ಪ್ಲಾಸ್ಟಿಕ್​ ಅನ್ನು ಕರಗಿಸಿ ಇಂಧನವನ್ನು ತಯಾರಿಸುವ ಯೋಜನೆಯನ್ನು ಕೈಗೊಂಡಿದ್ದಾರೆ. ಈ ನೂತನ ಪ್ರಯೋಗದ ಕುರಿತು ವಿವರಿಸಿದ ಕ್ರಿಸ್ಟೋಫರ್​ ಕೊಸ್ಟೇಸ್​ ‘ನಾವು ಕಂಡು ಹಿಡಿದ ಯಂತ್ರದ ಮೂಲಕ ಪ್ಲಾಸ್ಟಿಕ್​ನಿಂದ ತೈಲವನ್ನು ಮಾರ್ಪಾಡು ಮಾಡಬಹುದಾಗಿದೆ. 450 ಡಿಗ್ರಿ ಸೆಲ್ಸಿಯಸ್​ ಶಾಖವಿಟ್ಟು, ಪ್ಲಾಸ್ಟಿಕ್​ ಅನ್ನು ಯಂತ್ರದೊಳಕ್ಕೆ ಹಾಕಬೇಕು. ಪ್ಲಾಸ್ಟಿಕ್​ ಕರಗಿದಂತೆ ದ್ರವ ರೂಪದ ತೈಲವನ್ನು ಬಿಡುಗಡೆ ಮಾಡುತ್ತದೆ. ಇದು ಶೇ. 65 ರಷ್ಟು ಡೀಸೆಲ್​ ಹೊಂದಿರುತ್ತದೆ. ಇದನ್ನು ಜನರೇಟೆರ್​ ಹಾಗೂ ಮೋಟಾರ್​​ ಬೋಟ್​ಗಳಿಗೆ ಬಳಕೆ ಮಾಡಬಹುದು ಎಂದು  ಹೇಳಿದ್ದಾರೆ.

ಇನ್ನು ಪ್ಲಾಸ್ಟಿಕ್​ ಕರಗಿಸುವ ಮೂಲಕ ಶೇ. 18ರಷ್ಟು ಪೆಟ್ರೋಲ್​ ಸಿಗುತ್ತದೆ ಇದನ್ನು ದೀಪ ಉರಿಸಲು ಬಳಸಬಹುದಾಗಿದೆ. ಶೇ. 10 ರಷ್ಟು ಗ್ಯಾಸ್​ ಹಾಗೂ ಶೇ.7 ರಷ್ಟು ಕ್ರೆಯಾನ್ಸ್​ ಮತ್ತು ಬಣ್ಣದ ಪೆನ್ಸಿಲ್ ತಯಾರಿಸಬಹುದಾದ ಕಾರ್ಬನ್​ ದೊರೆಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಹಿಮಾಚಲಪ್ರದೇಶದ ಪ್ರವಾಹದಲ್ಲಿ ಸಿಲುಕಿದ್ದ ನಟಿ ಮಂಜು ವಾರಿಯರ್​ ಸೇರಿ ಚಿತ್ರತಂಡದ ರಕ್ಷಣೆ

​ಫ್ರಾನ್ಸ್​​ ವಿಜ್ಞಾನಿಗಳು ತಯಾರಿಸಿದ ಈ ಮೆಷೀನ್​ 370 ಲಕ್ಷ ಬೆಲೆ ಬಾಳುತ್ತದೆ. ತಿಂಗಳಿಗೆ 10 ಟನ್​ ಪ್ಲಾಸ್ಟಿಕ್​ ತೈಲವನ್ನು ಮಾರ್ಪಾಡು ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ಇನ್ನು ಒಂದು ಕಿಲೋ ಪ್ಲಾಸ್ಟಿಕ್​ನಿಂದ 1 ಲೀ. ತೈಲ ದೊರೆಯುತ್ತದೆ. ಇದರ ಮೂಲಕ ಜನರೇಟರ್​ ಹಾಗೂ ಮೋಟಾರ್​ ಬಳಕೆಗಳಿಗೆ ಬಳಕೆ ಮಾಡಲಾಗುತ್ತದೆ. ಅಂತೆಯೇ, ವಿಜ್ಞಾನಿಗಳು ಕಂಡು ಹಿಡಿದ ಈ ನೂತನ ಪ್ರಯೋಗದಿಂದ ಪ್ಲಾಸ್ಟಿಕ್​ ಬಳಕೆಯನ್ನು ಕೊಂಚ ಕಡಿಮೆಗೊಳಿಸಬಹುದಾಗಿದೆ. ​
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ